Header Ads
Header Ads
Breaking News

ಶಿರಾಲಿ ಹೆದ್ದಾರಿ ಅಗಲೀಕರಣದಿಂದ ತೊಂದರೆ ಸರಕು ರಿಕ್ಷಾ ಯೂನಿಯನ್‌ನಿಂದ ಡಿಸಿಗೆ ಮನವಿ

ಭಟ್ಕಳ ತಾಲೂಕ ಶಿರಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು 30 ಮಿಟರ್ ಅಗಲಿಕರಣದಿಂದ ಸಾರ್ವಜನಿಕರಿಗೆ ಅನಾನುಕೂಲ ಉಂಟಾಗುವ ಹಿನ್ನೆಲೆಯಲ್ಲಿ ರಸ್ತೆಯನ್ನು ೪೫ ಮೀಟರ್ ಅಗಲಿಕರಣ ಮಾಡಬೇಕು ಎಂದು ಶಿರಾಲಿಯ ಸರಕು ರಿಕ್ಷಾ ಯೂನಿಯನ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.

ರಾಷ್ಟ್ರೀಯ ಹೆದ್ದಾರಿ ಅಗಲಿಕರಣದಿಂದ ಸರಕು ರಿಕ್ಷಾ ನಿಲ್ದಾಣವು ರಾಷ್ಟ್ರೀಯ ಹೆದ್ದಾರಿಗೆ ಭೂಸ್ವಾಧೀನವಾಗುವುದರಿಂದ ನಮ್ಮ ಆಟೋ ನಿಲ್ದಾಣಕ್ಕೆ ಸ್ಥಳವಿಲ್ಲವಾಗಿದೆ 30 ಮಿಟರ್ ಅಗಲಿಕರಣದಿಂದ ತೀರಾ ಇಕ್ಕಟ್ಟಾಗುತ್ತಿದ್ದು ಮುಂದೆ ಹೆದ್ದಾರಿ ಅಗಲಿಕರಣದಿಂದ ಅತಿವೇಗದ ವಾಹನ ಸಂಚಾರವಾಗುವುದರಿಂದ ಜನರ ಜೀವನಕ್ಕೆ ಸೂಕ್ತ ಸಂಪರ್ಕ ರಸ್ತೆ ಇಲ್ಲದೆ ನಮ್ಮ ರಿಕ್ಷಾ ನಿಲ್ದಾಣಕ್ಕೆ ಸ್ಥಳವಕಾಶವಿಲ್ಲವಾದಲ್ಲಿ ಜೀವನ ನಿರ್ವಹಣೆಗೆ ಸಮಸ್ಯೆ ಯಾಗುವುದಲ್ಲದೆ ಜನಜೀವನ ಅಸ್ತವ್ಯಸ್ತವಾಗುತ್ತದೆ ಅಲ್ಲದೆ ಅಫಘಾತ ಉಂಟಾಗಿ ಜನರ ಜೀವಕ್ಕೆ ಕುತ್ತುಂಟಾಗುತ್ತದೆ ಆದ್ದರಿಂದ ನಮ್ಮ ಮನವಿಯನ್ನು ಪರಿಶೀಲಿಸಿ ನಮಗೆ ಸೂಕ್ತ ರಿಕ್ಷಾ ನಿಲ್ದಾಣದ ಅವಕಾಶ ಮಾಡಿಕೊಟ್ಟು ಆ ಮೂಲಕ ಸಾರ್ವಜನಿಕ ಸೇವೆ ಮಾಡಿ ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳಲು ಸಹಕರಿಸಬೇಕು ಎಂದು ಮನವಿಯನ್ನು ನಿಡಿದರು ಈ ಸಂದರ್ಭದಲ್ಲಿ ರವಿಂದ್ರ ನಾಯ್ಕ, ಹೋನ್ನಪ್ಪ ಮೋಗೇರ್ ಜಗದೀಶ ಮೊಗೇರ್ ನಾಗಪ್ಪ ನಾಯ್ಕ, ಪರಮೇಶ್ವರ ನಾಯ್ಕ, ಮಂಜುನಾಥ ಜೋಗಿ, ಗಣೇಶ ಮೊಗೇರ್, ಮುಂತಾದವರು ಹಾಜರಿದ್ದರು.
ವರದಿ: ರಾಘವೇಂದ್ರ ಮಲ್ಯ ಭಟ್ಕಳ