Header Ads
Header Ads
Header Ads
Breaking News

ಶಿರ್ವದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಶಾಖೆ ಸ್ಥಳಾಂತರ ಮಹಿಳೆಯರ ಸ್ವಾವಲಂಬನೆಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ ಶಿರ್ವದಲ್ಲಿ ಎಂ.ಎನ್.ರಾಜೇಂದ್ರಕುಮಾರ್ ಹೇಳಿಕೆ

41 ವರ್ಷಗಳ ಸೇವಾ ಇತಿಹಾಸ ಹೊಂದಿರುವ ಶಿರ್ವದ ಎಸ್‌ಸಿಡಿಸಿಸಿ ಬ್ಯಾಂಕ್ ಶಾಖೆ ಗ್ರಾಹಕರ ಅನುಕೂಲಕ್ಕಾಗಿ ಮಧ್ಯಮ ವರ್ಗದ ಮಹಿಳೆಯರ ಸ್ವಾವಲಂಬನೆಯಲ್ಲಿ ಅಪಾರ ಕೊಡುಗೆ ನೀಡಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಅವರು ಶಿರ್ವ ಶಾಖೆಯು ಶಿರ್ವದ ಮುಖ್ಯರಸ್ತೆಯಲ್ಲಿರುವ ಶ್ರೀಧರ ಪೂಜಾರಿಯವರ “ಬಹರೈನ್ ಟವರ್”ನ ನೆಲ ಅಂತಸ್ತಿಗೆ ಸ್ಥಳಾಂತರಗೊಂಡ ಶುಭಾವಸರದಲ್ಲಿ ಜ್ಯೋತಿ ಪ್ರಜ್ವಲನದ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 102 ಶಾಖೆಗಳನ್ನು ಹೊಂದಿದ್ದು, ಶಿರ್ವ ಶಾಖೆಯು ಗ್ರಾಮೀಣ ಪ್ರದೇಶದ ಪ್ರಥಮ ಹವಾನಿಯಂತ್ರಿತ ಶಾಖೆಯಾಗಿದ್ದು, 23.5 ಕೋಟಿ ಠೇವಣಿ ಹೊಂದಿದೆ.ಅಲ್ಲದೆ 7.72ಕೋಟಿ ಸಾಲ ನೀಡಿದೆ. ನವೋದಯ ಸಂಘದ ಸದಸ್ಯರಿಗೆ ಸೊನ್ನೆ ಶೇಕಡ ಬಡ್ಡಿದರದಲ್ಲಿ ಸಾಲದ ವ್ಯವಸ್ಥೆಯಿದೆ. ಸರಕಾರ ಸಾಲಗಾರರಿಗೆ 50 ಶೇಕಡ ಸಾಲ ಮನ್ನಾ ಘೋಷಿಸಿದ್ದು, ಈಗಾಗಲೇ ಮರುಪಾವತಿ ಮಾಡಿದವರಿಗೂ ಈ ಸೌಲಭ್ಯ ನೀಡುವಂತೆ ಸರಕಾರಕ್ಕೆ ಮನವಿ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ “ಅಮ್ಮ” ನವೋದಯ ಸಂಘ ಹಾಗೂ ಬೆಳಪು ನವೋದಯ ಒಕ್ಕೂಟದ ಉದ್ಘಾಟನೆ ಮಾಡಿ, ನವೋದಯ ಗುಂಪುಗಳ ಸರ್ವಸದಸ್ಯರಿಗೂ ಸಮವಸ್ತ್ರ ವಿತರಿಸಲಾಯಿತು. ಕಟ್ಟಡದ ಮಾಲಕಿ ಮುತ್ತು ಪೂಜಾರ್‍ತಿ ಹಾಗೂ ಶಾಖಾ ವ್ಯವಸ್ಥಾಪಕ ಜಯಕುಮಾರ್‌ರವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಪು ಶಾಸಕ,ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸಹಕಾರಿ ಕ್ಷೇತ್ರವು ಮಹಿಳೆಯರನ್ನು ಸಶಕ್ತರನ್ನಾಗಿ ರೂಪಿಸಿದೆ. ರಾಜ್ಯ ಸರಕಾರವು 8164 ಕೋಟಿ ರೂ.ಸಹಕಾರಿ ಸಾಲ ಮನ್ನಾ ಯೋಜನೆಗೆ ನೀಡಿದೆ. ಹಾಲು ಉತ್ಪಾದಕರಿಗೂ ಲೀಟರ್ ಒಂದರ ತಲಾ 5 ರೂ ಯಂತೆ ಸಬ್ಸಿಡಿಗಾಗಿ ಕಳೆದ 4 ವರ್ಷಗಳಲ್ಲಿ ಉಡುಪಿ ಜಿಲ್ಲೆಗೆ 114 ಕೋಟಿ ರೂ ನೀಡಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಸಹಕಾರ ನೀಡುವ ಕಾರ್ಯ ನಿರಂತರವಾಗಿ ನಡೆದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಸಂಸ್ಥೆಯ ನಿರ್ಧೇಶಕ ದೇವಿಪ್ರಸಾದ್ ಶೆಟ್ಟಿ, ಶಿರ್ವ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗ್ರೆಗರಿ ಕೊನ್ರಾರ್ಡ್ ಕಸ್ತಲಿನೊ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಎಸ್, ಹಿರಿಯ ಸಹಕಾರಿ ಧುರೀಣ ಕೃಷ್ಣರಾಜ ಸರಳಾಯ,ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ವಾರೀಜಾ ಪೂಜಾರ್‍ತಿ, ಜಿಲ್ಲಾ ಪಂಚಾಯತ್ ಸದಸ್ಯ ವಿಲ್ಸನ್ ರೊಡ್ರಿಗಸ್, ತಾಲೂಕು ಪಂಚಾಯತ್ ಸದಸ್ಯೆ ಗೀತಾ ವಾಗ್ಲೆ, ಸಹಕಾರಿ ಕ್ಷೇತ್ರದ ಮುಂದಾಳು ಜಯಕರ ಶೆಟ್ಟಿ ಇಂದ್ರಾಳಿ,ಲಕ್ಷ್ಮೀನಾರಾಯಣ ರಾವ್ ಉಡುಪಿ,ಎಂ,ವಾದಿರಾಜ ಶೆಟ್ಟಿ,ಸದಾಶಿವ ಕರ್ಕೇರಾ,ಬಿ.ರಾಜೇಶ್ ರಾವ್,ರಮೇಶ್ ಶೆಟ್ಟಿ, ಶಿವಾಜಿ ಎಸ್.ಸುವರ್ಣ,ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು

ವರದಿ: ಸುರೇಶ್ ಎರ್ಮಾಳ್ ಪಡುಬಿದ್ರಿ

Related posts

Leave a Reply