Header Ads
Breaking News

ಶೋಭಾ ಕರಂದ್ಲಾಜೆಗೆ ಟಿಕೆಟ್‌ಗೆ ಯಡಿಯೂರಪ್ಪನಾದರೆ ಓಟಿಗೆ ಮೋದಿ! : ಪ್ರಮೋದ್ ವ್ಯಂಗ್ಯ

ಎಲ್ಲೋ ದೂರದಲ್ಲಿದ್ದ ಶೋಭಾ ಕರಂದ್ಲಾಜೆ, ಸಂಸದರಾಗಿದ್ದ ಸಂದರ್ಭ ಜನರ ಕಷ್ಟಕ್ಕೆ ನೆರವಾಗದೆ ಇದೀಗ ಚುನಾವಣೆ ಬರುತ್ತಿದಂತೆ ಮತ್ತೆ ಮುಖವಾಡ ಧರಿಸಿ ಹತ್ತಿರವಾಗುತ್ತಿದ್ದರೂ ಪ್ರಯೋಜನವಾಗದು.. ಜನರ ವಿಶ್ವಾಸವನ್ನೂ ಕಳೆದುಕೊಂಡು ತನ್ನ ವರ್ಚಸ್ಸು ಕಳೆದುಕೊಂಡಿರುವ ಶೋಭಗೆ ಟಿಕೇಟ್‌ಗೆ ಯಡಿಯೂರಪ್ಪನಾದರೆ ಓಟಿಗೆ ಮೋದಿ ಎಂಬಂತ್ತಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಜೆಡಿಯಸ್ ಜಂಟಿ ಅಭ್ಯಾರ್ಥಿ ಪ್ರಮೋದ್ ಮಧ್ವರಾಜ್ ವ್ಯಂಗವಾಡಿದ್ದಾರೆ.

ಅವರು ಕಾಪು ಜೇಸಿ ಭವನದಲ್ಲಿ ನಡೆದ ಕಾಂಗ್ರೆಸ್ ಜೆಡಿಯಸ್ ಜಂಟಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಬೆಂಗಳೂರಿನ ವಿಳಾಸ ನೀಡಿರುವ ಶೋಭ ಕರಂದ್ಲಾಜೆ ಇಲ್ಲಿನ ಅಭಿವೃದ್ಧಿ ಕಡೆಗೆ ಕಮನ ಹರಿಸಲು ಸಾಧ್ಯವಿಲ್ಲ, ತಾನು ಹುಟ್ಟಿದ ಮಣ್ಣಿನ ಬಗ್ಗೆ ನಮಗೆ ಒಲವಿರುತ್ತೆ ಅದೇ ಎಲ್ಲಿಂದಲೋ ಬಂದು ಚುನಾವಣೆಯಲ್ಲಿ ಗೆದ್ದು ಇತ್ತ ಮುಖ ಮಾಡದ ಶೋಭ ಬಗ್ಗೆ ಜನರೇ ತಿಳಿದುಕೊಂಡಿದ್ದಾರೆ ಎಂದರು. ಮರಳು ಅಭಾವಕ್ಕೆ ನಾನೇ ಕಾರಣ ಎನ್ನುವ ಬಿಜೆಪಿಗರು ಈ ಸಮಸ್ಯೆಯ ಮೂಲ ಕೇಂದ್ರ ಸರ್ಕಾರ ಎಂಬುದು ಹಾಗೂ ಇಲ್ಲಿನ ಸಮಸ್ಯೆ ನೀಗಿಸ ಬೇಕಾಗಿದ್ದ ಅಂದಿನ ಸಂಸದೆ ಶೋಭ ಈ ಬಗ್ಗೆ ಆಸಕ್ತಿಯೇ ತೋರಿಸದಿರುವುದೇ, ಸಮಸ್ಯೆ ತೀವೃಸ್ವರೂಪಕ್ಕೆ ಕಾರಣ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭ ವೇದಿಕೆಯಲ್ಲಿ ವಿನಯಕುಮಾರ್ ಸೊರಕೆ, ರಾಜಶೇಖರ್ ಕೋಟ್ಯಾನ್, ದೇವಿಪ್ರಸಾದ್ ಶೆಟ್ಟಿ, ಯೋಗೀಶ್ ಶೆಟ್ಟಿ, ಸುಧಾಕರ್ ಶೆಟ್ಟಿ ಮುಂತಾದವರಿದ್ದರು.

Related posts

Leave a Reply

Your email address will not be published. Required fields are marked *