Header Ads
Breaking News

ಶ್ರೀಧಾಮ ಮಾಣಿಲ ಕ್ಷೇತ್ರದಿಂದ ಧರ್ಮಸ್ಥಳಕ್ಕೆ ನೂತನ ಬಸ್ ಸಂಚಾರಕ್ಕೆ ಚಾಲನೆ

ವಿಟ್ಲ: ಹಲವು ವರ್ಷಗಳ ಬೇಡಿಕೆಯಾಗಿದ್ದ ವಿಟ್ಲ ಸಮೀಪದ ಶ್ರೀಧಾಮ ಮಾಣಿಲ ಕ್ಷೇತ್ರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನೂತನವಾಗಿ ಪ್ರಾರಂಭಗೊಂಡ ಬಸ್ ಸಂಚಾರಕ್ಕೆ ಶನಿವಾರ ಚಾಲನೆ ನೀಡಲಾಯಿತು.

ವಿಟ್ಲ ಸಮೀಪದ ಮಾಣಿಲ ಗ್ರಾಮದ ಪಕಳಕುಂಜದಿಂದ ಧರ್ಮಸ್ಥಳಕ್ಕೆ ಪ್ರತಿನಿತ್ಯ ಬಸ್ ಸಂಚಾರ ಪ್ರಾರಂಭಿಸಬೇಕೆಂದು ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿತ್ತು. ಇದೀಗ ಎಲ್ಲರ ಸಹಕಾರದಲ್ಲಿ ಕೊನೆಗೂ ಬಸ್ ಸಂಚಾರಕ್ಕೆ ಅನುಮತಿ ದೊರಕಿದೆ.

ಮಾಣಿಲ ಕ್ಷೇತ್ರದಲ್ಲಿ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಬಸ್ಸಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಪಕಳಕುಂಜದಲ್ಲಿ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಿಶಾಲ್ ಮೋನಿಸ್ ಹಾಗೂ ಶ್ರೀ ಮೋಹನದಾಸ ಸ್ವಾಮೀಜಿ ಅವರು ಪ್ರಥಮ ಸಂಚಾರಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಮಾಣಿಲ ಕ್ಷೇತ್ರಕ್ಕೂ ಧರ್ಮಸ್ಥಳ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಹಲವು ಜನರು ತಮ್ಮ ಕಷ್ಟಗಳನ್ನು ನಿವಾರಿಸಲು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ. ಈ ಬಸ್ ಸೇವೆ ಭಕ್ತರಿಗೆ ಇನ್ನಷ್ಟು ಪ್ರಯೋಜನವಾಗಲಿದೆ. ಇದರಿಂದ ವಿಟ್ಲ ಪರಿಸರದವರಿಗೂ ಪ್ರಯೋಜನವಾಗಲಿದೆ. ಗ್ರಾಮದ ಅಭಿವೃದ್ಧಿಯಾಗಬೇಕಾದರೆ ಎಲ್ಲರೂ ಒಗ್ಗೂಟ್ಟಿನಿಂದ ಕೆಲಸ ಮಾಡಿದಾಗ ಸಾಧ್ಯವಾಗುತ್ತದೆ. ಸಮಾಜದಲ್ಲಿ ಐಕ್ಯತೆ ಹಾಗೂ ಸಾಮರಸ್ಯ ಉಂಟು ಮಾಡುವ ಕೆಲಸಗಳು ನಡೆಯಬೇಕು ಎಂದರು.

ಈ ಸಂದರ್ಭ ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಉಪಾಧ್ಯಕ್ಷೆ ವಿಶಾಲಾಕ್ಷಿ, ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿ ಸೋಜ, ಜುಮಾ ಮಸೀದಿ ಅಧ್ಯಕ್ಷ ಮೊಹಿದು ಕುಟ್ಟಿ, ಸಾಮಾಜಿಕ ಹೋರಾಟಗಾರ್ತಿ ಕುಂಞಪಾತು, ಗೋಪಾಲಕೃಷ್ಣ ನಾಯಕ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜೇಂದ್ರನಾಥ ರೈ, ನ್ಯಾಯವಾದಿ ವಿನೋದ್ ಪಕಳಕುಂಜ, ಅಶ್ರಫ್ ಕಾಮಾಜಲು, ಉದಯಕುಮಾರ್ ಪಕಳಕುಂಜ, ಚಂದ್ರಶೇಖರ್, ಪ್ರಭಾಕರ, ರಾಮ ಕುಲಾಲು ಸಾಯ, ವಿನಯ್, ಶ್ರೀಧರ್ ಬಾಳೆಕಲ್ಲು, ಸುಶೀಲ್ ಬಾಳೆಕಾನ, ಸತ್ಯಶಂಕರ್ ಭಟ್, ಮೀನಾಕ್ಷಿ ಸಾಯ, ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ ಶೆಟ್ಟಿ, ಕಾರ್ಯದರ್ಶಿ ಗೀತಾ ಪುರುಷೋತ್ತಮ, ವಿಠಲ ಶೆಟ್ಟಿ ಸುಣ್ಣಂಬಳ, ಶ್ರೀಧಾಮ ಮಿತ್ರ ಮಂಡಲಿ ಅಧ್ಯಕ್ಷ ಯೋಗೀಶ್ ಬಾಳೆಕಾನ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *