Header Ads
Header Ads
Breaking News

ಶೀತಲಿಕೃತ ಶವ ರಕ್ಷಣಾಯಂತ್ರ ಹಸ್ತಾಂತರ : ನಾಗರೀಕ ಸಮಿತಿಯ ಉಚಿತ ಸೇವಾ ಕಾರ್ಯಕ್ಕೆ ಕೊಡುಗ

ವಿದ್ಯುತ್ ಚಾಲಿತ ಶೀತಲಿಕೃತ ಶವ ರಕ್ಷಣಾ ಯಂತ್ರ ಹಾಗೂ ಶವ ಸ್ನಾನ ಮಾಡಿಸಲು ಅನೂಕಲಕರವಾದ ಸಾಧನವನ್ನು ಭಾರತ್ ಡೆವಲಪ್ಪರಸ್ ಇದರ ಮಾಲಿಕರಾದ ಪ್ರಪುಲ್ಲಚಂದ್ರ ರಾವ್ ಅವರು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಉಚಿತ ಸೇವಾ ಕಾರ್ಯಕ್ಕೆ ಕೊಡುಗೆಯಾಗಿ ನೀಡಿದರು.ಯಂತ್ರ ಹಸ್ತಾಂತರ ಕಾರ್ಯಕ್ರಮವು ಸಮಿತಿ ಕಛೇರಿಯ ವಠಾರದಲ್ಲಿ ಜರುಗಿತು.ಕಳೆದ ವರ್ಷ ಉದ್ಯಮಿ ಮುರಳಿಧರ್ ಬಲ್ಲಾಳ್ ಅವರು ಉಚಿತ ಶವ ಸಂರಕ್ಷಣಾ ಯಂತ್ರವನ್ನು ನೀಡಿದ್ದರು.

ಉಚಿತ ಶವ ಯಂತ್ರದ ಸೇವಾ ವಿಸ್ತಾರವನ್ನು ಉಡುಪಿ ತಾಲೂಕಿನ ವ್ಯಾಪ್ತಿಯಿಂದ ಕಾಪು, ಹೆಬ್ರಿ, ಬ್ರಹ್ಮಾವರ ತಾಲೂಕಿಗಳಿಗೆ ವಿಸ್ತರಿಸಿದಾಗ, ಯಂತ್ರದ ಬೇಡಿಕೆ ಹೆಚ್ಚಾಯಿತು. ಸಮಿತಿಯ ಮೌಖಿಕ ಮನವಿಗೆ ಸ್ಪಂದಿಸಿದ ಭಾರತ್ ಡೆವಲ್ಪರ್ಸ್ ಇದರ ಮಾಲೀಕರಾದ ಪ್ರಪುಲ್ಲಚಂದ್ರ ರಾವ್ ಅವರು 90 ಸಾವಿರ ಮೌಲ್ಯದ ಶವ ರಕ್ಷಣಾ ಯಂತ್ರವನ್ನು ಕೊಡುಗೆಯಾಗಿ ನೀಡಿದರು. ಅದರ ಜೊತೆಯಲ್ಲಿ ಶವ ಸ್ನಾನ ಮಾಡಿಸಲು ಅನೂಕಲರವಾದ ರೀತಿಯಲ್ಲಿ ತಯಾರಿಸಿದ 16 ಸಾವಿರ ಬೆಲೆಯ ಟೇಬಲನ್ನು ನೀಡಿದರು. ಇವಾಗ ನಾಗರೀಕ ಸಮಿತಿಯಿಂದ ಎರಡು ಶವ ಯಂತ್ರಗಳು ಸಾರ್ವಜನಿಕ ಸೇವೆಗೆ ಉಚಿತವಾಗಿ ಲಭ್ಯ ಇದೆ. ಸಾಗಾಟದ ವೆಚ್ಟವನ್ನು ಬಳಕೆದಾರರು ಭರಿಸಬೇಕಾಗುತ್ತದೆ. ಹಸ್ತಾಂತರ ಕಾರ್ಯಕ್ರಮದಲ್ಲಿ ಉದ್ಯಮಿ ಮುರಳಿಧರ ಬಲ್ಲಾಳ್, ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ ಶಿರೂರು, ಡೇವಿಡ್ ಉಪಸ್ಥಿತರಿದ್ದರು.

Related posts

Leave a Reply