Header Ads
Header Ads
Breaking News

ಶುಚಿತ್ವದ ಸಂದೇಶ ಸಾರುತ್ತಿರುವ ಮಹಾಮಸ್ತಕಾಭಿಷೇಕ

 

 

ಧರ್ಮಸ್ಥಳ:  ದೇಹ ಕಲ್ಯಾಣದಿಂದ ದೇಶ ಕಲ್ಯಾಣ ತನ್ಮೂಲಕ ಸ್ವಾಸ್ಥ್ಯ ಹಾಗೂ ಇದು ಕಸ ಮುಕ್ತ ಪ್ರದೇಶ ಇಲ್ಲಿ ಕಸ ಹಾಕಬೇಡಿ, ಸ್ವಚ್ಛ ಭಾರತ ನಿರ್ಮಾಣ ರಸ್ತೆಯ ಮೇಲೆ ಕಸ ಚೆಲ್ಲಬೇಡಿ. ಈ ಸಂದೇಶ ಹೊತ್ತ ಫಲಕಗಳು ಧರ್ಮಸ್ಥಳದಲ್ಲಿ ಸ್ವಚ್ಚ ಧರ್ಮಸ್ಥಳದ ಕುರಿತು ಜಾಗೃತಿ ಮೂಡಿಸುತಿವೆ. ಸ್ವಚ್ಚತೆ ಎನ್ನುವುದು ಸಂಸ್ಕøತಿಯ ಪ್ರತೀಕ ಮನೆ – ಮನಗಳೊಂದಿಗೆ ಅಂತರಂಗ ಮತ್ತು ಬಹಿರಂಗ ಶುಚಿತ್ವಗೊಳ್ಳಬೇಕು ಎನ್ನುವ ಸಂದೇಶ ಸಾರುತ್ತಿದೆ ಈ ಬಾರಿಯ ಧರ್ಮಸ್ಥಳದ ಮಹಾಮಸ್ತಕಾಭಿಷೇಕ.

ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವ ಫೆ.8 ರಿಂದ ಪ್ರಾರಂಭಗೊಂಡಿದ್ದು ಇದಕ್ಕಾಗಿ ಸುಮಾರು 50 ಮಂದಿ ಸ್ವಚ್ಛತಾ ಕಾರ್ಯವನ್ನು ನಡೆಸುತ್ತಿದ್ದಾರೆ. ತ್ಯಾಗಿ ಭವನ, ಪಂಚಮಹಾವೈಭವ ವೇದಿಕೆ, ಅಮೃತವರ್ಷಿಣಿ ಸಭಾಂಗಣ, ಮುಖ್ಯರಸ್ತೆ ,ರಥಬೀದಿ,  ಮೆರವಣಿಗೆಯ ಹಾದಿ, ಶೌಚಾಲಯಗಳು ಹೀಗೆ ಧರ್ಮಸ್ಥಳದ ಪರಿಸರವನ್ನು ದಿನಂಪ್ರತಿ ಶುಚಿಯಾಗಿಸುವ ಕಾರ್ಯ ನಡೆಯುತ್ತಿದೆ.

ಮಹಾಮಸ್ತಕಾಭಿಷೇಕದ ಪ್ರಯುಕ್ತ 20 ಮಂದಿಯನ್ನು ಮೈಸೂರಿನ ಕೊಳ್ಳೆಗಾಲದಿಂದ ಕರಿಸಿಕೊಳ್ಳಲಾಗಿದೆ ಹೆಚ್ಚುವರಿ ತಾತ್ಕಾಲಿಕ ಶೌಚಾಲಯಗಳನ್ನು ಸಿದ್ಧಪಡಿಸಲಾಗಿದೆ. ಇವೆಲ್ಲವನ್ನು ನಿರ್ವಹಿಸಲು ಹೆಚ್ಚುವರಿ ಮಂದಿಯನ್ನು ನಿಯೋಜಿಸಲಾಗಿದೆ. ಬೆಳಗ್ಗೆ 5 ರಿಂದ ಈ ಶುಚಿತ್ವ ಕಾರ್ಯ ಪ್ರಾರಂಭಗೊಳ್ಳುತ್ತದೆ. ವಿವಿಧ ವಿಭಾಗಗಳಾಗಿ ಬೆಳಗ್ಗೆ 5 ರಿಂದ 9ರ ವರೆಗೆ, ಸಂಜೆ 3ರಿಂದ 6 ರ ವರೆಗೆ ಮತ್ತು ರಾತ್ರಿ ಜನಸಂದಣಿ ಕಡಿಮೆಯಾದಂತೆ ಸ್ವಚ್ಛತಾಕಾರ್ಯವನ್ನು ನಡೆಸುತ್ತಿದ್ದಾರೆ.

ಮಹಾಮಸ್ತಕಾಭಿಷೇಕದ ಶುಚಿತ್ವ ಸಮಿತಿಯ ಬಾಲಕೃಷ್ಣ ನಾಯಕ್‍ರು ಹೇಳುವಂತೆ ‘ಖಾವಂದರು ಸ್ವಚ್ಛಭಾರತ ಪರಿಕಲ್ಪನೆಯನ್ನು ಬಹಳ ಹಿಂದಿನಿಂದಲೇ ಸ್ವಚ್ಛ ಧರ್ಮಸ್ಥಳದ ಮೂಲಕ ನಡೆಸಿಕೊಂಡು ಬಂದಿದ್ದಾರೆ. ಶುಚಿತ್ವದ ಕುರಿತಾಗಿ ವಿಶೇಷ ಮುತುವರ್ಜಿಯನ್ನು ವಹಿಸಿದ್ದಾರೆ. ಕ್ಷೇತ್ರದ ಪ್ರತೀ ಕೆಲಸದ ಹಿಂದೆ ಅವರ ಮಾರ್ಗದರ್ಶನವಿದೆ. ಸಚ್ಛತೆಗೆ ಮೊದಲ ಆದ್ಯತೆಯನ್ನು ನೀಡುತ್ತಾರೆ.’

ಒಟ್ಟು ಮೂರು ಕಡೆಗಳಲ್ಲಿ ತಾತ್ಕಾಲಿಕ ಶೌಚಾಲಯದ ನಿರ್ಮಾಣವಾಗಿದೆ. ಪ್ಲಾಸ್ಟಿಕ್ ವಸ್ತುಗಳು, ಬಾಟಲಿಗಳು, ಮರಗಳ ತರೆಗೆಲೆಗಳನ್ನು  ನಗರ ನೈರ್ಮಲೀಕರಣದ ಸದುದ್ದೇಶದಿಂದ ಶುಚಿಗೊಳಿಸಲಾಗುತ್ತಿದೆ. ಈ ಬಾರಿಯ ಮಹಾಮಸ್ತಕಾಭಿಷೇಕ ವೈಭವದ ಜತೆಗೆ ಶುಚಿತ್ವದ ಸಂದೇಶವನ್ನೂ ಸಾರುತ್ತಿರುವುದು ಸಂತಸದ ಸಂಗತಿಯಾಗಿದೆ.

ಸಚಿನ್ ಎಲ್.,

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ 

ಎಸ್‍ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಜಿರೆ

Related posts

Leave a Reply

Your email address will not be published. Required fields are marked *