Header Ads
Breaking News

ಶ್ರೀಲಂಕಾ ಸರಣಿ ಸ್ಫೋಟಕ್ಕೆ ಖಂಡನೆ: ಮಿಲಾಗ್ರಿಸ್ ಚರ್ಚ್ ಆವರಣದಲ್ಲಿ ಶಾಂತಿ ಮತ್ತು ಏಕಾತೆಗೆ ಬೆಂಬಲ

ಮಂಗಳೂರು: ಶ್ರೀಲಂಕಾದಲ್ಲಿ ಇತ್ತೀಚಿಗೆ ನಡೆದ ಭಯೋತ್ಪಾದನಾ ದಾಳಿಯನ್ನ ಖಂಡಿಸಿ ನಗರದ ಮಿಲಾಗ್ರಿಸ್ ಚರ್ಚ್ ಆವರಣದಲ್ಲಿ ಮುಸ್ಲಿಮರು ಶಾಂತಿ ಮತ್ತು ಏಕಾತೆಗೆ ಬೆಂಬಲ ಕೋರಿದರು.

ಇಂದು ಮುಂಜಾನೆ ಚರ್ಚ್‍ನಲ್ಲಿ ಪೂಜೆ ಸಂದರ್ಭ ಚರ್ಚ್‍ನ ಹೊರಗಡೆ ಸೇರಿದ ನೂರಾರು ಮುಸ್ಲಿಮರು ‘ಶ್ರೀಲಂಕಾದವರೊಂದಿಗೆ ನಾವಿದ್ದೇವೆ. ಭಯೋತ್ಪಾದನೆ ಧರ್ಮವಿಲ್ಲ ಇತ್ಯಾದಿ ಭಿತ್ತಿಪತ್ರ ಫಲಕಗಳನ್ನು ಪ್ರದರ್ಶಿಸಿ ಏಕತೆಯ ಸಂದೇಶ ಸಾರಿದರು.ಇದಕ್ಕೆ ಕ್ರೈಸ್ತರು ಸ್ಪಂದಿಸಿ “ ನಿಮ್ಮೆಂದಿಗೆ ನಾವಿದ್ದೇವೆ” ಎಂದು ಉದ್ಫೋಷ ಕೂಗುವ ಮೂಲಕ ಬೆಂಬಲ ಸೂಚಿಸಿದರು.ಈ ವೇಳೆ ಮಾತನಾಡಿದ ಚರ್ಚ್‍ನ ಧರ್ಮಗುರು ರೇವೆಂಡ್ ಫಾದರ್ ವಲೆರಿಯನ್ ಡಿಸೋಜಾ, ಏಕಾತೆಯ ಸಂದೇಶ ಸಾರಿದ ಮುಸ್ಲಿಮರ ಕ್ರಮವನ್ನು ಶ್ಲಾಘಿಸಿದರು, ಇದೊಂದು ಐತಿಹಾಸಿಕ ಕ್ಷಣ, ಇದರಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆ ಅಂತಾ ಹೇಳಿದರು.

ಈ ವೇಳೆ ಕೆಸಿಸಿಐ ಅಧ್ಯಕ್ಷ ಪಿ.ಅಬ್ದುಲ್ ಹಮೀದ್, ಅಝಾದ್ ಗ್ರೂಪ್‍ನ ಮನ್ಸೂರ್ ಅಹ್ಮದ್, ಖಾಸಿಮ್ ಅಹ್ಮದ್,ಅಬಿದ್ ಮತ್ತಿತರರಿದ್ದರು.

Related posts

Leave a Reply

Your email address will not be published. Required fields are marked *