Header Ads
Header Ads
Breaking News

ಶ್ರೀರಾಮ ಸೇನೆ, ಮುತಾಲಿಕ್ ರಾಜಕೀಯದಿಂದ ದೂರ ಸರಿದಾಗಿದೆ

ಶ್ರೀರಾಮ ಸೇನೆ, ಮುತಾಲಿಕ್ ರಾಜಕೀಯ ದಿಂದ ದೂರ ಸರಿದಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಯಿಲ್ಲ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ಹೊಲಸು ರಾಜಕಾರಣದಲ್ಲಿ ಪ್ರಾಮಾಣಿಕತೆ, ಹಿಂದುತ್ವಕ್ಕೆ ಜನಬೆಂಬಲ ಇಲ್ಲ. ಗೂಂಡಾಗಿರಿ ಮತ್ತು ದುಡ್ಡೇ ಮಾನದಂಡವಾಗಿದೆ. ಯಾರಿಗೆ ಬೆಂಬಲ ಅನ್ನೋದು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡ್ತೇವೆ.ಮೋದಿ ನೂರಕ್ಕೆ ನೂರು ಒಳ್ಳೇ ಕೆಲಸ ಮಾಡ್ತಿದಾರೆ. ಆದ್ರೆ ಬಿಜೆಪಿ ಪಾರ್ಟಿ ಇನ್ನೂ ಸುಧಾರಣೆ ಆಗಿಲ್ಲ. ರಾಜ್ಯ ರಾಜಕೀಯ ಅಸಹ್ಯಕರವಾಗಿದೆ. ಮೂರೂ ಪಕ್ಷ ಧಿಕ್ಕರಿಸಿ ಹೊಸ ಪಕ್ಷ ಮಾಡುವ ಅನಿವಾರ್ಯತೆಯಿದೆ.ಒಬ್ರು ಆಡಿಯೋ ಬಿಡುಗಡೆ ಮಾಡ್ತಾರೆ, ಮತ್ತೊಬ್ರು ನಾಳೆ ವಿಡಿಯೋ ಬಿಡುಗಡೆ ಮಾಡ್ತಾರಂತೆ. ವಿಡಿಯೋ ಇದ್ರೆ ಮೊದಲೇ ಯಾಕೆ ಬಿಡುಗಡೆ ಮಾಡಿಲ್ಲ? ಬಿಜೆಪಿ ಯವರು ಇನ್ನೂ ಮಾನನಷ್ಟ ಮೊಕದ್ದಮೆ ಯಾಕೆ ಹಾಕಿಲ್ಲ. ಸತ್ಯ ನಿಮ್ಮ ಪರವಾಗಿದ್ರೆ ನ್ಯಾಯಾಲಯಕ್ಕೆ ಹೋಗಿ ಎಂದು ಬಿಜೆಪಿಗೆ ಮುತಾಲಿಕ್ ಸವಾಲುಹಾಕಿದ್ದಾರೆ.

 

Related posts

Leave a Reply