Header Ads
Header Ads
Breaking News

ಶಿರ್ತಾಡಿಯ ಅಳಿಯೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್‍ಕೆಜಿ ಯುಕೆಜಿ ತರಗತಿಗಳು ಆರಂಭ

ಮೂಡುಬಿದಿರೆ: ಸರಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಬಂಟ್ವಾಳದ ದಡ್ಡಲಕಾಡು ಸ.ಹಿ.ಉ.ಪ್ರಾ. ಶಾಲೆಯ ಅಭಿವೃದ್ದಿಯ ಪ್ರೇರಣೆ ಪಡೆದು ಮೂಡಬಿದಿರೆ ತಾಲೂಕಿನ ಶಿರ್ತಾಡಿಯ ಅಳಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಅಭಿವೃದ್ದಿ ಪಡಿಸಲು ಗ್ರಾಮಸ್ಥರ ಸಹಕಾರದೊಂದಿಗೆ ಶಾಲಾಭಿವೃದ್ದಿ ಸಮಿತಿ ತೀರ್ಮಾನ ಕೈಗೊಂಡಿದ್ದು ಮೊದಲ ಹಂತದಲ್ಲಿ ಎಲ್‍ಕೆಜಿ ಯುಕೆಜಿ ತರಗತಿಗಳನ್ನು ಆರಂಭಿಸಲಾಯಿತು.

ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ನೂತನವಾಗಿ ನಿರ್ಮಿಸಿದ ಎಲ್‍ಕೆಜಿ ತರಗತಿಯನ್ನು ಉದ್ಘಾಟಿಸಿದರು. ನಂತರ ಮಾತನಾಡಿ ಸರಕಾರಿ ಶಾಲೆಯನ್ನು ಉಳಿಸಲು ಎಲ್ಲರೂ ಸ್ವಾರ್ಥ ಬಿಟ್ಟು ಕಾರ್ಯಪ್ರವೃತ್ತರಾಗಬೇಕು. ಶಾಲೆ ಅಭಿವೃದ್ದಿ ಪಡಿಸಲು ಮುಂದೆ ಬರುವವರಿಗೆ ಸಹಕಾರ ನೀಡಬೇಕು. ಆಗ ಎಲ್ಲಾ ಧರ್ಮಿಯರ ಪವಿತ್ರ ದೇಗುಲವಾಗಿರುವ ಸರಕಾರಿ ಶಾಲೆ ಉಳಿಯಲು ಸಾಧ್ಯವಿದೆ ಎಂದರು. ಪೋಷಕರ ಕೈಯಲ್ಲಿ ಈ ಶಾಲೆ ಇದೆ, ಇದನ್ನು ಉಳಿಸಲು ಪೋಷಕರು ನಿರಂತರ ಪ್ರಯತ್ನವಹಿಸಬೇಕು, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ದೇಶದ ಉತ್ತಮ ನಾಗರೀಕನಾಗಿ ಮೂಡಿಬರಬೇಕು ಎನ್ನುವ ಕನಸು ನಮ್ಮೆಲ್ಲರದ್ದಾಗಬೇಕು ಎಂದರು.

ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿಯ ಉಪಾಧ್ಯಕ್ಷ್ಷ, ನ್ಯಾಯವಾದಿ ಮಯೂರ್ ಕೀರ್ತಿ, ಜಿ.ಪಂ.ಸದಸ್ಯೆ ಸುಜಾತ ಕೆ.ಪಿ, ತಾ.ಪಂ.ಸದಸ್ಯೆ ನಾಗವೇಣಿ, ವಾಲ್ಪಡಿ ಗ್ರಾ.ಪಂ.ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷ ಅರುಣ್ ಕುಮಾರ್, ಕೆ. ಕೆ. ಪೂಜಾರಿ, ನಿವೃತ್ತ ಮುಖ್ಯೋಪಾಧ್ಯಾಯ ಕೆ.ಎಸ್. ಹಿರ್ಗಾನ್, ರತ್ನಾಕರ ಹೆಗ್ಡೆ, ನಿತ್ಯಾನಂದ ಸಾಲ್ಯಾನ್ ಗಣೇಶ್ ಅಳಿಯೂರು, ಸುಕುಮಾರ್ ಜೈನ್, ಗ್ರಾ.ಪಂ.ಸದಸ್ಯೆ ಲೀಲಾ, ವಿಶಾಲಾಕ್ಷಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುಧಾಕರ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಕ್ಷ್ಮಣ್ ಸುವರ್ಣ, ನಾಗರತ್ನ, ಲೋಕೇಶ್ ಪೂಜಾರಿ ಹಾಜರಿದ್ದರು.

Related posts

Leave a Reply