Header Ads
Header Ads
Breaking News

ಶ್ರೀಲಂಕಾದಲ್ಲಿ ಮುಂದುವರಿದ ಮಳೆ,  ಸಾವಿನ ಸಂಖ್ಯೆ 180ಕ್ಕೆ ಏರಿಕೆ

ಶ್ರೀಲಂಕಾದಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತಕ್ಕೆ ಸಿಲುಕಿ ನಿರಾಶ್ರಿತರಾದವರಿಗೆ ಪರಿಹಾರ ಕಲ್ಪಿಸುವ ಕಾರ್ಯ ಭರದಿಂದ ಸಾಗಿದ್ದು, ಈ ನೈಸರ್ಗಿಕ ವಿಕೋಪದಿಂದ ಮೃತಪಟ್ಟವರ ಸಂಖ್ಯೆ ೧೮೦ಕ್ಕೆ ಏರಿದೆ.
ಕಳೆದ ೧೪ ವರ್ಷಗಳಲ್ಲಿ ಸಂಭವಿಸಿರುವ ಅತಿದೊಡ್ಡ ವಿಪತ್ತು ಇದಾಗಿದೆ. ೧೦೯ ಜನರು ನಾಪತ್ತೆಯಾಗಿದ್ದು, ೮೮ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ. ಕೆಸರಿನಲ್ಲಿ ಹೂತುಹೋಗಿರುವ ಶವಗಳನ್ನು ಮೇಲೆತ್ತುವ ಕಾರ್ಯ ನಡೆದಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಪೂರ್ವ ಮಧ್ಯಭಾಗದಲ್ಲಿ ಕಾಣಿಸಿಕೊಂಡಿರುವ ಮೋರಾ ಚಂಡಮಾರುತವು ದ್ವೀಪ ರಾಷ್ಟ್ರದ ಮಾರ್ಗದಲ್ಲಿಯೇ ಹಾದುಹೋಗಲಿದೆ. ಇದರ ಪರಿಣಾಮ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಇದರಿಂದ ಪರಿಹಾರ ಕಾರ್ಯಕ್ಕೆ ಅಡಚಣೆಯಾಗುವ ಆತಂಕ ಎದುರಾಗಿದೆ.
ಐದು ದಿನಗಳ ಹಿಂದೆ ಸುರಿದ ಮಳೆಗೆ ಶ್ರೀಲಂಕಾದ ದಕ್ಷಿಣ ಮತ್ತು ಪಶ್ಚಿಮ ಪ್ರಾಂತ್ಯದಲ್ಲಿರುವ ಅರ್ಧದಷ್ಟು ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಪ್ರವಾಹಪೀಡಿತರ ನೆರವಿಗೆ ತೆರಳುತ್ತಿದ್ದ ಶ್ರೀಲಂಕಾದ ವೈಮಾನಿಕ ಪಡೆಗೆ ಸೇರಿದ ಹೆಲಿಕಾಪ್ಟರ್ ಗಾಲೆ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಪತನಗೊಂಡಿದೆ.
ಒಟ್ಟು ೧೪ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ರತ್ನಾಪುರ, ಕಲುತಾರ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ.

Related posts

Leave a Reply