Header Ads
Header Ads
Breaking News

ಶೈಕ್ಷಣಿಕ ಸಾಲ ಪಡೆದವರೇ ಹುಷಾರ್! ಸಾಲದ ಹೆಸರಲ್ಲಿ ಲೂಟಿ ಮಾಡ್ತಾರೆ ಜೋಕೆ ಇದು ಸಿಂಡಿಕೇಟ್ ಬ್ಯಾಂಕ್ ದೋಖಾ ವಿಮಾ ಸೌಲಭ್ಯ ಇದ್ರೂ ಸಾಲ ಕಟ್ಟಬೇಕಂತೆ

ಶೈಕ್ಷಣಿಕ ಸಾಲ ಪಡೆದಿರುವ ವಿದ್ಯಾರ್ಥಿಗಳೇ ಹುಷಾರ್! ಜೀವನಪೂರ್ತಿ ಜೀತ ಮಾಡಿದ್ದರೂ ನೀವು ತಗೊಂಡ ಶಿಕ್ಷಣ ಸಾಲ ಕಟ್ಟೋಕೆ ಸಾಧ್ಯ ಆಗಲ್ಲ, ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಮಾಡಿದ ಶೈಕ್ಷಣಿಕ ಸಾಲ ಈಗ ಶೂಲವಾಗಿ ಪರಿಣಮಿಸಿದೆ.

ಮಕ್ಳು ವಿದ್ಯಾವಂತರಾಗ್ಲಿ ಅಂತ ಹೆತ್ತವರು ಶೈಕ್ಷಣಿಕ ಸಾಲ ಮಾಡಿ ಉನ್ನತ ಶಿಕ್ಷಣ ನೀಡ್ತಾರೆ. ಆದರೆ ಸ್ವಲ್ಪ ಯಾಮಾರಿದ್ರೂ ಸಾಕು, ಬ್ಯಾಂಕ್ ನವ್ರು ಟೋಪಿ ಹಾಕಿದ್ದೇ ಗೊತ್ತಾಗಲ್ಲ. ಸಿಂಡಿಕೇಟ್ ಬ್ಯಾಂಕ್ ನ ಸಿಂಡ್ ವಿದ್ಯಾ ಯೋಜನೆಯಡಿಯಲ್ಲಿ ಪಡೆದ ನಾಲ್ಕು ಲಕ್ಷ ರುಪಾಯಿ ಸಾಲ ಈಗ 12 ಲಕ್ಷ ಆಗಿದೆ. ಮೂಲ್ಕಿಯ ವಿಜಯಾ ಕಾಲೇಜ್ ಪ್ರಿನ್ಸಿಪಾಲ್ ಡಾ.ಅರವಿಂದ ಜೋಶಿ ಸ್ಥಳೀಯ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಮಗಳು ಮೈತ್ರೇಯಿ ವಿದ್ಯಾಭ್ಯಾಸಕ್ಕೆ ಸಾಲ ಮಾಡ್ತಾರೆ. ಆದರೆ ಆಕೆಯ ಶಿಕ್ಷಣ ಮುಗಿಯುವ ಮುನ್ನ ಅಂದ್ರೆ 2011 ರಲ್ಲೇ ಡಾ.ಅರವಿಂದ ಜೋಶಿ ಅಪಘಾತಲ್ಲಿ ಸಾವನ್ನಪ್ತಾರೆ.ಈ ಶೈಕ್ಷಣಿಕ ಸಾಲಕ್ಕೆ ಭದ್ರತೆಗಾಗಿ ಯುನೈಟೆಡ್ ಇನ್ಶೂರೆನ್ಸ್ ಕಂಪೆನಿಯಲ್ಲಿ ವಿಮೆ ಮಾಡಲಾಗಿತ್ತು. ಹಾಗಾಗಿ ಸಾಲ ಮರುಪಾವತಿ ಮಾಡುವ ಪ್ರಶ್ನೆನೇ ಬರಲ್ಲ. ಆದರೆ ಈಗ ಬ್ಯಾಂಕ್ ನವರು 12 ಲಕ್ಷ ರುಪಾಯಿ ಮರುಪಾವತಿ ಮಾಡಿ ಅಂತ ತಲೆ ಮೇಲೆ ಕೂತಿದಾರೆ.

