Header Ads
Breaking News

ಶ್ರೀನಿವಾಸ್ ವಿವಿಯಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ

ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಕಾಲೇಜ್ ಆಫ್ ಕಂಪ್ಯೂಟರ್ ಸಯನ್ಸ್ ಮತ್ತು ಇನ್ಪಾರ್ಮೆಶನ್ ವತಿಯಿಂದ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಡಿಸೆಂಬರ್ 19ರಂದು ಆಯೋಜಿಸಲಾಗಿದೆ.

ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಎ ಶಾಮ ರವ್ ಪೌಂಡೇಶನ್‍ನ ಅಧ್ಯಕ್ಷರು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಸಿಎ.ಎ ರಾಘವೇಂದ್ರ ರಾವ್, ಮಂಗಳೂರಿನ ದಿಯಾ ಸಿಸ್ಟಮ್‍ನ ಕಾರ್ಪರೇಟ್ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಶ್ಯಾಮ್ ಪ್ರಸಾದ್ ಮುಖ್ಯ ಅತಿಥಿಗಳಾಗಿ ಶ್ರೀನಿವಾಸ್ ವಿವಿಯ ಸಹಕುಲಪತ ಡಾ. ಶ್ರೀನಿವಾಸ್ ರಾವ್, ಎ. ಶಾಮರಾವ್ ಪ್ರತಿಷ್ಠಾನದ ನಿರ್ದೇಶಕರಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್, ಕಾರ್ಯದರ್ಶಿ ಶ್ರೀಮತಿ ಮಿತ್ರಾ ಎಸ್. ರಾವ್, ಶ್ರೀನಿವಾಸ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ಪಿ. ಎಸ್. ಐತಾಳ್ ರವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿರುವರು.

ಕೋಲ್ಕೊತಾದ ಬ್ರೈನ್ ವೇರ್ ವಿಶ್ವವಿದ್ಯಾನಿಲಯದ ಕಂಪ್ಯುಟೇಶನಲ್ ಸಯನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಜೇಶ್ ಬೋಸ್ ಇವರಿಂದ “ಗ್ರೀನ್ ಕಂಪ್ಯೂಟಿಂಗ್’ ಹಾಗೂ ನಿಟ್ಟೆಯ ಎನ್. ಎಂ.ಎ.ಎಂ.ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ವೇಣುಗೋಪಾಲ ಪಿ.ಎಸ್. ಇವರಿಂದ “ ವಾಣಿಜ್ಯ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಡೇಟಾ ಸಯನ್ಸ್ ನ ಅನ್ವಯಿಕೆಗಳು” ಎಂಬ ವಿಷಯಗಳ ಬಗ್ಗೆ ತಾಂತ್ರಿಕ ಉಪನ್ಯಾಸ ನಡೆಯಲಿದೆ. ಸುಮಾರು ಮೂವತ್ತಕ್ಕೂ ಹೆಚ್ಚಿನ ಸಂಶೋಧನ ಲೇಖನಗಳನ್ನು ಈ ವಿಚಾರ ಸಂಕಿರಣದಲ್ಲಿ ಮಂಡಿಸಲಾಗುತ್ತದೆ ಎಂದು ಡೀನ್ ಪ್ರೊ. ಶ್ರೀಧರ ಆಚಾರ್ಯ ಮತ್ತು ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಿ.ಸಿ.ಐ.ಸ್. ನ ಸಹಾಯಕ ಪ್ರಾಧ್ಯಾಪಕರಾದ ಡಾ. ಕೃಷ್ಣಪ್ರಸಾದ್ ಕೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಿ.ಸಿ.ಐ.ಸ್. ನ ಸಹಾಯಕ ಪ್ರಾಧ್ಯಾಪಕರಾದ ಡಾ. ಕೃಷ್ಣಪ್ರಸಾದ್ ಕೆ ಇವರು ವಿಚಾರ ಸಂಕಿರಣದ ಸಂಯೋಜಕರಾಗಿ, ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಿ.ಸಿ.ಐ.ಸ್. ನ ಡೀನ್ ಪ್ರೊ. ಶ್ರೀಧರ ಆಚಾರ್ಯರವರು ವಿಚಾರ ಸಂಕಿರಣದ ನಿರ್ದೇಶಕರಾಗಿ ಹಾಗೂ ಶ್ರೀನಿವಾಸ ವಿಶ್ವವಿದ್ಯಾನಿಲಯದ ಡಾ. ಎ. ಜಯಂತಿಲಾ ದೇವಿ ವಿಚಾರ ಸಂಕಿರಣದ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವರದಿ: ಬ್ಯೂರೋ ಮಂಗಳೂರು

Related posts

Leave a Reply

Your email address will not be published. Required fields are marked *