Header Ads
Header Ads
Header Ads
Breaking News

ಶಿರಿಯಾರ ಗ್ರಾ.ಪಂ. :ಯಶಸ್ವಿ ಮರು ಚುನಾವಣೆ

ಕುಂದಾಪುರ: ಬರ್ಕಾಸ್ತುಗೊಂಡ ಶಿರಿಯಾರ ಗ್ರಾ.ಪಂ. ಆಡಳಿತ ಮಂಡಳಿಗೆ ಭಾನುವಾರ ಮರುಚುನಾವಣೆ ಯಶಸ್ವಿಯಾಗಿ ನಡೆಯಿತು. ಈ ಚುನಾವಣೆಯ ವಿಶೇಷವೆನೆಂದರೆ ಉಡುಪಿ ಜಿಲ್ಲೆಯ ಗ್ರಾ.ಪಂ. ಚುನಾವಣೆ ಇತಿಹಾಸದಲ್ಲೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರ ಬಳಸಲಾಗಿತ್ತು.

ಶಿರಿಯಾರ ಗ್ರಾಮಪಂಚಾಯತ್‌ನ 7 ಸ್ಥಾನಗಳು ಅವಿರೋಧವಾಗಿ ಆಯ್ಕೆಗೊಂಡಿದ್ದು, ಉಳಿದ ಆರು ಸ್ಥಾನಗಳಿಗೆ 13 ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು ಮೂರು ಬೂತ್‌ಗಳಲ್ಲಿ ಮತದಾನ ನಡೆದಿದ್ದು. 2695  ಮಂದಿ ಮತದಾರರಲ್ಲಿ ಒಟ್ಟು 1745 ಮಂದಿ ಮತಚಲಾಯಿಸಿದ್ದು ಒಟ್ಟು 64.7 ಶೇ ಮತದಾನವಾಗಿದೆ.

 

 

ಚುನಾವಣೆಯ ನಡೆಯುವ ಎಲ್ಲ ಬೂತ್‌ಗಳಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಎರ್ಪಡಿಸಲಾಗಿತ್ತು. ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆಯಿತು. ಮತಯಂತ್ರ ಬಳಕೆಯಾದ್ದರಿಂದ ಮತದಾನ ಪ್ರಕ್ರಿಯೆ ವೇಗವಾಗಿ ನಡೆಯಿತು.

ಸೆ.27 ಕ್ಕೆ ಮತ‌ಎಣಿಕೆ ಕಾರ್ಯ ನಡೆಯಲಿದ್ದು, 13 ಅಭ್ಯರ್ಥಿಗಳ ಭವಿಷ್ಯ ಅಂದು ನಿರ್ಧಾರವಾಗಲಿದೆ.

Related posts

Leave a Reply