Header Ads
Header Ads
Breaking News

ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ಹಿನ್ನೆಲೆ,ಪ್ರೊ.ಭಗವಾನ್ ವಿರುದ್ಧ ಕೇಸು ದಾಖಲಿಸುತ್ತೇವೆ : ಹೇಮನಾಥ ಶೆಟ್ಟಿ ಹೇಳಿಕೆ

ಹಿಂದೂಗಳು ಆರಾಧಿಸುವ ಶ್ರೀರಾಮಚಂದ್ರನ ಬಗ್ಗೆ ಲಘುವಾಗಿ, ಅವಹೇಳನಕಾರಿಯಾಗಿ ಪದೇ ಪದೇ ಮಾತನಾಡುತ್ತಿರುವ ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಅವರ ವಿರುದ್ಧ ಪೊಲೀಸ್ ಕೇಸು ದಾಖಲಿಸಿ, ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಲು ನಿರ್ಧರಿಸಿದ್ದೇವೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದ್ದಾರೆ. ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ, ಮುಸ್ಲಿಂ ಸೇರಿದಂತೆ ಯಾವುದೇ ಧರ್ಮದ ಶ್ರದ್ಧಾ ಕೇಂದ್ರಗಳು, ದೇವರು, ಪ್ರವಾದಿಗಳನ್ನು ಅವಹೇಳನ ಮಾಡುವುದು ಸಮಾಜದ ಶಾಂತಿ ಕೆಡಿಸುವ ದುರುದ್ದೇಶ ಹೊಂದಿದೆ. ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲೇಬೇಕು. ಕೋಟ್ಯಂತರ ಹಿಂದೂಗಳು ನಂಬುವ ಶ್ರೀರಾಮನ ಬಗ್ಗೆ ಪದೇ ಪದೇ ಹಗುರವಾಗಿ ಮಾತನಾಡುವುದು ಸರಿಯಲ್ಲ. ಶ್ರೀರಾಮ ಯವುದೇ ಒಂದು ಪಕ್ಷದವರ ಸೊತ್ತಲ್ಲ. ಆತ ಇಡೀ ಭಾರತೀಯರ ಪ್ರತಿನಿಧಿ. ಅಂಥ ಶಕ್ತಿಯ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಬಂದಿರುವ ಭಗವಾನ್ ವಿರುದ್ಧ ಸರಕಾರ ಪೊಲೀಸ್ ಇಲಾಖೆಗೆ ಸೂಚನೆ ನೀಡಿ ಸ್ವಯಂ ಪ್ರೇರಿತ ಕೇಸು ದಾಖಲಿಸಬೇಕು. ಕಾನೂನು ಚೌಕಟ್ಟಿನೊಳಗೆ ಅವರನ್ನು ತರಬೇಕು. ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ನಾವು ಎಲ್ಲ ಧರ್ಮಗಳನ್ನು ಗೌರವಿಸುತ್ತಾ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಲೋಕೇಶ್ ಹೆಗ್ಡೆ, ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಕಾಸಿಂ, ಕೊರಗಪ್ಪ ಗೌಡ ಮತ್ತು ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply