Header Ads
Header Ads
Breaking News

ಶಿರ್ವ ಜ್ಯೂನಿಯರ್ ಕಾಲೇಜು ದತ್ತು ಸ್ವೀಕಾರ ಕಾರ್ಯಕ್ರಮ : ಸಾಮಾಜಿಕ ಜಾಲತಾಣದ ಮೂಲಕ ಹರಿದು ಬಂದ ಆರ್ಥಿಕ ನೆರವು

ಶಿರ್ವದಲ್ಲಿರುವ ಹಿಂದೂ ಜ್ಯೂನಿಯರ್ ಕಾಲೇಜನ್ನು ಹಳೆ ವಿದ್ಯಾರ್ಥಿ ಸಂಘದವರು ದತ್ತು ಸ್ವೀಕರಿಸಿದ್ದಾರೆ. ಆ ಮೂಲಕ ಬಡ ಮಕ್ಕಳಿಗೂ ಮೌಲ್ಯಾಧಾರಿತ ಶಿಕ್ಷಣ ಪಡೆಯಲು ಅವಕಾಶ ನೀಡುವ ಉದ್ದೇಶವಾಗಿದ್ದು, ಈ ಸಮಜೋಮುಖಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಮೂಲಕ ಬೇಕಾದ ಮೂರು ಲಕ್ಷ ರೂಪಾಯಿ ಹರಿದು ಬಂದಿದೆ ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಕುತ್ಯಾರ್ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.ಕಾಪು ಪ್ರಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಇದೀಗ ನಮ್ಮ ಇತಿಮಿತಿಯಲ್ಲಿ ತಂದೆ-ತಾಯಿ ಇಲ್ಲದ ಮಕ್ಕಳು ಹಾಗೂ ತಂದೆ ಅಥವಾ ತಾಯಿ ಇಲ್ಲದ ಮಕ್ಕಳನ್ನು ಆಯ್ಕೆ ಮಾಡಿ ದತ್ತು ಪಡೆಯುವುದಾಗಿದ್ದು, ಇಷ್ಟರಲ್ಲೇ 16 ಅರ್ಹ ವಿದ್ಯಾರ್ಥಿಗಳು ನಮಗೆ ದೊರಕಿದ್ದಾರೆ. ಇವರ ವಾರ್ಷಿಕ ಶಾಲಾ ಫೀಜ್‌ನ್ನು ನಮ್ಮ ಸಂಸ್ಥೆಯ ಮೂಲಕ ಭರಿಸಲಿದ್ದೇವೆ, ಈ ಪ್ರಕೃಯೆ ದ್ವಿತೀಯ ಪಿಯೂಸಿ ವರೆಗೂ ಮುಂದುವರಿಯಲಿದೆ, ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನೂ ನೀಡಲಿದ್ದು, ಈ ಅರ್ಥಪೂರ್ಣ ಕಾರ್ಯಕ್ರಮ ಶಿರ್ವ ಹಿಂದೂ ಜೂನಿಯರ್ ಕಾಲೇಜಿನ ಸಭಾಂಗಣದಲ್ಲಿ ಜುಲಾಯಿ 13ರಂದ್ದು ಮಾತೃ ಸಂಸ್ಥೆಯ ಮುಂಬೈ ಸಮಿತಿ ಅಧ್ಯಕ್ಷ ಸೂಡ ಹೇಮನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ, ಮುಖ್ಯ ಅಥಿತಿಗಳಾಗಿ ವಿ. ಸುಬ್ಬಯ್ಯ ಹೆಗ್ಡೆ, ಪಿ.ಕಿಶನ್ ಹೆಗ್ಡೆ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.ಸುದ್ಧಿಗೋಷ್ಠಿಯಲ್ಲಿ ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *