

ಶಿವರಾತ್ರಿ ಪ್ರಯುಕ್ತ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆದ ಅಖಂಡ ಭಜನೋತ್ಸವ ಕಾರ್ಯಕ್ರಮದಲ್ಲಿ ಮುಂಜಾನೆ 6 ಗಂಟೆಯಿಂದ 9 ಗಂಟೆಯ ವರೆಗೆ ಸತತ 3 ಗಂಟೆಗಳ ಕಾಲ ನೆಲ್ಲೂರುಕೆಮ್ರಾಜೆ ಗ್ರಾಮದ ದಾಸನಕಜೆಯ ನಾಗಶ್ರೀ ಭಜನಾ ಮಂಡಳಿಯ ಸದಸ್ಯರು ಮತ್ತು ಸಂಪಾಜೆ ಗ್ರಾಮದ ಕೊಯನಾಡು ಇಲ್ಲಿನ ನಾದ ಪಯಸ್ವಿನಿ ಭಜನಾ ಮಂಡಳಿಯ ಸದಸ್ಯರುಗಳು ಭಜನಾ ಸೇವೆಯನ್ನು ನೀಡಿ ಅಲ್ಲಿನ ಭಕ್ತಾದಿಗಳ ಮೆಚ್ಚುಗೆಗೆ ಪಾತ್ರರಾದರು. ಬಳಿಕ ಮಠದ ಶ್ರೀ ಗಳಾದ ನಿರ್ಮಲಾನಂದ ಸ್ವಾಮೀಜೀಯವರನ್ನು ಮತ್ತು ಪ್ರಸನ್ನನಾಥ ಶ್ರೀ ಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.
ಭಜನಾ ಕಾರ್ಯಕ್ರಮವನ್ನು ಜನಾರ್ದನ.ಜಿ.ಜಯನಗರ ಮತ್ತು ಜಯಪ್ರಸಾದ್ ಕೊಯನಾಡು ಇವರ ನೇತೃತ್ವದಲ್ಲಿ 2 ನೇ ಭಾರಿ ಈ ಎರಡು ಭಜನಾ ತಂಡಗಳು ಭಜನಾ ಸೇವೆಯನ್ನು ನಡೆಸಿಕೊಟ್ಟರು.ನಾಗಶ್ರೀ ಭಜನಾ ಮಂಡಳಿ ದಾಸನಕಜೆ ತಂಡ, ನಾದಪಯಸ್ವಿನಿ ಭಜನಾ ಮಂಡಳಿ ಕೊಯನಾಡು ತಂಡದಿಂದ ಭಜನಾ ಕಾರ್ಯಕ್ರಮ ನೆರವೇರಿತು