

ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ಆಫ್ ಸೋಶಿಯಲ್ ಸೈನ್ಸಸ್ ಅಂಡ್ ಹ್ಯೂಮ್ಯಾನಿಟೀಸ್ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ಸಮಾಜ ವಿಜ್ಞಾನ, ಮಾಹಿತಿ ಮತ್ತುತಂತ್ರಜ್ಞಾನ ಹಾಗೂ ವ್ಯವಹಾರದಲ್ಲಿ ವೆಬ್ ಉನ್ನತ ಶಿಕ್ಷಣ ಎನ್ನುವ ವಿಷಯದ ಕುರಿತು ಒಂದು ದಿನದರಾಷ್ಟ್ರೀಯ ಮಟ್ಟದ ವರ್ಚುವಲ್ ವಿಚಾರ ಸಂಕಿರಣ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿತ್ತು.ಯುನಿವರ್ಸಿಟಿ ಆಫ್ ಮೈಸೂರಿನ ಅಸೋಸಿಯೇಟ್ ಪ್ರೋಫೆಸರ್ ಹಾಗೂ ಸೆಂಟರ್ ಫಾರ್ ಸ್ಟಡಿ ಆಫ್ ಸೋಶಿಯಲ್ ಎಕ್ಸ್ ಪ್ಲ್ಯೂಶನ್ ಆಂಡ್ ಇನ್ಕ್ಲ್ಯುಸಿವ್ ಕ್ವಾಲಿಟಿ ಹ್ಯೂಮ್ಯಾನಿಟೀಸ್ ಬ್ಲಾಕ್ನ ನಿರ್ದೇಶಕ ಡಾ. ಡಿ. ಸಿ. ನಂಜುಂಡ ಅವರು ಮುಖ್ಯಅತಿಥಿಯಾಗಿ ಭಾಗವಹಿಸಿ, ಸಮಾಜ ವಿಜ್ಞಾನ, ಮಾಹಿತಿ ತಂತ್ರಜ್ಞಾನ ಹಾಗೂ ನಿರ್ವಹಣೆಯ ಕುರಿತು ಮಾತನಾಡಿದರು. ಇತ್ತಿಚಿನ ದಿನಗಳಲ್ಲಿ ಇತರೆ ಪದವಿಗಳಿಗೆ ಹೋಲಿಸಿದಾಗ ಸಮಾಜ ವಿಜ್ಞಾನವನ್ನು ಆಯ್ದುಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.ಈ ವಿಷಯಗಳು ಮಾರುಕಟ್ಟೆಯ ಹಾಗೂ ಸಮಾಜದ ಅವಶ್ಯಕತೆಗಳಿಗುಣವಾಗಿ ಪಠ್ಯ ಕ್ರಮಗಳನ್ನು ನವೀಕರಿಸುವುದರಿಂದ ಇಂತಹ ಆಸಕ್ತಿದಾಯಕ ವಿಷಯಗಳನ್ನು ತಮ್ಮ ಶೈಕ್ಷಣಿಕ ಪದವಿಯಲ್ಲಿ ಆಯ್ದುಕೊಳ್ಳಲು ಮುಂಬರುತ್ತಾರೆ ಎಂದುಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀನಿವಾಸ್ ವಿಶ್ವ ವಿದ್ಯಾಲಯದ ಡಾ. ಪಿಎಸ್ ಐತಾಳ್ ವಹಿಸಿದರು.ನವೀನ ಶಿಕ್ಷಣ ಮತ್ತು ಕಲಿಕೆಯ ತಂತ್ರಗಳು ಎಂಬ ವಿಷಯದ ಕುರಿತು ಡಾ. ಲೂರ್ದುಸಾಮಿ, ಶಿಕ್ಷಣದಲ್ಲಿ ಬಿಕ್ಕಟ್ಟಿನ ನಿರ್ವಹಣೆ ಎಂಬ ವಿಷಯದ ಕುರಿತು ಡಾ. ಮೀನ ಜೂಲಿಯೆಟ್ ಮೊಂತೆರೋ, ಮಾನಸಿಕ ಆರೋಗ್ಯ ಮತ್ತು ನ್ಯೂ ನೋರ್ಮಲ್ ಎಂಬ ವಿಷಯದ ಕುರಿತುಡಾ. ಕೆ. ಟಿ, ಶ್ವೇತ ಮಾತನಾಡಿದರು.ಈ ವಿಚಾರ ಸಂಕಿರಣದಲ್ಲಿ ಒಟ್ಟು 49 ಸಂಶೋಧನಾ ಸಾರಾಂಶಗಳನ್ನು ಸ್ವೀಕರಿಸಿ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ಅಧ್ಯಾಪಕರು ತಮ್ಮ ಸಂಶೋಧನಾ ಬರಹಗಳನ್ನು ಮಂಡಿಸಿದರು. ಈ ಸಂಧರ್ಭ ಎ.ಜೆ. ಇನ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್ನ ಪ್ರೋಫೆಸರ್ ಡಾ. ಸುಫಲ ಎಸ್. ಕೋಟ್ಯಾನ್, ಶ್ರೀನಿವಾಸ್ ವಿವಿಯ ಕಾಲೇಜ್ ಆಫ್ ಸೋಶಿಯಲ್ ಸೈನ್ಸಸ್ ಅಂಡ್ ಹ್ಯೂಮ್ಯಾನಿಟೀಸ್ ಡೀನ್ ಅವರು ಸಂಶೋಧನಾ ಬರಹಗಳಿಗೆ ಸಲಹೆಗಳನ್ನು ನೀಡಿದರು.