Header Ads
Header Ads
Breaking News

ಶಿರ್ತಾಡಿಯ ಚರ್ಮರೋಗ ಪೀಡಿತ ಮಗು, ಬೆದ್ರ ಯುವಕರ ತಂಡದಿಂದ ಎರಡು ಲಕ್ಷ ರೂಪಾಯಿ ಕೊಡುಗೆ


ಜವನೆರ್ ಬೆದ್ರ ಸಂಘಟನೆಯ ಹಿಂದು ಯುವ ಸೇವಾ ವಿಭಾಗ, ತುಳುನಾಡ ಪೊರ್ಲು ಸೇವಾ ಟ್ರಸ್ಟ್, ನವಚೈತನ್ಯ ಇದರ ಸಹಯೋಗದಲ್ಲಿ ಮೂಡುಬಿದಿರೆಯ ಶಿರ್ತಾಡಿ ಪಡುಕೊಣಾಜೆಯ ಚರ್ಮರೋಗ ಪೀಡಿತ ಸುಪ್ರೀತ್ ಎಂಬ ಮಗುವಿಗೆ ರೂ ಎರಡು ಲಕ್ಷ ಸಹಾಯಧನವನ್ನು ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ಜವನೆರ್ ಬೆದ್ರದ ಅಮರ್ ಕೋಟೆ, ಇಂತಹ ಸೇವೆಯು ಸದಾ ನೆನಪಿನಲ್ಲಿ ಉಳಿಯುವಂತಾದ್ದು. ನೊಂದವರಿಗೆ ಸೇವೆಯ ಮುಖಾಂತರ ಧ್ವನಿಯಾಗುವುದು ಪುಣ್ಯದ ಕೆಲಸ. ಸಮಾಜ ಸೇವೆಗೆ ಅಣಿಯಾಗುವ ಸಂದರ್ಭ, ಅದರ ಉದ್ದೇಶವನ್ನು ಫೇಸ್‌ಬುಕ್, ವಾಟ್ಸ್‌ಅಪ್‌ನಲ್ಲಿ ಹಾಕಿದಾಗ ಕೇವಲ ಲೈಕ್ ಒತ್ತಿದರೆ ಸಾಲದು, ಸಮಸ್ಯೆ ಇರುವಲ್ಲಿ ತೆರಳಿ ಸೇವೆ ಮಾಡಿದರೆ ಮಾತ್ರ, ಮುಂದೆ ಮತ್ತಷ್ಟು ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿಂದು ಯುವ ಸೇವಾ ವಿಭಾಗದ ಪ್ರೇಮ್ ಪಾವೂರು, ತುಳುನಾಡ ಪೊರ್ಲು ಸೇವಾ ಟ್ರಸ್ಟ್‌ನ ನವೀನ್, ನವ ಚೈತನ್ಯ ತಂಡದ ಭರತ್ ವೇದಿಕೆಯಲ್ಲಿದ್ದರು. ಸುಪ್ರೀತ್‌ನ ಹೆತ್ತವರಾದ ರಾಜೇಶ್ ಅಮಿತಾ ದಂಪತಿ ಉಪಸ್ಥಿತರಿದ್ದರು.

Related posts

Leave a Reply