
ವಂದೇ ಮಾತರಂ ಪ್ರೊಡಕ್ಷನ್ ಇಂಟರ್ನ್ಯಾಷನಲ್ ವತಿಯಿಂದ ಏರ್ಪಡಿಸಲಾದ ಮಿಸ್ಟರ್ ಆಂಡ್ ಮಿಸ್, ಮಿಸಸ್, ಕಿಡ್ಸ್ ಆಫ್ ಇಂಡಿಯಾ 2020 ರ ಸೌಂದರ್ಯ ಸ್ಪರ್ಧೆಯು, ಮಲ್ಲೇಶ್ವರಂನ ಜಿ.ಎಮ್. ರೆಜಾಯಿಸ್ನಲ್ಲಿ ನಡೆಯಿತು. ಮಿಸ್ಟರ್ ಇಂಡಿಯಾ ವಿಭಾಗದಲ್ಲಿ ವಿಜೇತರಾಗಿ ಮಂಗಳೂರಿನ ಕಾರ್ತಿಕ್ ಭಟ್ ಅವರು ಹೊರಹೊಮ್ಮಿದ್ದಾರೆ.
ಈ ಸ್ಪರ್ಧೆಯಲ್ಲಿ ನ್ಯಾಷನಲ್ ಕಾಸ್ಟ್ಯೂಮ್ ರೌಂಡ್, ಫ್ರೀ ಸ್ಟೈಲ್ ರೌಂಡ್, ಟುಕ್ಸೆಡೊ ರೌಂಡ್ ಎಂಬ ಮೂರು ಸುತ್ತುಗಳಿದ್ದು, ಇದರಲ್ಲಿ ಕಾರ್ತಿಕ್ ಭಟ್ ಅವರು ವಿಜೇತರಾಗಿ ಮಿಸ್ಟರ್ ಕರ್ನಾಟಕ ಎಂಬ ಸಬ್ ಟೈಟಲನ್ನು ಪಡೆದುಕೊಂಡಿದ್ದಾರೆ. ಕಾರ್ತಿಕ್ ಭಟ್ ಅವರು ಪ್ರಸ್ತುತ ಶ್ರೀನಿವಾಸ್ ಇನ್ಸಿಸ್ಟಿಟ್ಯೂಟ್ ಮೆಡಿಕಲ್ ಸೈಯನ್ಸ್ ಆಂಡ್ ರಿಸೆರ್ಚ್ ಸೆಂಟರ್ ಉದ್ಯೋಗಿಯಾಗಿದ್ದಾರೆ.
ಇವರಿಗೆ ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಸಿಎ ಎ ರಾಘವೇಂದ್ರ ರಾವ್, ಸಹಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್, ಶ್ರೀನಿವಾಸ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಕಾಲೇಜ್ ಆಂಡ್ ರಿಸೆರ್ಚ್ ಸೆಂಟರ್ನ ಡೀನ್ ಡಾ. ಉದಯ್ ಕುಮಾರ್ ರಾವ್ ಹಾಗೂ ಶ್ರೀನಿವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದರು.