Header Ads
Header Ads
Header Ads
Breaking News

ಶ್ರೀಮಂತ ರಾಜಗುಳಿಗ ಕ್ಷೇತ್ರ ಮತ್ತು ಅಷ್ಟ ಪವಿತ್ರ ನಾಗಮಂಡಲೋತ್ಸವ : ಡಿ.18ರಿಂದ 25ರ ವರೆಗೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ

ಪಚ್ಚನಾಡಿಯ ಮೂಡುಮನೆ ಗುತ್ತು ಬಂದಲೆಯಲ್ಲಿರುವ ಶ್ರೀಮಂತ ರಾಜಗುಳಿಗ ಕ್ಷೇತ್ರದಲ್ಲಿರುವ ನಾಗಬನದಲ್ಲಿ ಡಿಸೆಂಬರ್ 18ರಿಂದ 25ರ ವರೆಗೆ ಅಷ್ಠಪವಿತ್ರ ನಾಗಮಂಡಲೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷರಾದ ಕ್ಷೇತ್ರದ ಧರ್ಮದರ್ಶಿ ಸತೀಶ್ ಬಂದಲೆ ತಿಳಿಸಿದರು. ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜಶ್ರೀ ಪದ್ಮಭೂಷಣ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಶುಭಾರ್ಶೀವಾದದೊಂದಿಗೆ ದಿನೇಶ್ ಪೆಜತ್ತಾಯ ಪೂಮಾವರ ಗುತ್ತು ಇವರ ನೇತೃತ್ವದಲ್ಲಿ ನಾಗಪ್ರತಿಷ್ಠೆ ಆಶ್ಲೇಷ ಬಲಿ, ತನ ತಂಬಿಲ ಸೇವೆ, ನಾಗತನುತರ್ಪಣ ಸೇವೆ ನಡೆಯಲಿರುವುದು.ಡಿಸೆಂಬರ್ 21ರಂದು ವೇದಮೂರ್ತಿ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ ಅಷ್ಠ ಪವಿತ್ರ ನಾಗಮಂಡಲೋತ್ಸವ ವೈಭವವು ನಡೆಯಲಿದೆ. ಶ್ರೀಮಂತ ರಾಜಗುಳಿಗ ದೈವದ ವೈಭವದ ಕೋಲೋತ್ಸವವು ನಡೆಯಲಿದೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷರಾದ ಗಣೇಶ್ ಬಂಗೇರಾ, ಪ್ರಧಾನ ಕಾರ್ಯದರ್ಶಿ ಎಂ. ಮಧುಚಂದ್ರ ಗುರುನಗರ, ಕೋಶಾಧಿಕಾರಿ ಕಮಲಾಕ್ಷ ಎ ಬಂಗೇರ, ಪ್ರಚಾರ ಸಮಿತಿಯ ಸಂಚಾಲಕರಾದ ಬಾಲಕೃಷ್ಣ ಪಚ್ಚನಾಡಿ ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *