Header Ads
Breaking News

ಶ್ರೀಕೃಷ್ಣ ವಿಠಲ ಪ್ರತಿಷ್ಠಾನ ಮುಂಬೈ ವತಿಯಿಂದ ಪೇಜಾವರ ಶ್ರೀಗಳಿಗೆ ತುಲಾಭಾರ

ಮುಂಬೈಯ ಪ್ರಸಿದ್ಧ ಜ್ಯೋತಿಷ್ಯ ರಾದ ವಿದ್ವಾನ್ ಕೈರ ಬೆಟ್ಟು ವಿಶ್ವನಾಥರು ಭಟ್ ಸಾಧಿಸಿರುವ ಶ್ರೀಕೃಷ್ಣ ವಿಠಲ ಪ್ರತಿಷ್ಠಾನ ಮತ್ತು ಬ್ರಾಹ್ಮಣ ಸಮಾಜದ ಪ್ರತಿಷ್ಠಿತ ಸಂಸ್ಥೆ ಬಿ ಎಸ್ ಕೆ ಬಿ ಜಂಟಿ ಆಶ್ರಯದಲ್ಲಿ ಮುಂಬೈಯ ಪೇಜಾವರ ಮಠದಲ್ಲಿ ಪೇಜಾವರ ಶ್ರೀಗಳಿಗೆ ರಜತ ತುಲಾಭಾರವನ್ನು ನಡೆಸಲಾಯಿತು.

ಸ್ವಾಮೀಜಿ ತುಲಾಭಾರವನ್ನು ಸ್ವೀಕರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು ವಿದ್ವಾನ್ ವಿಶ್ವನಾಥ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಸುರೇಶ ಅವರು ಮುಂಬೈಯ ರಯ ಸಾಯನ್‌ನಲ್ಲಿ ಬಿಎಸ್‌ಕೆಬಿ ಆಶ್ರಯದಲ್ಲಿ ಸುಮಾರು ೪೨ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಗೋಕಲ ಸಭಾಗ್ರಹ ಮತ್ತು ಶ್ರೀಕೃಷ್ಣ ಮಂದಿರದ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಡಾ. ಸುರೇಂದ್ರ ಕುಮಾರ್ ಹೆಗಡೆ, ಸುರೇಶ್ ಶೆಟ್ಟಿ ಯಯೈಡಿ, ಮನೋಹರ ನಂದಳಿಕೆ ಸುಧೀರ್ ಶೆಟಿ, ದಯಾನಂದ ಶೆಟ್ಟಿ ಕಲ್ಯ, ಪಾಂಡುರಂಗ ಶೆಟಿ, ಜಗನ್ನಾಥ್ ಗಾಣಿಗ, ಸುಮಾ ವಿಶ್ವನಾಥ್ ಭಟ್, ಅವಿನಾಶ್ ಶಾಸ್ತ್ರಿ, ಸುನಂದಾ ಉಪಾಧ್ಯಾಯ, ಕಾರ್ಯಕ್ರಮವನ್ನು ಡಾ.ಕರ್ನೂರು ಮೋಹನ್ ರೈ ಮತ್ತು ಸುಶೀಲಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *