Header Ads
Breaking News

ಶಿಷ್ಯತ್ವ ಸ್ವೀಕಾರಕ್ಕೆ ಪರ್ಯಾಯ ಪಲಿಮಾರು ಶ್ರೀಗಳ ನಿರ್ಧಾರ

ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಶಿಷ್ಯತ್ವ ಸ್ವೀಕಾರ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನಾಗಿ ಪಲಿಮಾರು ಮೂಲಮಠದ ಯೋಗ ದೀಪಿಕಾ ಗುರುಕುಲದಲ್ಲಿ ವೇದ ವಿದ್ಯಾರ್ಥಿಯಾಗಿರುವ ಶೈಲೇಶ್ ಉಪಾಧ್ಯಾಯ ಅವರನ್ನು ತಮ್ಮ ಶಿಷ್ಯರನ್ನಾಗಿ ನೇಮಿಸಿಕೊಳ್ಳಲು ಪರ್ಯಾಯ ಶ್ರೀಗಳು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಶೈಲೇಶ್ ಉಪಾಧ್ಯಾಯ ಅವರು ಮೂಲತಃ ಕೊಡವೂರು ಕಂಬಳಕಟ್ಟದವರಾಗಿದ್ದಾರೆ. ಮೂಲತಃ ಶಿಬರೂರಿನವರಾದ ವಿದ್ಯಾಧೀಶ ತೀರ್ಥರು ತಮ್ಮ ಗುರುಗಳಾದ ವಿದ್ಯಾಮಾನ್ಯ ಶ್ರೀಗಳವರಿಂದ 1974ರಲ್ಲಿ ಸನ್ಯಾಸ ಸ್ವೀಕಾರ ಮಾಡಿಕೊಂಡರು. ಹಲವಾರು ಧಾರ್ಮಿಕ ಚಟುವಟಿಕೆಗಳ ಮೂಲಕವೇ ಹೆಸರಾಗಿರುವ ವಿದ್ಯಾಧೀಶ ತೀರ್ಥ ಶ್ರೀಪಾದರು ತಮ್ಮ ಎರಡನೇ ಪರ್ಯಾಯ ಅವಧಿಯಲ್ಲಿ ಶ್ರೀ ಕೃಷ್ಣ ಪೂಜೆಯ ಕೈಂಕರ್ಯವನ್ನು ನಡೆಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *