Header Ads
Breaking News

ಶ್ರೀನಿವಾಸ ವಿಶ್ವವಿದ್ಯಾಲಯ, ಶ್ರೀನಿವಾಸ ಶಿಕ್ಷಣ ಸಮೂಹ ಸಂಸ್ಥೆಗಳು ಸಂಸ್ಥಾಪಕರ ದಿನಾಚರಣೆಮತ್ತು ವಾರ್ಷಿಕೋತ್ಸವ 2019-20

 

ಮಂಗಳೂರು, ಫೆಬ್ರವರಿ12 : ಎ. ಶಾಮರಾವ್ ಪ್ರತಿಷ್ಠಾನದಅಧ್ಯಕ್ಷರಾದ ಶ್ರೀ ಸಿಎ ಎ. ರಾಘವೇಂದ್ರರಾವ್ ಮತ್ತುಉಪಾಧ್ಯಕ್ಷರಾದಡಾ. ಎ. ಶ್ರೀನಿವಾಸ್‍ರಾವ್‍ಅವರ ಮಾರ್ಗದರ್ಶನದಲ್ಲಿ ಸಂಸ್ಥಾಪಕರ ದಿನಾಚರಣೆ, ಕಾಲೇಜು ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನವುಮುಕ್ಕಾದ ಶ್ರೀನಿವಾಸ ನಗರದ ಶ್ರೀನಿವಾಸ್ ವಿಶ್ವವಿದ್ಯಾಲಯಕ್ಯಾಂಪಸ್‍ನಲ್ಲಿ ಫೆಬ್ರವರಿ 14 ಮತ್ತು 15 ರಂದು ನಡೆಯಲಿವೆಎಂದುಸಂಸ್ಥಾಪಕರ ದಿನದ ಸಂಯೋಜಕರು ಹಾಗೂಎಸ್.ಐ.ಡಿ.ಎಸ್. ಡೀನ್, ಡಾ. ಮನೋಜ್ ವರ್ಮನಗರದಲ್ಲಿ ನಡೆದಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಫೆಬ್ರವರಿ 14 ರಂದು ಬೆಳಗ್ಗೆ 9.30 ಕ್ಕೆ ಶ್ರೀನಿವಾಸ ವಿಶ್ವವಿದ್ಯಾಲಯ ಹಾಗೂ ಶ್ರೀನಿವಾಸ ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕರ ದಿನಾಚರಣೆ ಹಾಗೂ ಕಾಲೇಜು ವಾರ್ಷಿಕೋತ್ಸವವು ನಡೆಯಲಿದ್ದು, ಈ ಕಾರ್ಯಕ್ರಮದಉದ್ಘಾಟಕರಾಗಿರಾಜ್ಯ ಮುಜುರಾಯಿ, ಬಂದರು ಮತ್ತು ಒಳನಾಡು ಸಾರಿಗೆ ಹಾಗೂ ದಕ್ಷಿಣಕನ್ನಡಜಿಲ್ಲಾಉಸ್ತುವಾರಿ ಸಚಿವ ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿಹಾಗೂ ಕಾರ್ಯಕ್ರಮದಮುಖ್ಯ ಅತಿಥಿಗಳಾಗಿ ದಕ್ಷಿಣಕನ್ನಡಜಿಲ್ಲಾ ಪಂಚಾಯತ್‍ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಡಾ. ಸೆಲ್ವಮಣಿಆರ್. ಪಾಲ್ಗೊಳ್ಳಲಿರುವರು.

ಫೆಬ್ರವರಿ 15 ರಂದು ಶ್ರೀನಿವಾಸ ಶಿಕ್ಷಣ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಗಳು ನಡೆಯಲಿವೆ.ಈ ಎರಡೂ ದಿನಗಳ ಕಾರ್ಯಕ್ರಮಕ್ಕೂ ಶ್ರೀನಿವಾಸ ವಿಶ್ವವಿದ್ಯಾಲಯದಕುಲಾಧಿಪತಿ ಹಾಗೂ ಎ. ಶ್ಯಾಮರಾವ್ ಫೌಂಡೇಶನ್‍ನಅಧ್ಯಕ್ಷರಾದ ಶ್ರೀ ಸಿಎ ಎ. ರಾಘವೇಂದ್ರರಾವ್‍ಅವರುಅಧ್ಯಕ್ಷತೆ ವಹಿಸಲಿದ್ದು, ಶ್ರೀನಿವಾಸ ವಿಶ್ವವಿದ್ಯಾಲಯದಉಪಕುಲಾಧಿಪತಿಡಾ. ಎ. ಶ್ರೀನಿವಾಸ ರಾವ್‍ಗೌರವಅತಿಥಿಯಾಗಿ ಉಪಸ್ಥಿತಲಿರುವರುಎಂದರು.

ಎ. ಶಾಮರಾವ್ ಸ್ಮಾರಕ ಶಿಕ್ಷಕ ಪ್ರಶಸಿಎ. ಶಾಮರಾವ್ ಸ್ಮಾರಕ ಪ್ರಶಸ್ತಿ :
ಎ. ಶಾಮರಾವ್ ಪ್ರತಿಷ್ಠಾನವು ಅವಿಭಜಿತದಕ್ಷಿಣಕನ್ನಡಜಿಲ್ಲೆಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ನೀಡುವ ಎ. ಶಾಮರಾವ್ ಸ್ಮಾರಕಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಸ್ತುತ 2020ರ ಸಾಲಿನಲ್ಲಿ ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ಸಂಸ್ಕøತ ಶಿಕ್ಷಕ ಡಾ. ರಾಘವೇಂದ್ರರಾವ್ ಮತ್ತು ಮಂಗಳೂರು ವಾಮಂಜೂರಿನಎಸ್.ಡಿ.ಎಂ. ಮಂಗಳ ಜ್ಯೋತಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಕಸ್ತೂರಿಯವರುಹಾಗೂಅತ್ಯುನ್ನತ ಸಾಮಾಜಿಕ ಸೇವೆಗೆ ನೀಡಲ್ಪಡುವ ಎ. ಶಾಮರಾವ್ ಸ್ಮಾರಕ ಪ್ರಶಸ್ತಿಯನ್ನು ಸುಳ್ಯ ತಾಲೂಕಿನ ಸೇತು ಬಂಧು, ಬ್ರಿಡ್ಜ್ ಮ್ಯಾನ್‍ಆಫ್‍ಇಂಡಿಯಾ ಶ್ರೀ ಗಿರೀಶ್ ಭಾರಧ್ವಜ್‍ಅವರ ಸೇವೆಯನ್ನು ಗುರಿತಿಸಿ ಎ. ಶಾಮ ರಾವ್ ಸ್ಮಾರಕ ಪ್ರಶಸ್ತಿಯನ್ನುಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯದಆವರಣದಲ್ಲಿ ಫೆಬ್ರವರಿ 14 ರಂದು ನಡೆಯುವ ಎ. ಶಾಮರಾವ್ ಪ್ರತಿಷ್ಠಾನದ ವಾರ್ಷಿಕೋತ್ಸವ ಸಮಾರಂಭದಲ್ಲಿಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದುಎಂದುಶ್ರೀನಿವಾಸ ವಿಶ್ವವಿದ್ಯಾಲಯದಕುಲಸಚಿವರು (ಇವಾಲ್ಯುವೇಶನ್),ಡಾ. ಶ್ರೀನಿವಾಸ್ ಮಯ್ಯ ಡಿ. ಮಾಹಿತಿ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿಡಾ. ಪಿ. ಎಸ್. ಐತಾಳ್, ಕುಲಪತಿವರು, ಶ್ರೀನಿವಾಸ ವಿಶ್ವವಿದ್ಯಾಲಯಡಾ. ,ಅನಿಲ್ ಕುಮಾರ್, ಕುಲಸಚಿವರು, ಶ್ರೀನಿವಾಸ ವಿಶ್ವವಿದ್ಯಾಲಯ, ಡಾ. ಶ್ರೀನಿವಾಸ್ ಮಯ್ಯ ಡಿ., ಕುಲಸಚಿವರು (ಇವಾಲ್ಯುವೇಶನ್), ಶ್ರೀನಿವಾಸ ವಿಶ್ವವಿದ್ಯಾಲಯ, ಡಾ. ಅಜಯ್, ಕುಲಸಚಿವರು (ಅಭಿವೃದ್ಧಿ), ಶ್ರೀನಿವಾಸ ವಿಶ್ವವಿದ್ಯಾಲಯ, ಡಾ. ಮನೋಜ್ ವರ್ಮ, ಡೀನ್‍ಎಸ್.ಐ.ಡಿ.ಎಸ್. ಹಾಗೂ ಸಂಸ್ಥಾಪಕರ ದಿನದ ಸಂಯೋಜಕರು ಹಾಜರಿದ್ದರು

ವಿದ್ಯಾರ್ಥಿಗಳನ್ನು ಚಾರಿತ್ರ್ಯವಂತ ಮತ್ತುದೇಶದಜವಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಣವನ್ನು ಕೊಡುವಉದ್ದೇಶದೊಂದಿಗೆ 1988ರಲ್ಲಿ ಸ್ಥಾಪಿತವಾದ ಮಂಗಳೂರಿನ ಶ್ರೀನಿವಾಸ ಶಿಕ್ಷಣ ಸಂಸ್ಥೆಗಳ ಸಮೂಹವು 32 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.
ತಾಂತ್ರಿಕ, ವೈದ್ಯಕೀಯ, ದಂತ ವೈದ್ಯಕೀಯ, ಔಷಧ ವಿಜ್ಞಾನ, ಉದ್ಯಮ ನಿರ್ವಹಣೆ, ಮೂಲ ವಿಜ್ಞಾನ, ಶಿಕ್ಷಕ ಶಿಕ್ಷಣ, ನರ್ಸಿಂಗ್, ಆತಿಥ್ಯ ವಿಜಾÐನ, ಹೊಟೆಲ್ ಆಡಳಿತ, ಆಸ್ಪತ್ರೆ ಆಡಳಿತ, ವಾಯುಯಾನ ನಿರ್ವಹಣೆ, ಬಂದರು ನಿರ್ವಹಣೆ, ಮಾಧ್ಯಮ ನಿರ್ವಹಣೆ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹೀಗೆ ವೈವಿಧ್ಯ ಪೂರ್ಣ ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣಗಳನ್ನು ಒದಗಿಸುವಎಲ್ಲಾ ಶ್ರೀನಿವಾಸ ಶಿಕ್ಷಣ ಸಂಸ್ಥೆಗಳೂ ಒಂದಾಗಿತಮ್ಮ ವಾರ್ಷಿಕ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿವೆ. ಶ್ರೀನಿವಾಸ ಸಮೂಹ ಸಂಸ್ಥೆಗಳ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.

ಮೇಲಿನ ದಿನಗಳಂದು ಹೊಟೇಲ್ ಶ್ರೀನಿವಾಸದಿಂದ ಬೆಳಿಗ್ಗೆ 9 ಗಂಟೆಗೆ ಪತ್ರಿಕಾ ಪ್ರತಿನಿಧಿಗಳಿಗೆ ವಾಹನ ವ್ಯವಸ್ಥೆ ಮಾಡಲಾಗಿದ್ದು ಹೆಚ್ಚಿನ ವಿವರಗಳಿಗೆ ಪ್ರೊ. ಅಶ್ವಿನಿ (8105935088) ಸಂಪರ್ಕಿಸಬಹುದಾಗಿದೆ.

Related posts

Leave a Reply

Your email address will not be published. Required fields are marked *