Header Ads
Header Ads
Breaking News

ಶ್ರೀ ಕೃಷ್ಣ ಜನ್ಮದಿನದ ಪ್ರಯುಕ್ತ ಮೊಸರು ಕುಡಿಕೆ ಉತ್ಸವ. ಕದ್ರಿಯಲ್ಲಿ ನಡೆದ ಕಾರ್ಯಕ್ರಮ. ಮೊಸರು ಕುಡಿಕೆಯಲ್ಲಿ ಪಾಲ್ಗೊಂಡ ಸಾವಿರಾರು ಮಂದಿ.

ಮಂಗಳೂರಲ್ಲಿ ಶ್ರೀ ಕೃಷ್ಣ ಜನ್ಮದಿನದ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ನಡೆಯಿತು. ಕದ್ರಿಯಲ್ಲಿ ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ ಸಾವಿರಾರು ಮಂದಿ ಭಾಗಿಯಾಗಿದ್ರು.ಕದ್ರಿ ಮಂಜುನಾಥ ದೇವಸ್ಥಾನದ ವಠಾರ, ಉತ್ಸವ ನಡೆದ ರಸ್ತೆಗಳು, ಬೀದಿಗಳು ಶೃಂಗಾರಗೊಂಡಿದ್ದವು. ದಾರಿಯುದ್ದಕ್ಕೂ ಎತ್ತರದ ಕಮಾನುಗಳನ್ನು ಕಟ್ಟಿ ಅದರಲ್ಲಿ ವಿವಿಧ ಬಣ್ಣಗಳ, ಆಕಾರದ ಮೊಸರಿನ ಗಡಿಗೆಗಳನ್ನು ಕಟ್ಟಲಾಗಿತ್ತು. ಅದರೊಂದಿಗೆ ಬಾಳೆ ಹಣ್ಣು, ಚಕ್ಕುಲಿ,ಉಂಡೆ ಮತ್ತಿತರ ಇತರ ಸಿಹಿ ಪದಾರ್ಥಗಳನ್ನು ಈ ಕಮಾನುಗಳಿಗೆ ತೂಗು ಹಾಕಲಾಗಿತ್ತು. ಮೆರವಣಿಗೆಯಲ್ಲಿ ಸಾಹಸಿ ಯುವಕರ ತಂಡ ಇದನ್ನು ಹೊಡೆದುಕೊಂಡು ಹೋದ್ರು.

ವಿದ್ಯುತ್ ಬೆಳಕಿನ ಅಲಂಕಾರದಲ್ಲಿ ಈ ಗಡಿಗೆ ಒಡೆಯುವ ದ್ರಶ್ಯ ನೋಡುವುದೇ ಕಣ್ಣಿಗೆ ಹಬ್ಬ ವಾಗಿತ್ತು. ಇನ್ನು ಇದರೊಂದಿಗೆ ಕದ್ರಿಯಲ್ಲಿ ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ ವೈವಿಧ್ಯ ಕಾರ್ಯಕ್ರಮಗಳೊಂದಿಗೆ ನಡೆಯಿತು.ಸಂಜೆ ಶ್ರೀ ಗೋಪಾಲಕೃಷ್ಣ ಮಠದಿಂದ ಭವ್ಯಾಲಂಕೃತ ಮಂಟಪದಲ್ಲಿ ಶ್ರೀಕೃಷ್ಣನ ಭಜನೆ, ವಿದ್ಯುದೀಪಾಂಕೃತವಾದ ಸ್ತಬ್ಧ ಚಿತ್ರಗಳು, ವಾದ್ಯವೃಂದ, ದಾಂಡಿಯಾ ನೃತ್ಯ, ಚೆಂಡೆ, ಬೊಂಬೆಕುಣಿತಗಳು, ವಿವಿಧ ವೇಷಗಳು, ಆಕರ್ಷಕ ಸುಡುಮದ್ದುಗಳ ಪ್ರದರ್ಶನ ದೊಂದಿಗೆ ಮೆರವಣಿಗೆ ನಡೆಯಿತು. ಈ ಮೆರವಣಿಗೆ ಮೊಸರುಕುಡಿಕೆ ತಂಡದೊಂದಿಗೆ ಹೊರಟು ಕದ್ರಿಕಂಬಳ ರಸ್ತೆ, ಮಲ್ಲಿಕಟ್ಟೆ, ಮೂಲಕ ಸಾಗಿ ಕದ್ರಿ ದೇವಾಲಯದ ರಾಜಾಂಗಣವನ್ನು ತಲುಪಿತು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಪರಿಣತ ಸಾಹಸಿ ಯುವಕರ ತಂಡ ಗಡಿಗೆಗಳನ್ನು ಒಡೆಯುತ್ತಾ ಸಾಗಿ ಗಮನ ಸೆಳೆದ್ರು. ಸಾವಿರಾರು ಜನ ರಸ್ತೆ ಉದ್ದಕ್ಕೂ ನಿಂತು ಈ ಸಂಭ್ರಮಕ್ಕೆ ಸಾಕ್ಷಿಯಾದರು.

Related posts

Leave a Reply