Header Ads
Header Ads
Breaking News

ಶೀಘ್ರ ಮತ್ತು ಸೂಕ್ತ ಚಿಕಿತ್ಸೆಯಿಂದ ಪಾರ್ಶ್ವವಾಯು ಮತ್ತು ಅಂಗ ವೈಕಲ್ಯ ತಡೆಯಬಹುದು

 

ಪಾರ್ಶ್ವವಾಯು / ಪಕ್ಷವಾತವು ಅಂಗ ವ್ಯಕಲ್ಯ ಆಗಲು ಪ್ರಥಮ ಕಾರಣ ಮತ್ತು ಮನುಷ್ಯನ ಸಾವಿಗೆ ಮೂರನೇ  ಪ್ರಮುಖ ಕಾರಣವಾಗಿದೆ.ಪಾರ್ಶ್ವವಾಯು – ಇದರಲ್ಲಿ ಎರಡು ಪ್ರಮುಖ ವಿಧಗಳಿವೆ, ಅವೆಂದರೆ:ಇಶ್ಚೇಮಿಕ್  ಸ್ಟ್ರೋಕ್ :  ತತ್ಕಾಲದ ರಕ್ತದ ಕೊರತೆಯಿಂದ ಉಂಟಾಗುವ ಪಾರ್ಶ್ವವಾಯು.(ಸಂಭವಿಸುವ ಪಾರ್ಶ್ವವಾಯುಗಳಲ್ಲಿ 80% -ಪ್ರತಿಶತಿ-) ಮತ್ತು  ಹಮೆರೇಜಿಕ್ ಸ್ಟ್ರೋಕ್, ಇವೆರಡು ಕೂಡ ಮನುಷ್ಯನ ಅಸಹಾಯಕತೆಗೆ / ಅಂಗ ವ್ಯಕಲ್ಯಕ್ಕೆ ಹಾಗು ಸಾವಿಗೆ ಕಾರಣವಾಗುತ್ತದೆ.

ಇಶ್ಚೇಮಿಕ್  ಸ್ಟ್ರೋಕ್ – ಮಿದುಳಿಗೆ ರಕ್ತ ಸಂಚಾರವಾಗುವ ಅಪಧಮನಿ/ನರದಲ್ಲಿ, ಬ್ಲಾಕ್ / ಅಡಚಣೆ (ಮುಚ್ಚುವಿಕೆ) ಉಂಟಾಗಿ , ಬ್ರೈನ್ ಸೆಲ್ಸ್ (ನ್ಯೂರೊನ್ಸ್) ಗಳಿಗೆ ಬೇಕಾಗುವ ಆಮ್ಲಜನಕ ಮತ್ತು ಗ್ಲುಕೋಸ್ ನ ಅಭಾವದಿಂದ , ಮಿಲಿಯ ಗಟ್ಟಲೆ  ನ್ಯೂರೊನ್ಸ್ ಗಳ ಸಾವು ಸಂಭವಿಸುತ್ತದೆ ಇದರಿಂದ  ಪಾರ್ಶ್ವವಾಯು / ಪಕ್ಷವಾತ  ಉಂಟಾಗುತ್ತದೆ.

ಪಾರ್ಶ್ವವಾಯು ಸಂಭವಿಸಿದ ವ್ಯಕ್ತಿಯ – ಬ್ಲಾಕ್ / ಅಡಚಣೆ ಉಂಟಾದ ಅಪಧಮನಿಯನ್ನು ಅತೀ ಶೀಘ್ರವಾಗಿ ಅಂದರೆ 4.30 ಗಂಟೆಯ ಒಳಗಾಗಿ ರಿ-ಓಪನ್ ಮಾಡುವ ಮುಖಾಂತರ (ಥ್ರಂಬೋಲಿಟಿಕ್  ಥೆರಪಿ ), ಅಪಧಮನಿಯಲ್ಲಿ ಮಿದುಳಿಗೆ ರಕ್ತದ ಹರಿವನ್ನು ಸರಾಗವಾಗಿ ಹರಿಯುವಂತೆ ಮಾಡಿ , ಮುಂದೆ ಮಿದುಳಿಗೆ ಆಗುವಂತಹ ತೊಂದರೆಯನ್ನು ತಪ್ಪಿಸಬಹುದು ಮತ್ತು ಅಂಗ ವ್ಯಕಲ್ಯ  ಪ್ರಮಾಣವನ್ನು ತಡೆಹಿಡಿಯಬಹುದು.

