Header Ads
Breaking News

ಶೋಭಾ ವಿರುದ್ದ ನೋಟಾ ಅಭಿಯಾನ: ಅಭಿಯಾನ ನಡೆಸುವಂತಿಲ್ಲ-ಚುನಾವಣಾಧಿಕಾರಿಗಳು

 ನಾಡಿನ ಗಮನ ಸೆಳೆದಿದ್ದ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಆಯ್ಕೆಯಾಗಿದ್ದಾರೆ. ಸಾಂಕೇತಿಕ ನಾಮಪತ್ರವನ್ನೂ ಸಲ್ಲಿಸಿದ್ದಾರೆ, ಆದ್ರೆ ಹಾಲಿ ಸಂಸದೆಯ ಬಗ್ಗೆ ಫೇಸ್ ಬುಕ್ ವಾರ್ ಮಾತ್ರ ನಿಂತಿಲ್ಲ.‘ ಗೋ ಬ್ಯಾಕ್ ಶೋಭಕ್ಕ’ ಅನ್ನೋ ಫೇಸ್ ಬುಕ್ ಪೇಜ್ ಕಳೆದ ಒಂದು ತಿಂಗಳಿಂದ ಸಕ್ರಿಯವಾಗಿದ್ದು, ಸದ್ಯ ಶೋಭಾ ವಿರುದ್ಧ ನೋಟಾ ಅಭಿಯಾನಕ್ಕೆ ಕರೆನೀಡಿದೆ. ಇದೆಲ್ಲಾ ಕಾಂಗ್ರಸ್ ಷಡ್ಯಂತ್ರ ಅಂತ ಸಂಸದೆ ಗರಂ ಆಗಿದ್ದಾರೆ.

