Header Ads
Breaking News

ಶೌಚಾಲಯವಿಲ್ಲದ ಕಟ್ಟಡಗಳನ್ನು ಕ್ವಾರಂಟೈನ್ ಸೆಂಟರ್ ಮಾಡಬೇಡಿ: ಅಂತಹ ಕಟ್ಟಡಗಳನ್ನು ಕ್ವಾರಂಟೈನ್ ಸೆಂಟರ್ ಲಿಸ್ಟ್ ನಿಂದ ತೆಗೆದು ಹಾಕಿ:  ಶಾಸಕ ಹಾಲಾಡಿ 

ಕುಂದಾಪುರ :ಶೌಚಾಲಯವಿಲ್ಲದ ಕಟ್ಟಡಗಳನ್ನು ಕ್ವಾರಂಟೈನ್ ಸೆಂಟರ್ ಮಾಡಬೇಡಿ. ಅಂತಹ ಕಟ್ಟಡಗಳನ್ನು ಕ್ವಾರಂಟೈನ್ ಸೆಂಟರ್ ಲಿಸ್ಟ್‍ನಿಂದ ತೆಗೆದು ಹಾಕಿ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಹೇಳಿದರು.


ಅವರು ಭಾನುವಾರವೂ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ಕುಂದಾಪುರ ತಾ.ಪಂ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಯಾವೆಲ್ಲಾ ಸೆಂಟರ್‍ನಲ್ಲಿ ಎಷ್ಟು ಜನ? ಎಲ್ಲಿಂದ ಊಟ ಹೋಗುತ್ತೆ? ಅಧಿಕಾರಿಗಳಿಂದ ಪಿನ್ ಟು ಪಿನ್ ಮಾಹಿತಿಯನ್ನು ಪಡೆದುಕೊಂಡರು. ಹೊರರಾಜ್ಯಗಳಿಂದ ಇನ್ನೂ 2 ಪಸೆರ್ಂಟ್ ಜನ ಬರಲಿಲ್ಲ. ಈಗ ಬಂದವರು ಕೇವಲ ಹೊಟೇಲ್ ಕಾರ್ಮಿಕರು ಮಾತ್ರ. ಒಮ್ಮೊಮ್ಮೆ ತಂಡೋಪತಂಡವಾಗಿ ಜಿಲ್ಲೆಗೆ ಬರುತ್ತಾರೆ. ಹೀಗಾಗಿ ಬಂದ ಕೂಡಲೇ ಉಪಹಾರ ಪೂರೈಸುವುದು ಕಷ್ಟವಾಗುತ್ತೆ. ಆದಷ್ಟು ಜನರು ಬರುವಾಗಲೇ ಹಣ್ಣುಗಳನ್ನು ತಂದರೆ ಸಮಸ್ಯೆಯಾಗಲಿಕ್ಕಿಲ್ಲ. ಜನರೂ ಕೂಡ ನಮ್ಮೊಂದಿಗೆ ಕೈಜೋಡಿಸಬೇಕು, ಬಂದ ಕೂಡಲೇ ವ್ಯವಸ್ಥೆ ಸರಿಯಿಲ್ಲ ಎಂದು ಅಧಿಕಾರಿಗಳಿಗೆ ಬಯ್ಯುವುದಲ್ಲ. ಅವರೆಲ್ಲರೂ ನಮಗಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಹೊರರಾಜ್ಯಗಳಿಂದ ಬರುವವರಿಗೆ ಹಾಲಾಡಿ ಮನವಿ ಮಾಡಿದರು. ಸಭೆಯಲ್ಲಿ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು ಭಾಗಿಯಾಗಿದ್ದರು.

Related posts

Leave a Reply

Your email address will not be published. Required fields are marked *