Header Ads
Breaking News

ಶ್ರೀನಿವಾಸ್ ವಿವಿಯಯಲ್ಲಿ ಏವಿಯೇಷ ನ್ಸ್ ಮೈಂಟೆನೆ ನ್ಸ್ ಇಂಜಿನಿಯರಿಂಗ್ – ಕಲಿಕೆಗೆ ಪೂರಕವಾಗುವ ನಿಟ್ಟಿನಲ್ಲಿ ವಿಮಾನ ಖರೀದಿ

ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಏವಿಯೇಶನ್ ಮೈಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್‍ನ್ನು ಆರಂಭಿಸಿದ್ದು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ದೃಷ್ಠಿಯಿಂದ ವಿವಿಧ ವಿಮಾನಗಳನ್ನು ಖರೀದಿ ಮಾಡಿದ್ದಾರೆ. ಈಗಾಗಲೇ ಸೆಸ್ನಾ ವಿಮಾನ ಮತ್ತು ಹೆಲಿಕಾಫ್ಟರ್ ಕಾಲೇಜಿನ ಕ್ಯಾಂಪಸ್‍ಗೆ ತಲುಪಿದೆ.ದಕ್ಷಿಣ ಕರ್ನಾಟಕದ ಮೊದಲ ಮತ್ತು ಏಕೈಕ ವಿಶ್ವವಿದ್ಯಾನಿಲಯವಾದ ಶ್ರೀನಿವಾಸ್ ವಿಶ್ವವಿದ್ಯಾಲಯವು ಏವಿಯೇಶನ್ ಮೈಂಟೆನೆನ್ಸ್ ಇಂಜಿನಿಯರಿಂಗ್ ಕೋರ್ಸ್‍ನ್ನು ಆರಂಭಿಸಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವ ನಿಟ್ಟಿನಲ್ಲಿ ವಿವಿಧ ವಿಮಾನಗಳನ್ನು ಖರೀದಿ ಮಾಡಿದ್ದಾರೆ. ಈಗಾಗಲೇ ಸೆಸ್ನಾ ವಿಮಾನ ಮತ್ತು ಹೆಲಿಕಾಫ್ಟರ್ ಕ್ಯಾಂಪಸ್‍ಗೆ ತಲುಪಿದ್ದು, ಇನ್ನೂ 10 ಆಸನಗಳ ಲಿಯರ್ ಜೆಟ್ ವಿಮಾನವು ಶೀಘ್ರದಲ್ಲೇ ಸೇರ್ಪಡೆಗೊಳ್ಳಲಿದೆ.ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಸಿಎ.ಎ ರಾಘವೇಂದ್ರ ರಾವ್ ಅವರೊಂದಿಗೆ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಅವರು ವಿಮಾನಗಳ ಕೀಗಳನ್ನು ಪಡೆದುಕೊಂಡರು. ಇನ್ನು ಮುಂಬರುವ ದಿನಗಳಲ್ಲಿ ಪೈಲೆಟ್ ಆಗ ಬಯಸುವ ವಿದ್ಯಾರ್ಥಿಗಳಿಗೆ ಪೈಲೆಟ್ ಪರವಾನಗಿ ತರಬೇತಿ ನೀಡಲು ಕ್ಯಾಂಪಸ್‍ನಲ್ಲಿ ಹೊಸ ಪ್ಲೈಲೆಟ್ ಸಿಮ್ಯುಲೇಟರ್ ಅನ್ನು ಸಹ ಸ್ಥಾಪಿಸಲಾಗುವು ದು ಎಂದು ಶ್ರೀನಿವಾಸ್ ವಿವಿ ಕುಲಾಧಿಪತಿ ಸಿಎ.ಎ ರಾಘವೇಂದ್ರ ರಾವ್ ತಿಳಿಸಿದರು. ವಿದ್ಯಾರ್ಥಿಗಳಿಗೆ ಉತ್ತಮ ಮಾನ್ಯತೆ ನೀಡುವ ಸಲುವಾಗಿ ವಿಶ್ವವಿದ್ಯಾನಿಲಯವು ಎಂ.ಹೆಚ್ ಕಾಕ್‍ಪಿಟ್‍ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. 3 ದಶಕಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮತ್ತು ಡಿಜಿಸಿಎ ಎಂಪನೇಲ್ ಮಾಡಿದ ಪ್ರಮುಖ ವಿಮಾನಗಳ ಇಂಜಿನಿಯರ್‍ಗಳು ತರಬೇತಿಯನ್ನು ನೀಡಲಿದ್ದಾರೆ.

Related posts

Leave a Reply

Your email address will not be published. Required fields are marked *