Header Ads
Header Ads
Breaking News

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವ : ಕೆರೆಕಟ್ಟೆ ಉತ್ಸವದಲ್ಲಿ ಧನ್ಯತೆಯ ಭಾವ

ಝಗಮಗಿಸುವ ಹತ್ತಾರು ಅಂಗಡಿಗಳ ನಡುವೆ ನಾ ಮುಂದುತಾ ಮುಂದುಎಂಬಂತೆ ಬೆಳಗುತ್ತಿರುವ ದೀಪಗಳ ಸಾಲುಗಳು. ಅವುಗಳ ಬೆಳಕಿನ ಮಧ್ಯೆ ನಡೆಯುವಧಾರ್ಮಿಕ ವಿಧಿ-ವಿಧಾನಗಳನ್ನುಕಣ್ತುಂಬಿಕೊಳ್ಳಲು ಕಾತುರದಿಂದಕಾಯುತ್ತಿರುವ ಭಕ್ತರು.ಅವರೊಳಗಿನ ಅಪೂರ್ವಧನ್ಯತೆ.ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಎರಡನೇ ದಿನದಕೆರೆಕಟ್ಟೆಉತ್ಸವ ಸಂದರ್ಭದಚಿತ್ರಣವಿದು.ಇನ್ನೂಕಣ್ತೆರೆಯದ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಪ್ರತಿಯೊಬ್ಬರುಉತ್ಸವ ಮುಗಿಯುವವರೆಗೂ ಮೊದಲಿನಷ್ಟೆ ಶೃದ್ಧೆ ಭಕ್ತಿಯಿಂದದೇವಾಲಯದ ಮುಂದೆ ಆಸಿನರಾಗಿದ್ದರು. ದೂರದ ಊರುಗಳಿಂದ ಬಂದವರು ಸಂದಿಗೊಂದಿಯಲ್ಲಿನಿಂತುಅಲ್ಲಿಯೇ ಪಲ್ಲಕ್ಕಿಯನ್ನು ನೋಡುತ್ತಾ ಸಂತೋಷ ಪಟ್ಟರು.

ಮಕ್ಕಳ ಗಮನ ಪಲ್ಲಕ್ಕಿಗಿಂತ ಶೃಂಗಾರಗೊಂಡಆನೆಯಕಡೆಗೆ ಹೆಚ್ಚು ಸೆಳೆಯುತ್ತಿತ್ತು. ಇನ್ನೂಯುವಕರು ಪಲ್ಲಕ್ಕಿಯ ಮೆರವಣಿಗೆಯನ್ನುತಮ್ಮ ಮೊಬೈಲಿನ ಕ್ಯಾಮರಾಗಳಲ್ಲಿ ಸೆರೆಹಿಡಿಯುವುದರಲ್ಲಿಯೇ ಹೆಚ್ಚು ಉತ್ಸುಕರಾಗಿದ್ದರು.ದೇವರನ್ನು ಪಲ್ಲಕ್ಕಿಯಲ್ಲಿಕೂರಿಸುವ ಕಾಲಕ್ಕೆ ವಾದ್ಯಗಳ ಮೂಲಕ ಮೊಳಗುತ್ತಿದ್ದ ಮಾದೇಶ್ವರನಕುರಿತ ಭಕ್ತಿ ಗೀತೆಗಳು ಭಕ್ತರಲ್ಲಿ ಹೊಸ ಸಂಚಲನ ಮೂಡಿಸಿದ್ದವು. ಅದನ್ನು ನಿರೂಪಿಸುವಂತೆಯೇ ಆ ಕ್ಷಣಕ್ಕೆಅವರುಕುಣಿಯುತ್ತಿದ್ದರು. ರಥಎಳೆಯುವವರ ಕಣ್ಣುಗಳಲ್ಲಿ ಸಾರ್ಥಕ್ಯಭಾವವಿತ್ತು.ಕಾರ್ತಿಕ ಮಾಸದಕಡೆಯಐದು ದಿನಗಳ ಕಾಲ ನಡೆಯುವ ಈ ವಿಶೇಷ ಲಕ್ಷ ದೀಪೋತ್ಸವದಲ್ಲಿ ಪ್ರತಿಯೊಂದು ದಿನವೂಅನನ್ಯ ಉತ್ಸವಗಳಿದ್ದು, ಅದರಲ್ಲಿಕೆರೆಕಟ್ಟೆಉತ್ಸವವೂಒಂದು. ಪ್ರತಿ ವರ್ಷವೂಕೂಡ ಈ ರೀತಿಯದೈವಿಕಉತ್ಸವವನ್ನು ನಡೆಸುವುದುಇಲ್ಲಿನ ವಾಡಿಕೆ.