ಸಾಲದ ಯಾವುದೇ ವಿವರ ನೀಡಲು ಬ್ಯಾಂಕ್ ನವರು ಒಪ್ಪುತ್ತಿಲ್ಲ. ಸಾಲ ಮಾಡಿದ ಮೊತ್ತ ಎಷ್ಟು ಅನ್ನೋದು ಕೂಡಾ ಇವರಿಗೆ ಗೊತ್ತಿಲ್ಲ. ಯಾಕಂದ್ರೆ ಸಾಲ ಮಾಡಿದವರು ಸತ್ತು ಹೋಗಿದ್ದಾರೆ.ಎಲ್ಲಾ ಶೈಕ್ಷಣಿಕ ಸಾಲದ ಮೇಲೆ ವಿಮೆ ಇರುತ್ತೆ. ಇವರ ಸಾಲದ ಮೇಲೂ ವಿಮಾ ಪ್ರೀಮಿಯಂ ಕಡಿತಗೊಂಡಿದೆ. ಆದರೆ ಯುನೈಟೆಡ್ ಇನ್ಶೂರೆನ್ಸ್ ನವರಲ್ಲಿ ಕೇಳಿದ್ರೆ ಯಾವುದೇ ವಿಮಾ ಅರ್ಜಿನೇ ಬಂದಿಲ್ಲ ಅಂತಾರೆ. ಸಿಂಡಿಕೇಟ್ ಬ್ಯಾಂಕ್ ನ ಉನ್ನತ ಕಚೇರಿಯಿಂದಲೂ ಈ ಬಗ್ಗೆ ಸ್ಪಂದನವಿಲ್ಲ. ಸಾಲದ ಅವಧಿ ಮುಗಿದು ಆರು ವರ್ಷದ ನಂತ್ರ ಈಗ ಶೈಕ್ಷಣಿಕ ಸಾಲದ ಮೊತ್ತ ಮೂರು ಪಟ್ಟು ಹೆಚ್ಚಾಗಿದೆ. ವಿಮೆಯ ಮೊತ್ತವನ್ನು ಬ್ಯಾಂಕ್ ಮೆನೇಜರ್ ಗುಳುಂ ಮಾಡಿರುವುದೇ ಇಷ್ಟಕ್ಕೆಲ್ಲಾ ಕಾರಣ ಅನ್ನೋದು ಗೊತ್ತಾಗುತ್ತೆ. ಸದ್ಯ ಮಾನವ ಹಕ್ಕುಗಳ ಪ್ರತಿಷ್ಟಾನ ನೊಂದವರ ಬೆಂಬಲಕ್ಕೆ ನಿಂತಿದೆ.

ಶೈಕ್ಷಣಿಕ ಸಾಲಕ್ಕೆ ವಿಮಾ ಸೌಲಭ್ಯ ಖಡ್ಡಾಯವಾಗಿರುತ್ತೆ. ಹಾಗಾಗಿ ಸಾಲಗಾರರೇ, ನಿಮ್ಮ ವಿಮಾ ಪ್ರೀಮಿಯಂ ಮೊತ್ತ ಪಾವತಿಯಾಗಿದೆಯೇ ಮೊದಲು ಖಾತ್ರಿ ಮಾಡಿ ಕೊಳ್ಳಿ. ಬ್ಯಾಂಕ್ ನಿಂದ ಮೊದಲು ದಾಖಲೆ ಪಡೆದುಕೊಳ್ಳಿ. ಇಲ್ಲಾಂದ್ರೆ ಏನಾದ್ರೂ ಅವಘಢ ಸಂಭವಿಸಿದ್ರೆ ಸಾಲದ ಸಂಕಟದಿಂದ ಪಾರಾಗೋಲ್ಲ ಜೋಕೆ.