ಗೋ ಬ್ಯಾಕ್ ಶೋಭಕ್ಕ’ ಹೀಗೊಂದು ಫೇಸ್ ಬುಕ್ ಪೇಜ್ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ನಿರಂತರ ಕಿಡಿಕಾರುತ್ತಿದೆ. ಹಾಲಿ ಸಂಸದೆಗೆ ಮತ್ತೆ ಟಿಕೆಟ್ ನೀಡ್ಬಾರ್ದು ಅಂತ ಪಣತೊಟ್ಟಿದ್ದ ಈ ಪೇಜ್ ನ ಫಾಲೋವರ್ಸ್ಗಳ ಆಕ್ರೋಶ ಈಗ ದುಪ್ಪಟ್ಟಾಗಿದೆ. ಗುರುವಾರ ರಾತ್ರಿ ಶೋಭಾ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಈ ಪೇಜ್ ನಲ್ಲಿ ನೋಟಾ ಅಭಿಯಾನ ಆರಂಭಿಸಲಾಗಿದೆ. ಕಾರ್ಯಕರ್ತರ ಅಭಿಮತಕ್ಕೆ ವಿರುದ್ಧವಾಗಿ ಅವಕಾಶ ನೀಡಲಾಗಿದೆ ಎಂದು ಕಿಡಿಕಾರಲಾಗುತ್ತಿದೆ. ಒಂದು ಹೆಜ್ಜೆ ಮುಂದಕ್ಕೆ ಹೋಗಿ ‘ಸದ್ಯದಲ್ಲೇ ಒಂದು ಸಿಡಿ ಬಿಡುಗಡೆ ಮಾಡ್ತೇವೆ’ ಎಂಬ ಸ್ಟೇಟಸ್ ಹಾಕಿರೋದು ಕುತೂಹಲ ಹುಟ್ಟಿಸಿದೆ. ಇದೆಲ್ಲಾ ಹತಾಷ ಕಾಂಗ್ರೆಸ್ ನ ಷಡ್ಯಂತ್ರ, ಕಾಂಗ್ರಸ್ ಗೆ ಈ ಕ್ಷೇತ್ರದಲ್ಲಿ ಅಭ್ಯರ್ಥಿನೇ ಇಲ್ಲ, ಚುನಾವಣೆ ಬಂದಾಗ ಇವರಿಗೆ ಸಿಡಿಗಳು, ಡೈರಿಗಳ ನೆನಪಾಗುತ್ತೆ.ಕಾಂಗ್ರೇಸ್ನವರು ಹುಚ್ಚರು ಅವರಿಗೆ ತಲೆ ಕೆಟ್ಟಿದೆ.ಕಾಂಗ್ರೇಸ್ ನೈತಿಕವಾಗಿ ಅಂಧಪತನವಾಗಿದೆ. ತೇಜೋವಧೆ ಮಾಡುವ ಈ ಷಡ್ಯಂತ್ರಕ್ಕೆ ಕರಾವಳಿ ಜನ ಬಲಿಯಾಗಲ್ಲ ಎಂದು ಹೇಳಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಅವರಿಂದ ಬೇಸರಗೊಂಡ ಬಿಜೆಪಿ ಕಾರ್ಯಕರ್ತರೇ ‘ಗೋ ಬ್ಯಾಕ್ ಶೋಭಕ್ಕ’ ಫೇಸ್ ಬುಕ್ ಪೇಜ್ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮದೇ ಪಕ್ಷದ ವಿರುದ್ಧ ನೋಟಾ ಅಭಿಯಾನಕ್ಕೆ ಚಾಲನೆ ನೀಡಿರುವುದು ಮತ್ತು ಅವಹೇಳನಕಾರಿ ಬರಹಗಳನ್ನು ಹಾಕುತ್ತಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಅವರಿಗೆ ಟಿಕೆಟ್ ನೀಡ್ಬೇಕು ಅನ್ನೋದು ಬಿಜೆಪಿ ಶಾಸಕರು ಸೇರಿದಂತೆ ಬಹುಪಾಲು ಕಾರ್ಯಕರ್ರ ಒತ್ತಾಯವಾಗಿತ್ತು. ಆದ್ರೆ ಹಾಲಿ ಸಂಸದೆಗೆ ಹೈಕಮಾಂಡ್ ಮತ್ತೊಂದು ಅವಕಾಶ ನೀಡಿದೆ. ಕಾರ್ಯಕರ್ತರ ನಡುವಿನ ಸಮಸ್ಯೆ ಬಗೆಹರಿಯದಿದ್ದಲ್ಲಿ, ಹಾಲಿ ಸಂಸದೆಗೆ ಒಂದಿಷ್ಟು ಹಿನ್ನಡೆ ಆಗೋದರಲ್ಲಿ ಸಂಶಯ ಇಲ್ಲ ಅಂತಾರೆ ರಾಜಕೀಯ ವಿಶ್ಲೇಷಕರು. ಇತ್ತ ನೋಟಾ ಅಭಿಯಾನ ಮಾಡಲು ಉತ್ತೇಜಿಸುವುದು ಸಹ ನೀತಿ ಸಂಹಿತೆ ಉಲ್ಲಂಘನೆ ಅಂತ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ನೋಟ ದ ಮಾಹಿತಿ ನೀಡಬಹುದಾಗಿದೆ. ಆದ್ರೆ ಅದನ್ನೇ ಅಭಿಯಾನ ನಡೆಸುವುದು ತಪ್ಪು ಅಂತ ಚುನಾವಣಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

 ರಾಜಕಾರಣದಲ್ಲಿ ಹೆಚ್ಚಿನ ಜವಾಬ್ದಾರಿ ಇದ್ದುದರಿಂದ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗಿಲ್ಲ ಅನ್ನೋದನ್ನು ಸಂಸದೆಯೂ ಒಪ್ಪಿಕೊಳ್ಳುತ್ತಾರೆ. ಸೈನಿಕರಂತೆ ದುಡಿಯುವ ಬಿಜೆಪಿ ಕಾರ್ಯಕರ್ತರು ನನ್ನ ಬೆಂಬಲಕ್ಕಿದ್ದಾರೆ ಅನ್ನೋ ವಿಶ್ವಾಸದಲ್ಲಿ ಶೋಭಾ ಕರಂದ್ಲಾಜೆ ಫೀಲ್ಡ್ ಗಿಳಿದಿದ್ದಾರೆ.

Related posts

Leave a Reply

Your email address will not be published. Required fields are marked *