ಲಕ್ಷದೀಪೋತ್ಸವದ ಸಂದರ್ಭದಲ್ಲಿ ನಡೆಯುವ ಈ ಉತ್ಸವವುಒಂದುರೀತಿಯ ದಿವ್ಯಅನುಭವ ನೀಡುತ್ತದೆ. ಐದು ದಿನಗಳ ಕಾಲ ನಡೆಯುವಉತ್ಸವದ ಪೂಜೆಒಂದೇರೀತಿಯಾಗಿದ್ದರೂ, ಪಲ್ಲಕ್ಕಿಗಳು ಮಾತ್ರ ಬೇರೆ ಬೇರೆಯಾಗಿರುತ್ತವೆ. ಕೆರೆಕಟ್ಟೆಉತ್ಸವದಂದುದೇವರನ್ನು ಸ್ವರ್ಣಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ.ದೇಗುಲದಲ್ಲಿ ಶುರುವಾಗುವ ಮೆರವಣಿಗೆಯುಒಟ್ಟು 16 ಸುತ್ತುಗಳನ್ನು ಒಳಗೊಂಡಿರುತ್ತದೆ. ಆ ಹದಿನಾರು ಸುತ್ತುಗಳಿಗೂಒಂದೊಂದು ಹೆಸರಿಡಲಾಗಿರುತ್ತದೆ. ಉಡಿಕೆ ಸುತ್ತು, ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು, ಸರ್ವವಾದ್ಯ ಸುತ್ತುಇತ್ಯಾದಿ ಹಲವು ನಾಮಗಳ ಸುತ್ತುಗಳಿದ್ದು ಇಲ್ಲಿಉಡಿಕೆ 5 ಸುತ್ತುಗಳನ್ನು ಹೊಂದಿರುತ್ತದೆ. ಈ ಸುತ್ತುಗಳು ಎಲ್ಲಾ ಉತ್ಸವಗಳಿಗೂ ಒಂದೇತೆರನಾಗಿರುತ್ತದೆ.
ದೇವರ ಸಾನಿಧ್ಯದಲ್ಲಿಉತ್ಸವ ಶುರುವಾಗುವ ಮುನ್ನದೇಗುಲದ ಹೊರಭಾಗವನ್ನು ಮೊದಲು ಶುದ್ಧಿ ಮಾಡಿದ ನಂತರದೇವಸ್ಥಾನದ ಒಳಭಾಗದಲ್ಲಿ ಮೆರವಣಿಗೆಆರಂಭವಾಗುತ್ತದೆ. ಉತ್ಸವದ ಮೆರವಣಿಗೆ ಶುರುವಾದ ಪ್ರತಿ ಸುತ್ತಿನಲ್ಲೂ ಬಲಿ ಕಲ್ಲಿಗೆ ಶುದ್ಧಿ ಮಾಡಲಾಗುತ್ತದೆ.

ಉಡಿಕೆ 5 ಸುತ್ತುಗಳು ಪೂರ್ಣವಾದ ನಂತರದಲ್ಲಿಕ್ಷೇತ್ರಪಾಲನಿಗೆ ಪೂಜೆ ಸಲ್ಲಿಸಿ ಮಂಜುನಾಥ ಸ್ವಾಮಿಯನ್ನು ಸ್ವರ್ಣ ಪಲಕ್ಕಿಯಲ್ಲಿಕೂರಿಸಲಾಗುತ್ತದೆ. ಪಲ್ಲಕ್ಕಿಯಲ್ಲಿಒಟ್ಟು 11 ಸುತ್ತುಗಳನ್ನು ಸುತ್ತಿದ ನಂತರ, ದೇವಾಲಯದ ಮುಂಭಾಗದಿಂದ ವಿವಿಧತೆರನಾದ ವಾದ್ಯಗಳ ಜೊತೆಗೆ ವಿಜೃಂಭಣೆಯ ಮೆರವಣಿಗೆ ನಡೆಯಿತು.
ಮೆರವಣಿಗೆಗೆ ಮತ್ತಷ್ಟು ಮೆರುಗುತಂದುಕೊಟ್ಟಿದ್ದುರಾಜಗಾಂಭಿರ್ಯದಿಂದ ಹೆಜ್ಜೆಹಾಕುತ್ತಿದ್ದ ಲತಾ ಮತ್ತು ಲಕ್ಷ್ಮಿ ಎಂಬ ಎರಡು ಆನೆಗಳು ಹಾಗೂ ಅತ್ಯಂತ ನಿಷ್ಠಾವಂತನಂತೆ ಮೆರವಣಿಗೆಯಲ್ಲಿ ಪಾತ್ರವಹಿಸಿದ ಹಸು ಗೀರಿಶ. ಈ ಮೆರವಣಿಗೆಯಲ್ಲಿ ಸ್ವಾಮಿಯ ಪಲ್ಲಕ್ಕಿಯಎರಡು ಬದಿಗಳಲ್ಲಿ ಉದ್ದನೆಯ ಬೆಂಕಿಯ ಪಂಜುಗಳನ್ನು ಹಿಡಿದುಕೊಳ್ಳಲಾಗಿತ್ತು.ದೇವರನ್ನು ವಿಹಾರಕ್ಕೆಕರೆದುಕೊಂಡು ಹೋಗುವುದುಎನ್ನುವ ಸಂಪ್ರದಾಯವಿದ್ದು, ಹಾಗಾಗಿ ಕಟ್ಟೆಯಲ್ಲಿದೇವರನ್ನು ಕೂರಿಸಿ ಪೂಜೆ ಸಲ್ಲಿಸಲಾಗುತ್ತದೆ. ನಂತರರಥವನ್ನುಭಕ್ತರುದೇವಾಲಯದ ಸುತ್ತಒಂದು ಸುತ್ತು ಸುತ್ತಿಸಿ ಪುನಃ ಸಾನಿಧ್ಯಕ್ಕೆಕರೆದುಕೊಂಡು ಹೋಗಲಾಗುತ್ತದೆ.

Related posts

Leave a Reply

Your email address will not be published. Required fields are marked *