Header Ads
Header Ads
Header Ads
Breaking News

ಶ್ರೀ ಒಡಿಯೂರು ರಥೋತ್ಸವ

ವಿಟ್ಲದ ಒಡಿಯೂರು ಗುರುದೇವದತ್ತ ಸಂಸ್ಥಾನದ ವತಿಯಿಂದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಹಾಗೂ ವೇದಮೂರ್ತಿ ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿವಿಜೃಂಭಣೆಯಿಂದ ನಡೆಯಿತು.

ಸಂಜೆ 8 ಗಂಟೆಗೆ ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥಯಾತ್ರೆ ಶ್ರೀ ಸಂಸ್ಥಾನದಿಂದ ಗ್ರಾಮ ದೈವಸ್ಥಾನ ಮಿತ್ತನಡ್ಕಕ್ಕೆ ಹೋಗಿ ಕನ್ಯಾನ ಪೇಟೆ ಸವಾರಿ, ನಂತರ ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆ ಬಳಿಕ ಶ್ರೀ ಸಂಸ್ಥಾನಕ್ಕೆ ಹಿಂತಿರುಗಿದೆ.

ರಥವೂ ಕನ್ಯಾನ ಹಾಗೂ ಕರೋಪಾಡಿ ಗ್ರಾಮಗಳಲ್ಲಿ ಅಂದರೆ 12 ಕಿ.ಮೀ ದೂರ ಸಂಚರಿಸಿದೆ. ಈ ರಥಯಾತ್ರೆಯಲ್ಲಿ ಊರ ಪರವೂರು ಸಾವಿರಾರು ಭಕ್ತರು ಭಾಗವಹಿಸಿದ್ದರು. ವಿಶೇಷ ಆಕರ್ಷಣೆಯಾಗಿ ವಿವಿಧ ಸ್ತಂಬ್ಧ ಚಿತ್ರಗಳು, ಸಿಡಿಮದ್ದು ಪ್ರದರ್ಶನ, ಬೆರಿಪದವು ವ್ಯಾಯಾಮ ಶಾಲೆಯಿಂದ ಆಕರ್ಷಕ ತಾಲೀಮ್ ಗಮನ ಸೆಳೆಯಿತು. ಬ್ಯಾಂಡ್ ವಾದ್ಯಗಳು, ಕೇರಳದ ಚೆಂಡೆ ರಥೋತ್ಸವಕ್ಕೆ ಮತ್ತಷ್ಟು ಮೆರಗು ನೀಡಿದೆ.

ಜನವರಿ 27ರಂದು ತುಳುನಾಡ ಜಾತ್ರೆ ಹಾಗೂ ಒಡಿಯೂರು ರಥೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಮಿತ್ತನಡ್ಕ ಮಲರಾಯಿ ದೈವಸ್ಥಾನದ ಬಳಿ ವಿಶೇಷ ಆಕರ್ಷಣೆಯ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಈ ಬಾರಿಯ ರಥೋತ್ಸವಕ್ಕೆ ತೆರೆ ಎಳೆಯಲಾಯಿತು.

Related posts

Leave a Reply