Header Ads
Header Ads
Breaking News

ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈಯನ್ಸ್‍ನ ವಿದ್ಯಾರ್ಥಿ ಸಂಘದ ಹಾಗೂ ಕಾಲೇಜಿನ ಮ್ಯಾಗಜೀನ್ ಬಿಡುಗಡೆ ಸಮಾರಂಭ

 

ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮವನ್ನು ಪಶ್ಚಿಮ ವಲಯ ಐಜಿಪಿ ಅರುಣ್ ಚರ್ಕವರ್ತಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಕಾಲೇಜಿನ ವಾರ್ಷಿಕ ಸಂಚಿಕೆ ರೆಫ್ಲೆಕ್ಷನ್ಸ್‍ನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಜನ್ನು ವಿತರಿಸಲಾಯಿತು.

ಶ್ರೀನಿವಾಸ್ ಯುನಿವರ್ಸಿಟಿಯ ಪ್ರೊಚಾನ್ಸೆಲರ್ ಮತ್ತು ಎ ಶಮ ಫೌಂಡೇಶನ್‍ನ ಉಪಾಧ್ಯಕ್ಷರಾದ ಡಾ.ಎ.ಶ್ರೀನಿವಾಸ್ ರಾವ್ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ಸಂಘದ ನೂತನ ಸದಸ್ಯರಿಗೆ ಶುಭ ಹಾರೈಸಿ. ವಿದ್ಯಾರ್ಥಿಗಳ ಜವಬ್ಧಾರಿಯ ಕುರಿತು ಮಾತನಾಡಿದರು.ಕಾಲೇಜಿನ ಡೀನ್ ಪ್ರೊ. ಡಾ.ಮನೋಜ್ ವರ್ಮ ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.ಈ ಸಂದರ್ಭ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Related posts

Leave a Reply