

ಸಿನಿರಂಗದಲ್ಲಿ ಅದೆಷ್ಟೋ ಯುವ ಪ್ರತಿಭೆಗಳು ಪಾದಾರ್ಪಣೆ ಮಿಂಚುತ್ತಿದ್ದಾರೆ. ಈ ಪಾಲಿಗೆ ಹೊಸ ಸೇರ್ಪಡೆ ಎಂದರೆ ಕರಾವಳಿ ಮೂಲದ ಪ್ರತಿಭೆ ಯಶ ಶಿವಕುಮಾರ್. ಹರಿಪ್ರಸಾದ್ ಜಯಣ್ಣ ಪ್ರೊಡಕ್ಷನ್ ಅಡಿಯಲ್ಲಿ ತಯಾರಾದ ಪದವಿಪೂರ್ವ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ ಯಶ ಶಿವಕುಮಾರ್ ಇದೀಗ ನಟ ಶಿವರಾಜ್ ಕುಮಾರ್ ಅಭಿನಯದ ‘ಶಿವಪ್ಪ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಒಂದು ವಿಶೇಷ ವರದಿ ಬರುತ್ತಿದೆ ನೋಡಿ.
ಯಶ ಶಿವಕುಮಾರ್. ಸ್ಯಾಂಡಲ್ವುಡ್ಗೆ ಪಾದಾರ್ಪಣೆಯನ್ನು ಮಾಡಿ ಮಿಂಚುತ್ತಿರುವ, ಭರವಸೆ ಮೂಡಿಸುತ್ತಿರುವ ಪ್ರತಿಭೆ. ಹರಿಪ್ರಸಾದ್ ಜಯಣ್ಣ ಪ್ರೊಡಕ್ಷನ್ ಅಡಿಯಲ್ಲಿ ತಯಾರಾದ ಪದವಿಪೂರ್ವ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ ಯಶ ಶಿವಕುಮಾರ್ ಅವರು ಇದೀಗ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಶಿವಪ್ಪ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನದ ಕಮರ್ಷಿಯಲ್ ಸಿನಿಮಾದಲ್ಲಿ ಅಂಜಲಿ ನಟಿಸುತ್ತಿದ್ದು ಅವರು ಜೊತೆಗೆ ಯಶ ಶಿವಕುಮಾರ್ ಕೂಡ ನಾಯಕಿಯಾಗಿ ಸೇರಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಕೃಷ್ಣ ಸಾರ್ಥಕ್ ನಿರ್ಮಾಣ ಮಾಡುತ್ತಿರುವ ಶಿವಪ್ಪ ಸಿನಿಮಾದಲ್ಲಿ ವಿಜಯ್ ಮಿಲ್ಟನ್ ಮೊದಲ ಬಾರಿಗೆ ಕನ್ನಡ ಸಿನಿಮಾ ನಿರ್ದೇಶಿಸುತ್ತಿದ್ದಾರೆ, ಕಥೆಯನ್ನು ವಿಜಯಮಿಲ್ಟನ್ ಬರೆದಿದ್ದಾರೆ. ಡಾಲಿ ಧನಂಜಯ್ ಮತ್ತು ಶಿವರಾಜ್ ಕುಮಾರ್ ಟಗರು ನಂತರ ಮತ್ತೆ ಒಂದಾಗಿದ್ದಾರೆ. ಯಶ ಶಿವಕುಮಾರ್ ಅವರು ಧನಂಜಯ್ಗೆ ನಾಯಕಿಯಾಗಲಿದ್ದಾರೆ.
ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಐದು ವರ್ಷಗಳ ನಂತರ ಅಂಜಲಿ ಮತ್ತೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಉಮಾಶ್ರಿ ಮತ್ತು ಶಶಿಕುಮಾರ್ ಅವರು ಕೂಡ ಪ್ರಮುಖ ತಾರಾಗಣದಲ್ಲಿದ್ದಾರೆ. ಈ ಸಿನಿಮಾಗೆ ಅನೂಪ್ ಸಿಳೀನ್ ಅವರು ಸಂಗೀತ ನೀಡಿದ್ದಾರೆ. ನವೆಂಬರ್ 23ರಿಂದ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. 8 ದಿನಗಳ ಶೂಟಿಂಗ್ ನಲ್ಲಿ 23 ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಡಿಸೆಂಬರ್ 8ರಿಂದ ಮತ್ತೊಂದು ಹಂತದ ಶೂಟಿಂಗ್ ಕೂಡ ಆರಂಭಗೊಂಡಿದೆ. ಈ ಮೂಲಕ ಕರಾವಳಿ ನಂಟಿನ ಮತ್ತೊಂದು ಪ್ರತಿಭೆಯು ಸ್ಯಾಂಡಲ್ವುಡ್ನಲ್ಲಿ ಮಿಂಚಲಿದೆ.