Header Ads
Breaking News

ಶ್ರೀನಿವಾಸ್ ಯುನಿವರ್ಸಿಟಿಯಲ್ಲಿ ಮಹಿಳಾ ದಿನಾಚರಣೆ

ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ಯುನಿವರ್ಸಿಟಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾಲೇಜಿನ ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮವನ್ನು ವಳಚ್ಚಿಲ್‌ನ ಶ್ರೀನಿವಾಸ್ ಇನ್ಸಿಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಸೋಸಿಯೇಟ್ ಪ್ರೊಪೇಸರ್ ಡಾ. ಅಂಬಿಕಾ ಜಿ ಮಲ್ಯ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಲ್ಲಾ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯ ಸಲ್ಲಿಸಿದರು.

ಆನಂತರ ಶ್ರೀನಿವಾಸ್ ಯುನಿವರ್ಸಿಟಿಯ ಎಂಎಸ್‌ಡಬ್ಲ್ಯು ವಿಭಾಗದ ಮುಖ್ಯಸ್ಥರಾದ ಲವಿನ ಡಿಮೆಲ್ಲೊ ಅವರು ಮಾತನಾಡಿ, ಇವತ್ತಿನ ದಿನದಲ್ಲಿ ಮಹಿಳೆಯರಿಗೆ ಅತ್ಯಂತ ಜವಾಬ್ದಾರಿಯುತ ಸ್ಥಾನವಿದೆ. ಒಬ್ಬ ಹೆಣ್ಣು ಅಕ್ಕಳಾಗಿ, ತಾಯಿಯಾಗಿ, ಅತ್ತಿಗೆಯಾಗಿ, ಹೀಗೆ ಎಲ್ಲಾ ಸ್ಥಾನದಲ್ಲೂ ಮಹತ್ವದ ಜವಾಬ್ದಾರಿಯನ್ನು ತೆಗೆದುಕೊಂಡು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾಳೆ ಎಂದು ಹೇಳಿದರು.
ಈ ಸಂದರ್ಭ ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಪವಿತ್ರ, ಗೋಕರ್ಣನಾಥ್ ಕಾಲೇಜಿನ ಉಪಾನ್ಯಾಸಕಿ ಆಶಾಲತಾ ಸುವರ್ಣ, ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *