Header Ads
Header Ads
Header Ads
Breaking News

ಶೇಖಮಲೆ ದಲಿತ ಕಾಲನಿಯ ರಸ್ತೆ ಅಭಿವೃದ್ಧಿ ಪಡಿಸುವಂತೆ ಒತ್ತಾಯ ಶಾಸಕರಿಗೆ ಮನವಿ ನೀಡಿದ್ರೂ ಸ್ಪಂದಿಸಿಲ್ಲ ದಲಿತ ಕಾಲನಿಯ ನಿವಾಸಿಗಳ ಆರೋಪ

ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮಪಂಚಾಯತ್ ನ ಶೇಖಮಲೆ ದಲಿತ ಕಾಲನಿಗೆ ಹೋಗುವ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಸ್ಥಳೀಯ ಶಾಸಕರಿಗೆ ಮನವಿ ಮಾಡಿ ೪ ವರ್ಷಗಳು ಕಳೆದರೂ ಇಂದಿಗೂ ಸಮಸ್ಯೆ ಹಾಗೆಯೇ ಉಳಿದಿದೆ ಎಂದು ದಲಿತ ಕಾಲನಿಯ ನಿವಾಸಿಗಳು ಆರೋಪಿಸಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ದಕ್ಷಿಣಕನ್ನಡ ಜಿಲ್ಲಾ ಸಂಚಾಲಕ ಆನಂದ ಬೆಳ್ಳಾರೆ ಕಳೆದ ಹಲವು ವರ್ಷಗಳಿಂದ ಶೇಖಮಲೆ ದಲಿತ ಕಾಲನಿಯಲ್ಲಿರುವ ಸುಮಾರು ೩೫ ಕುಟುಂಬಗಳು ಸಮರ್ಪಕ ರಸ್ತೆ ಸಂಪರ್ಕವಿಲ್ಲದೆ ಹೆಣಗಾಡುತ್ತಿದೆ. ಆನಾರೋಗ್ಯ ಕಾಡಿದಾಗ ಎತ್ತಿಕೊಂಡೇ ಸಾಗಬೇಕಾದ ಸ್ಥಿತಿಯಿದೆ. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಸ್ಥಳೀಯ ಶಾಸಕರಾದ ಶಕುಂತಲಾ ಶೆಟ್ಟಿ ಕಾಲನಿಯ ಸಮಸ್ಯೆಯನ್ನು ಬಗೆಹರಿಸುವ ಆಶ್ವಾಸನೆಯನ್ನು ನೀಡಿದ್ದರೂ, ಈ ವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅವರು ಆರೋಪಿಸಿದರು. ನವಂಬರ್ 30 ರ ಒಳಗೆ ಈ ಬಗ್ಗೆ ಕ್ರಮ ಜರುಗಿಸದೇ ಹೋದಲ್ಲಿ ಪುತ್ತೂರು ಸಹಾಯಕ ಆಯುಕ್ತರ ಕಛೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಅವರು ಎಚ್ಚರಿಕೆಯನ್ನೂ ನೀಡಿದರು.

ವರದಿ: ಪ್ರವೀಣ್ ಪುತ್ತೂರು

Related posts

Leave a Reply