ಮಂಗಳೂರು: ಹೊಲೋಸೂಟ್, ಸಿಂಗಾಪುರ ಹಾಗೂ ಶ್ರೀನಿವಾಸ್ ವಿಶ್ವವಿದ್ಯಾಲಯ ಮಂಗಳೂರು ಇದರ ಸಹಯೋಗದಲ್ಲಿ ರೋಬೊಟಿಕ್ಸ್ ವಿಷಯದ ಕುರಿತು ಕಾರ್ಯಗಾರವನ್ನು ಮುಕ್ಕದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಆಯೋಜಿಸಲಾಯಿತು.
ಹೋಲೋಸೂಟ್ ಸಿಂಗಾಪೂರ್ ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರ್ಷ ಕಿಕ್ಕೇರಿ ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಮಾತನಾಡಿದ ಅವರು ವಿದ್ಯಾರ್ಥಿಗಳನ್ನು ಸೃಜನ ಶೀಲರನ್ನಾಗಿ ಮಾಡುವುದು ಅವರ ಗುರಿಯಾಗಿದೆ ಎಂದರು. ವಿದ್ಯಾರ್ಥಿಗಳು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯೊಂದಿಗೆ ಸೃಜನಶೀಲ ಭಾರತವನ್ನಾಗಿ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ವರ್ಚುವಲ್ ರಿಯಾಲಿಟಿ ಅನ್ನು ಬಳಸಿ ಭಾರತೀಯ ಸೇನೆಗೆ ತರಬೇತಿಗಳನ್ನು ಹೋಲೋಸೂಟ್ ನೀಡುತ್ತಿವೆ.ರೋಬೋಟ್ಗಳು ದೇಶವನ್ನು ರಕ್ಷಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದೆ. ಭಾರತೀಯ ಸೈನ್ಯದಲ್ಲಿ ರೋಬೊಟನ್ನು ಬಳುಸುವುದರಿಂದಾಗಿ ಸೈನಿಕರ ಜೀವವನ್ನು ಉಳಿಸಬಹುದು ಎಂದರು. ಅಂತೆಯೇ ಕೃಷಿಯಲ್ಲಿ ತಂತ್ರಜ್ಞಾನದ ಪರಿಕಲ್ಪನೆಯೊಂದಿಗೆ ರೋಬೋಟಿಕ್ ಬಳಸಿ ಉತ್ತಮ ರೀತಿಯಲ್ಲಿ ಕಾರ್ಯಾಚರಿಸಬಹುದು ಎಂದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾಕ್ಟರ್ ಪಿಎಸ್ ಐತಾಳ್ ಅವರು ಹೊಲೋಸೂಟ್ ಸಹಯೋಗದ ಪ್ರಯೋಜನಗಳು ಹಾಗೂ ಭವಿಷ್ಯದಲ್ಲಿ ಈ ಕ್ಷೇತ್ರಗಳಲ್ಲಿರುವ ಅವಕಾಶಗಳ ಬಗ್ಗೆ ವಿವರಿಸಿದರು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ವರ್ಚುವಲ್ ರಿಯಾಲಿಟಿ, ರೊಬೊಟಿಕ್ಸ್ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗ ಕ್ಷೇತ್ರಗಳಾಗಿದ್ದು, ಶ್ರೀನಿವಾಸ್ ವಿಶ್ವವಿದ್ಯಾಲಯವು ಹೋಲೋ ಸೂಟ್ ಸಹಯೋಗದೊಂದಿಗೆ ರೋಬಾಟಿಕ್ಸ್, ಎಐ, ಐಒಟಿ ಮತ್ತು ಎಂಎಲ್ ಕ್ಷೇತ್ರಗಳಲ್ಲಿ ಬಿಟೆಕ್ ಕೋರ್ಸ್ ಅನ್ನು ಒದಗಿಸುವದಕ್ಷಿಣ ಭಾರತದ ಏಕೈಕ ವಿಶ್ವವಿದ್ಯಾನಿಲಯವಾಗಿದೆ ಎಂದರು.
ಶ್ರೀನಿವಾಸ್ ವಿಶ್ವವಿದ್ಯಾಲಯ ಕಾಲೇಜ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿ ಡೀನ್ ಹಾಗೂ ಪ್ರಾಂಶುಪಾಲಡಾ. ಥೋಮಸ್ ಪಿಂಟೋ ಅತಿಥಿಗಳನ್ನು ಸ್ವಾಗತಿಸಿದರು. ಈ ವೇಳೆ ಕುಲಸಚಿವ ಡಾ. ಅನಿಲ್ ಕುಮಾರ್, ಲೆಫ್ಟಿನೆಂಟ್ಡಾ. ಸುರೇಶ್ ಕುಮಾರ್ ಮತ್ತು ವಿಭಾಗ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.