Header Ads
Header Ads
Breaking News

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ಬಳೆನಿನಾದದ ನಡುವೆಆತ್ಮವಿಶ್ವಾಸದ ಲಕ್ಷ್ಮಿ

 ಎಷ್ಟೇ ಕಷ್ಟಗಳಿದ್ದರೂ ಮೌನವಾಗಿ ಸಹಿಸಿಕೊಳ್ಳುತ್ತಾರೆ. ಹಾಗೆ ಸಹಿಸಿಕೊಳ್ಳುತ್ತಲೇ ಬದುಕು ಕಟ್ಟಿಕೊಳ್ಳುವುದರ ಕಡೆಗೆ ಗಮನ ಹರಿಸುತ್ತಾರೆ. ನೋವುಗಳನ್ನು ನಿವೇದಿಸಿಕೊಳ್ಳದೇ ತಮ್ಮ ಪಾಡಿಗೆತಾವುಕಾರ್ಯನಿರತರಾಗಿಹಿಂದಿನ ಸಾಂಪ್ರದಾಯಿಕಟ್ರೆಂಡ್‍ನ್ನು ಉಳಿಸುವಂಥ ವ್ಯವಹಾರವನ್ನು ಬಿಟ್ಟುಕೊಡದೇ ಮುಂದಡಿಯಿಡುತ್ತಾರೆ. ಆರ್ಥಿಕ ಸಂಕಷ್ಟದ ಬಿಕ್ಕಟ್ಟುಎದುರಾದಾಗಲೂಅದೇ ವಹಿವಾಟಿನಲ್ಲಿಯೇ ಉಳಿದುಕೊಳ್ಳುವ ಬದ್ಧತೆತೋರುತ್ತಾರೆ.ಈ ಸಲದ ಲಕ್ಷದೀಪೋತ್ಸವದಲ್ಲಿಅಂಥ ಮಾದರಿ ವ್ಯಕ್ತಿತ್ವಕ್ಕೆ ವೇದಿಕೆಯೊದಗಿಸಿಕೊಟ್ಟಿದೆ. ಇದಕ್ಕೆ ಸಾಕ್ಷಿಯಾಗಲುಶ್ರೀಕ್ಷೇತ್ರ ಧರ್ಮಸ್ಥಳದ ಮಹಾದ್ವಾರದ ಮೂಲಕ ಹಾದುಹೋಗಬೇಕು. ಅಲ್ಲಿಗಾಜಿನ ಬಳೆಗಳ ಸಂಗ್ರಹ ಕಾಣಸಿಗುತ್ತದೆ. ಅದರ ಪಕ್ಕದಲ್ಲಿ ಕುಳಿತವರೇ ಆ ವ್ಯಕ್ತಿತ್ವ. ಹೆಸರು ಲಕ್ಷ್ಮಿ. ಲಕ್ಷದೀಪೋತ್ಸವದಜನಜಾತ್ರೆಯ ಮಧ್ಯೆಅವರು ಮಾರುವಸಾಂಪ್ರದಾಯಿಕ ಬಳೆಗಳು ಆಕರ್ಷಿಸುತ್ತಿವೆ.