ಪಾರ್ಶ್ವವಾಯು ಸಂಧರ್ಭದಲ್ಲಿ ಪ್ರತೀ ಕ್ಷಣವೂ ಬಹಳ ಪ್ರಾಮುಖ್ಯ , ಒಂದು ಕ್ಷಣದ ರಕ್ತದ ಅಡಚಣೆಯು ಮಿಲಿಯ ಗಟ್ಟಲೆ ಬ್ರೈನ್ ಸೆಲ್ಸ್ ಗಳ / ನ್ಯೂರೊನ್ಸ್ ಗಳ ಸಾವಿಗೆ ಕಾರಣವಾಗುತ್ತವೆ. ಎಷ್ಟು ಶೀಘ್ರವಾಗಿ ನಾವು ಪಾರ್ಶ್ವವಾಯುವಿಗೆ ತುತ್ತಾದ ರೋಗಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿ, ಬ್ಲಾಕ್ ಆದ ಅಪಧಮನಿಯನ್ನು ಸರಿಪಡಿಸಿ  ರಕ್ತದ ಸಂಚಾರವನ್ನು ಸುಗಮಗೊಳಿಸಿದಷ್ಟು , ಅಷ್ಟು ಶೀಘ್ರವಾಗಿ ರೋಗಿಯು ಪಾರ್ಶ್ವವಾಯು ನಿಂದ ರಿಕವರಿ / ಗುಣಮುಖರಾಗುವರು. ರೋಗಿಗಳು 60 ನಿಮಿಷ ದಿಂದ 90 ನಿಮಿಷದ ಒಳಗೆ ಚಿಕಿತ್ಸೆ ಪಡೆದಲ್ಲಿ ಉತ್ತಮ ಫಲಿತಾಂಶ ಸಾಧ್ಯ.

ಕೊನೆಯದಾಗಿ – ಯಾವುದೇ ಕಾರಣಕ್ಕೂ ಸಮಯ ವ್ಯರ್ಥ ಮಾಡಬೇಡಿರಿ, ಸಮಯದ ವ್ಯರ್ಥ – ಮಿದುಳಿನ ವ್ಯರ್ಥಕ್ಕೆ/ತೊಂದರೆಗೆ ಕಾರಣವಾಗಬಹುದು. ಆದಷ್ಟು ಬೇಗ ಸ್ಟ್ರೋಕ್ / ಪಾರ್ಶ್ವವಾಯು ರೋಗಿಯನ್ನು ಸಮೀಪದ  ಸಿ.ಟಿ ಸ್ಕ್ಯಾನ್ ಸೌಲಭ್ಯ ಇರುವ ಆಸ್ಪತ್ರೆಗೆ ಸೇರಿಸಿ, ಕಾರಣ ಕಂಡುಹಿಡಿದು, ಸೂಕ್ತ ಚಿಕಿತ್ಸೆ ಪಡೆಯಿರಿ, ಇದರಿಂದ ಜೀವನ ಪರ್ಯಂತ ಉಂಟಾಗುವ ಅಂಗ ವ್ಯಕಲ್ಯ   ಮತ್ತು ಇನ್ನೊಬ್ಬರನ್ನು ಅವಲಂಬಿಸಿ /ಅವರ ಸಹಾಯದಿಂದ ಜೀವಿಸುವುದರಿಂದ  ಮುಕ್ತಿ ಹೊಂದಬಹುದು ಮತ್ತು ಉತ್ತಮ ಆರೋಗ್ಯವನ್ನು ಪಡೆಯಬಹುದು.

ಡಾ. ರಾಜೇಶ್ ಶೆಟ್ಟಿ, ಎಂ.ಡಿ , ಡಿ.ಎಂ (ನ್ಯೂರೊಲೊಜಿ), ಫಸ್ಟ್ ನ್ಯೂರೋ ಆಸ್ಪತ್ರೆ , ಮಂಗಳೂರು.

Related posts

Leave a Reply