Header Ads
Breaking News

ಶ್ರೀರಾಮ ಸೇನೆ ಕಾರ್ಯಕರ್ತನ ಬಂಧನಕ್ಕೆ ಆಕ್ರೋಶ: ಶ್ರೀರಾಮಸೇನೆ ಕಾರ್ಯಕರ್ತರ ಪ್ರತಿಭಟನೆ

 ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಶ್ರೀರಾಮಸೇನೆ ಕಾರ್ಯಕರ್ತನ ಬಂಧನವನ್ನು ಖಂಡಿಸಿ ಮಂಗಳೂರಲ್ಲಿ ಶ್ರೀರಾಮಸೇನೆ ನೇತೃತ್ವದಲ್ಲಿ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು .ಆಸ್ಪತ್ರೆಗೆ ಬರುವ ರೋಗಿಗಳ ನಿರ್ಲಕ್ಷ, ಕಡೆಗಣಿಸುವಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಆಸ್ಪತ್ರೆಯ ಅಧಿಕಾರಿ ರಾಜೇಶ್ವರಿಯನ್ನ ವರ್ಗಾಯಿಸಬೇಕೆಂದು ಪಟ್ಟುಹಿಡಿದರು. ಮೂರು ದಿನಗಳ ಹಿಂದೆ ಮಂಗಳೂರು ಬಲ್ಮಠ ಎಂಬಲ್ಲಿ ರಸ್ತೆ ಅಪಘಾತವಾಗಿದ್ದು ಅಪಘಾತದಲ್ಲಿ ಗಾಯಗೊಂಡ ಯುವಕನನ್ನು ಶ್ರೀ ರಾಮ ಸೇನೆಯ ಕಾರ್ಯಕರ್ತ ಆಸ್ಪತ್ರೆಗೆ ಸೇರಿಸಿದ್ದು, ಆಸ್ಪತ್ರೆಯಲ್ಲಿ ಗಾಯಾಳುವನ್ನು ಚಿಕಿತ್ಸೆ ನೀಡದೆ 1 ಗಂಟೆಗಳ ಕಾಲ ಸತಾಯಿಸಿದನ್ನು, ಶ್ರೀರಾಮಸೇನೆಯ ಕಾರ್ಯಕರ್ತ ಪ್ರಶ್ನಿಸಿ, ಅಲ್ಲಿನ ಸ್ಥಿತಿಯನ್ನು ತನ್ನ ಮೊಬೈಲ್ನಿಂದ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ವೈದ್ಯಾಧಿಕಾರಿ ಆತನ ಮೇಲೆ ಪೋಲೀಸರಿಗೆ ದೂರು ನೀಡಿದ್ದರು, ಪೊಲೀಸರು ದೂರಿನ ಅನ್ವಯ ರಾತೋರಾತ್ರಿ ವಿಡಿಯೋ ಚಿತ್ರೀಕರಣ ಮಾಡಿದ ಯುವಕನನ್ನು ಬಂಧಿಸಿದ್ದರು, ಇದನ್ನು ಕೂಡ ಖಂಡಿಸಿ ಶ್ರೀರಾಮಸೇನೆ, ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ಹಮ್ಮಿಕೊಂಡಿತ್ತು. ಪ್ರತಿಭಟನೆಯಲ್ಲಿ ಆನಂದ್ ಶೆಟ್ಟಿ ಅಡ್ಯಾರ್ , ಹರೀಶ್ , ಪ್ರದೀಪ್ .ಪ್ರಸಾದ್ ,ಅರುಣ್ ಕದ್ರಿ ,ಉಲ್ಲಾಸ್ ಜೀವನ್ ನೀರ್ಮಾರ್ಗ ಮತ್ತಿತ್ತರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *