Header Ads
Header Ads
Breaking News

ಶಿರೂರಿನಲ್ಲಿ ಬಲು ಅಪರೂಪದ “ಹೊಗೆ ಚಿತ್ರ” ಪ್ರದರ್ಶನ

ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಹೊಗೆ ಚಿತ್ರ ಪ್ರದರ್ಶನವು ಧಾರವಾಡದ ಧ್ಯಾನೇಶ್ವರಿನಗರದ ಹೊಗೆ ಚಿತ್ರ ಕಲಾವಿದ ಮಂಜುನಾಥ ಬಾರಗೇರ ಅವರಿಂದ ಇತ್ತೀಚಿಗೆ ಬೈಂದೂರಿನಲ್ಲಿ ನಡೆಯಿತು. ರಾಜ್ಯದ ಪ್ರಥಮ ಹೊಗೆ ಚಿತ್ರ ಕಲಾವಿದ ಎಂದು ಹೆಸರು ಪಡೆದಿರುವ ಮಂಜುನಾಥ ಬಾರಗೇರ ಅವರ ಪ್ರದರ್ಶನವು ನೋಡುಗರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಯಿತು.ಬಿಳಿ ಕಾಗದದ ಮೇಲೆ, ಬುಡ್ಡೆ ದೀಪದ ಅಗ್ನಿಜ್ವಾಲೆಯ ಮೂಲಕ ಹೊರಡುವ ಹೊಗೆಯನ್ನು ಸುತ್ತಲು ಹಾಯಿಸಿ ಮಸಿ ಕಟ್ಟಿಸುತ್ತಾರೆ. ಆ ಬಳಿಕ ಅದರ ಮೇಲೆ ರಚನಾ ಪರಿಕರಗಳನ್ನು ಬಳಸಿಕೊಂಡು ಕಲಾವಿದರು ಚಿತ್ರ ರಚನೆಯನ್ನು ಪ್ರೇಕ್ಷರ ಮುಂದೆಯೆ ನಡೆಸುತ್ತಾರೆ. ಹತ್ತು ನಿಮಿಷದ ಒಳಗಾಗಿ ಚಿತ್ರ ರಚನೆ ನಡೆಯುತ್ತದೆ.

ಹೊಗೆ ಚಿತ್ರ ಕಲಾವಿದ ಮಂಜುನಾಥ ಬಾರಗೇರ ಅವರು ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ, ಡಾ. ಏ.ಪಿ.ಜೆ ಆಬ್ಧುಲ್ ಕಲಾಂ, ಸಾಧು ಸಂತರ, ಶಿರೂರು ಜೆಸಿಐ ಅಧ್ಯಕ್ಷರಾದ ಪಾಂಡುರಂಗ ಅಳ್ವೆಗದ್ದೆ, ಹಾಗೂ ಉಡುಪಿಯ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ತದ್ರೂಪಗಳನ್ನು ಹೊಗೆಯಲ್ಲಿ ರಚಿಸಿ, ಚಿತ್ರಗಳ ಪ್ರದರ್ಶಿಸಿದರು. ಅಲ್ಲದೆ ಸಾಮಾಜಿಕ ಸಂದೇಶವನ್ನು ಚಿತ್ರ ರೂಪಕವಾಗಿ ನೀಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಸಭಾ ಕಾರ್ಯಕ್ರಮದಲ್ಲಿ ಮಂಜುನಾಥ ಅವರ ಅಪರೂಪದ ಕಲಾ ಪ್ರತಿಭೆಯನ್ನು ಗುರುತಿಸಿ ಜೆಸಿಐ ಶಿರೂರು ಸನ್ಮಾನಿಸಿತು.

Related posts

Leave a Reply