ಬದುಕು ಹಲವರನ್ನು ಪರೀಕ್ಷೆಗೊಡ್ಡಿದಾಗಛಲ ಕಳೆದುಕೊಳ್ಳದೇ ಮುಂದಡಿಯಿಡುವಆತ್ಮವಿಶ್ವಾಸ ಮನಗಾಣಿಸುವಂತೆಯೇಲಕ್ಷ್ಮಿ ಮಾತನಾಡುತ್ತಾರೆ. ಬಳೆಯ ಮಾರಾಟದ ವಿವರಗಳನ್ನು ನೀಡುವಾಗಲೇ ಬದುಕಿನ ವೈರುಧ್ಯಗಳ ಮಧ್ಯೆಸಾಂಪ್ರದಾಯಿಕ ಬಳೆಗಳ ಮಾರಾಟದೊಂದಿಗೇ ಗುರುತಿಸಿಕೊಂಡಿರುವ ಅವರ ವಿಶೇಷತೆ ಮನದಟ್ಟಾಗುತ್ತದೆ.ಇವರು ಪ್ರತಿ ವರ್ಷವು ಬಳೆ ಮಾರಾಟಕ್ಕಾಗಿ ಬರುತ್ತಿದ್ದಾರೆ. ಎಲ್ಲೇಜಾತ್ರೆ ಉತ್ಸವಗಳು ನಡೆದರೂಅಲ್ಲಿಗೆ ತೆರಳಿ ವ್ಯಾಪಾರ ವಹಿವಾಟು ನಡೆಸುವುದುಇವರಆದ್ಯತೆ. ಕಳೆದ 32 ವರ್ಷಗಳಿಂದ ಬಳೆ ವ್ಯಾಪಾರವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಪತಿಅನಾರೋಗ್ಯದಿಂದ ಬಳಲುತ್ತಿದ್ದರೂ ಅವರಆತ್ಮವಿಶ್ವಾಸ ಕಳೆಗುಂದಿಲ್ಲ. ಕುಟುಂಬದಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಬಳೆವ್ಯಾಪಾರದಿಂದ ಬಂದ ಹಣದಿಂದ ಪತಿಯಚಿಕಿತ್ಸೆಯವೆಚ್ಚ ಭರಿಸುತ್ತಿದ್ದಾರೆ.
“ಇದು ನಮ್ಮ ವಂಶವೃತ್ತಿ. ಅದುದರಿಂದ ಮೊದಮೊದಲು ನಮ್ಮ ಹಿರಿಯರೊಟ್ಟಿಗೆ ಬಳೆ ವ್ಯಾಪಾರಕ್ಕಾಗಿ ಬರುತ್ತಿದ್ದೆ. ನಂತರ ಪಾರಂಪರಿಕವಾಗಿ ಬಂದ ಈ ವೃತ್ತಿಯನ್ನು ನಾನು ಮುನ್ನೆಡಿಸಿಕೊಂಡು ಬಂದೆ” ಎನ್ನುತ್ತಾರೆ ಲಕ್ಷ್ಮಿ.

ಮೊದಲೆಲ್ಲಗಾಜಿನ ಬಳೆಗಳಿಗೆ ವಿಶೇಷ ಸ್ಥಾನಮಾನವಿತ್ತು.ಜಾತ್ರೆ, ಉತ್ಸವಗಳಲ್ಲಿ ಹೆಣ್ಣು ಮಕ್ಕಳು ಗಾಜಿನ ಬಳೆ ಅಂಗಡಿಗಳಿಗೆ ಭೇಟಿ ನೀಡದೆ ಹಿಂತಿರುಗುತ್ತಿರಲಿಲ್ಲ. ಸಾಮಾನ್ಯ ದಿನಗಳಲ್ಲಿ ತಿಂಗಳಿಗೊಮ್ಮೆ ಬಳೆಗಾರ ವ್ಯಾಪಾರಕ್ಕೆ ಮನೆಮನೆಗೆ ಬರುವುದನ್ನೇಕಾದು ಕುಳಿತಿರುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ಗಾಜಿನ ಬಳೆ ಕೊಳ್ಳುವುದಕ್ಕೆ ಯುವತಿಯರು ಹಿಂದೆಮುಂದೆ ನೋಡುವಂತಾಗಿದೆಎನ್ನತ್ತಾರೆಅವರು.ಈ ಪುಟ್ಟ ವೃತ್ತಿಯೇ ನಮ್ಮಜೀವನದ ಆಸ್ತಿ ಮತ್ತುಆಧಾರಎಲ್ಲವೂಆಗಿದೆ. ನಮ್ಮ ಹಿರಿಯರ ಕಾಲದಿಂದಲೂ ನಾವು ಇದೇ ವೃತ್ತಿಯನ್ನುನಡೆಸಿಕೊಂಡು ಬರುತ್ತಿದ್ದೇವೆ, ಇದು ನಮ್ಮಜೀವನವನ್ನೂ ರೂಪಿಸಿದೆ.ಗಾಜಿನ ಬಳೆ ವ್ಯಾಪಾರ ನಮ್ಮ ಹಿರಿಯರ ಬದುಕನ್ನುಕಟ್ಟಿಕೊಟ್ಟಿರುವುದರಿಂದ ಈಗಗಾಜಿನ ಬಳೆಗಳಿಗೆ ಗ್ರಾಹಕರುಕಡಿಮೆ ಎಂಬ ಕಾರಣಕ್ಕೆ ವ್ಯಾಪಾರವನ್ನು ಬದಲಿಸಲು ಮನಸ್ಸುಒಪ್ಪುವುದಿಲ್ಲ, ಬಂದದುಡಿಮೆಯಲ್ಲೇ ನಾವು ಖುಷಿಯನ್ನುಕಾಣಬೇಕಿದೆ ಎಂಬ ವಿಷಾದವೂಅವರದ್ದು.

