Header Ads
Header Ads
Breaking News

ಶೌಚಾಲಯವೇ ಇಲ್ಲದ ಪಡುಬಿದ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜ್

ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್ ಉಪಸ್ಥಿತರಿದ್ದ ಸಭೆಯಲ್ಲಿ, ಮೂಲಭೂತ ಸೌಕರ್ಯ ಕೊರತೆಯ ಬಗ್ಗೆ ಪ್ರಭಾರ ಪ್ರಾಂಶುಪಾಲರು ಸಹಿತ ಉಪನ್ಯಾಸಕರು ಶಾಸಕರ ಗಮನಕ್ಕೆ ತಂದು ಸಮಸ್ಯೆ ನೀಗಿಸುವಂತೆ ಮನವಿ ಮಾಡಿದ್ದಾರೆ.ಪ್ರಭಾರ ಪ್ರಾಂಶುಪಾಲೆ ಯಶೋಧ ಕೆ. ಮಾತನಾಡಿ, ಪ್ರಮುಖವಾಗಿ ನಮ್ಮ ಕಾಲೇಜಿನಲ್ಲಿ ಅಗತ್ಯವಾಗಿ ಬೇಕಾಗಿದ್ದ ಶೌಚಾಲಯ ಸಹಿತ ನೀರಿನ ವ್ಯವಸ್ಥೆ ನಮ್ಮ ಕಾಲೇಜು ವಿಭಾಗಕ್ಕಿಲ್ಲ, ಕಾಲೇಜು ವಿಭಾಗದವರಾದ ನಾವು ಹೈಸ್ಕೂಲ್ ವಿಭಾಗದ ಶೌಚಾಲಯ ಹಾಗೂ ಕುಡಿಯುವ ನೀರನ್ನು ಉಪಯೋಗಿಸುವಂತ್ತಾಗಿದೆ. ಅಲ್ಲದೆ ಕಾಪು ಕ್ಷೇತ್ರದ ಯಾವುದೇ ಸರ್ಕಾರಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗವಿಲ್ಲ, ಆದರೆ ಆ ವಿಭಾಗಕ್ಕೆ ಬೇಕಾದ ಪ್ರಯೋಗಲಯದ ವ್ಯವಸ್ಥೆಯ ಕೊರತೆ ಇದ್ದ ಕಾರಣ ನಾವು ಪ್ರಯೋಗಕ್ಕಾಗಿ ಖಾಸಗಿ ಕಾಲೇಜನ್ನು ಅವಲಂಬಿಸುವಂತ್ತಾಗಿದೆ.

ಕಾಲೇಜು ಕಟ್ಟಡ ತೀರ ಶಿಥಿಲಾವಸ್ಥೆಗೆ ತಲುಪಿದ್ದು ನೆಲ ಕಿತ್ತುಹೋಗಿದೆ ಈ ಎಲ್ಲಾ ಸಮಸ್ಯೆಗಳನ್ನೂ ಈ ಹಿಂದಿನ ಶಾಸಕರ ಗಮನಕ್ಕೆ ತರಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಶಿಕ್ಷಣಕ್ಕೆ ಸಂಬಂಧಿಸಿ ಉಪನ್ಯಾಸಕ ಸಂಪನ್ಮೂಲವನ್ನು ಸರ್ಕಾರ ಸರಿಯಾದ ಸಮಯಕ್ಕೆ ಒದಗಿಸದ ಕಾರಣ, ಕಾಲೇಜು ಆರಂಭದ ಮೂರು ತಿಂಗಳು ಕಾಲೇಜಿನಲ್ಲಿ ಅನಿರ್ವಾಯ ಕಾರಣದಿಂದ ಯಾವುದೇ ಪಾಠಗಳು ನಡೆಯದೆ ವಿದ್ಯಾರ್ಥಿಗಳು ಬೆಂಚು ಬಿಸಿ ಮಾಡಿ ಮನೆಗೆ ತೆರಳುವಂತ್ತಾಗುತ್ತಿದೆ. ಆ ಬಳಿಕ ಪಾಠ ಆರಂಭಗೊಳ್ಳುತ್ತವೆಯಾದರೂ ಸಮಯದ ಕೊರತೆಯಿಂದ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ.

ಆ ನಿಟ್ಟಿನಲ್ಲಿ ಸರಿಯಾದ ಸಮಯದಲ್ಲಿ ಉಪನ್ಯಾಸಕ ಸಂಪನ್ಮೂಲವನ್ನು ಒದಗಿಸುವಂತೆ ಸರ್ಕಾರಕ್ಕೆ ಒತ್ತಡ ತರಬೇಕಾಗಿ ಒತ್ತಾಯಿಸಿದ್ದಾರೆ. ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಶಾಸಕ ಲಾಲಾಜಿ ಮೆಂಡನ್, ಈ ವರೆಗೂ ಶಾಸಕರ ಅನುದಾನ ನಮ್ಮ ಖಾತೆ ಸೇರಿಲ್ಲ, ಶೀಘ್ರದಲ್ಲೇ ಬರುವ ನಿರೀಕ್ಷೆಯಲ್ಲಿದ್ದೇವೆ ನಮಗೆ ಎರಡು ಕೋಟಿ ಅನುದಾನ ಬರಲಿದ್ದು ಅದರಲ್ಲಿ ಇಲ್ಲಿನ ಅಗತ್ಯಕ್ಕಾಗಿ 15 ಲಕ್ಷ ರೂಪಾಯಿ ನೀಡುವುದು ಕಷ್ಟವಾಗದು, ಮುಂದಿನ ಒಂದು ತಿಂಗಳೋಳಗೆ ಈ ಬಗ್ಗೆ ಕಾರ್ಯಚರಿಸುವ ಭರವಸೆ ವ್ಯಕ್ತ ಪಡಿಸಿದ್ದಾರೆ. ಅದಲ್ಲದೆ ಒಂದೇ ವಠಾರದಲ್ಲಿ ಅಂಗನವಾಡಿಯಿಂದ ಕಾಲೇಜು ವಿಭಾಗದವರೆಗೂ ಶಿಕ್ಷಣ ಪಡೆಯುವ ವ್ಯವಸ್ಥೆ ಇದೆ, ಆದರೆ ಇಲ್ಲಿನ ಶಿಕ್ಷಕರು-ಉನ್ಯಾಸಕರ ಮಧ್ಯೆ ಹೊಂದಾಣಿಕೆಯ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದೆ, ಯಾವುದೇ ಕಾರಣಕ್ಕೆ ನಿಮ್ಮ ವೈಯಕ್ತಿಕ ವಿಚಾರಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀಳ ಬಾರದು ಯಾವುದೇ ಕಾರಣಕ್ಕೆ ಬಿದ್ದರೆ ನಾನು ಕಠಿಣವಾಗ ಬೇಕಾದೀತು ಎಂಬುದಾಗಿ ಎಚ್ಚರಿಸಿದ್ದಾರೆ.ಈ ಸಂದರ್ಭ ಪ್ರಮುಖರಾದ ಮಿಥುನ್ ಆರ್. ಹೆಗ್ಡೆ, ಪ್ರಕಾಶ್ ಶೆಟ್ಟಿ, ನೀತಾ ಗುರುರಾಜ್, ವಿಜಯ ಆಚಾರ್ಯ, ಕೌಸರ್, ದಯಾನಂದ ಶೆಟ್ಟಿ, ಸರಿತಾ ಡಿಸೋಜ ಮುಂತಾದವರಿದ್ದರು.

Related posts

Leave a Reply