ಈಗಲೂ ಕಾಲ ಮಿಂಚಿ ಹೋಗಿಲ್ಲ. ಮಕ್ಕಳಿಗೆ ನಮ್ಮ ಸಂಸ್ಕøತಿ, ಆಚರಣೆಗಳು ಮತ್ತು ಅವುಗಳ ಮಹತ್ವವನ್ನು ಪರಿಚಯಿಸಿಬೇಕಿದೆ. ಆಗಲಾದರೂಯುವಜನತೆ ಗಾಜಿನ ಬಳೆಗಳ ಮಹತ್ವ ತಿಳಿದು ಕೊಳ್ಳುವುದಕ್ಕೆ ಮುಂದಾಗುತ್ತಾರೆ ಎಂಬ ಆಶಾಭಾವನೆಯನ್ನೂ ವ್ಯಕ್ತಪಡಿಸುತ್ತಾರೆ.“ಹಸಿರು ಗಾಜಿನ ಬಳೆಗಳೇ ಸ್ತ್ರೀಕುಲದ ಶುಭ ಸ್ವರಗಳೇ” ಎಂಬ ಹಾಡಿನಂತೆ ಸ್ತ್ರೀಕುಲಕ್ಕೆ ಬಳೆಗಳೇ ಶೃಂಗಾರವಿದ್ದಂತೆ. ಮಹಿಳೆಯರ ಸುಂದರ ಕೈಗಳನ್ನು ಅಲಂಕರಿಸುವುದೇ ಬಳೆಗಳು. ಬಳೆಗಳಿಲ್ಲದೆ ಅವಳ ಅಲಂಕಾರವು ಪೂರ್ಣ ಅನಿಸುವುದಿಲ್ಲ. ಆದರೆಇತ್ತೀಚೆಗೆ ಕುಂಕುಮ, ಸರ, ಕಿವಿಯೋಲೆ ಮೂಗುತ್ತಿತೊಡುವ ಮಹಿಳೆಯರ ಸಂಖ್ಯೆಕಡಿಮೆಯಾಗುತ್ತಿರುವ ಹೊತ್ತಿನಲ್ಲೇ ಬಳೆಗಾರರೂ ಕೂಡ ಕಾಲ ಕ್ರಮೇಣಕಣ್ಮರೆಯಾಗುತ್ತಿದ್ದಾರೆ. ಹಿಂದೆ ಮಹಿಳೆಯರು ಕೈ ತುಂಬ ಗಾಜಿನ ಬಳೆಗಳನ್ನು ಧರಿಸಿಕೊಂಡು ಬಳೆಯ ಘಲ್‍ಘಲ್ ಶಬ್ದವನ್ನು ಆಲಿಸಿ ಆನಂದಿಸುತ್ತಿದ್ದರು. ಆದರೆ ಈಗಿನ ಆಧುನಿಕಕಾಲದಲ್ಲಿಯುವತಿಯರುಗಾಜಿನ ಬಳೆಗಳನ್ನು ತೊಡುವುದನ್ನು ನಿರಾಕರಿಸುತ್ತಾರೆ. ಯಾಕೆಂದರೆ ಕೆಲಸದ ವೇಳೆ ಒಡೆದುಹೋಗಿತಮ್ಮ ಕೈಗಳಿಗೆ ನೋವಾಗಬಹುದು ಮತ್ತು ಅವುಗಳ ಧ್ವನಿ ಕಿರಿಕಿರಿಯಾಗುತ್ತವೆಎಂದು ಬಳೆಗಳನ್ನು ತೊಡಲುಇಷ್ಟಪಡುವುದಿಲ್ಲ. ಹೀಗೆ ಹಿನ್ನೆಲೆಗೆ ಸರಿದ ಸಾಂಪ್ರದಾಯಿಕಗಾಜಿನ ಬಳೆಗಳ ಟ್ರೆಂಡ್‍ನ್ನು ಉಳಿಸಿಕೊಳ್ಳುವ ಮಾದರಿ ಮಹಿಳೆಯಾಗಿ ಲಕ್ಷ್ಮಿ ಮುಖ್ಯವೆನ್ನಿಸುತ್ತಾರೆ.

Related posts

Leave a Reply

Your email address will not be published. Required fields are marked *