Header Ads
Header Ads
Breaking News

ಶ್ರೀ ಕೃಷ್ಣ ಜನ್ಮಾಷ್ಠಮಿ ಹಬ್ಬದ ಸಂಭ್ರಮ. ಸೆಪ್ಟಂಬರ್ 2ರಂದು ನಡೆಯಲಿರುವ ಕಾರ್ಯಕ್ರಮ. ಇಸ್ಕಾನ್ ಶ್ರೀ ರಾಧಾ ಗೋವಿಂದ ಮಂದಿರದ ವತಿಯಿಂದ ಯೋಜನೆ.

ಮಂಗಳೂರಿನ ಕದ್ರಿ ಟೋಲ್‌ಗೇಟ್ ಸಮೀಪವಿರುವ ಇಸ್ಕಾನ್ ಶ್ರೀ ರಾಧಾ ಗೋವಿಂದ ಮಂದಿರದ ವತಿಯಿಂದ ’ಶ್ರೀ ಕೃಷ್ಣ ಜನ್ಮಾಷ್ಟಮಿ’ಯು ಸೆಪ್ಟೆಂಬರ್ 2ರಂದು ನಗರದ ಡಾ.ಟಿ.ಎಂ.ಎ.ಪೈ ಕನ್ವೆನ್ಷನ್ ಸೆಂಟರ್ ನಡೆಯಲಿದೆ ಎಂದು ನಂತೂರಿನ ಇಸ್ಕಾನ್ ರಾಧಾ ಗೊವಿಂದ ಮಂದಿರದ ಸ್ವಾಮೀಜಿ ರಾಮಕೃಷ್ಣ ದಾಸರು ಹೇಳಿದರು.ಅವರು ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಕಾಗೋಷ್ಟಿ ನಡೆಸಿ ಮಾತನಾಡಿ, ಪ್ರತೀ ವರುಷದಂತೆ ಶ್ರೀ ಕ್ರಷ್ಣಾಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆ ದಿನ ದೇವೋತ್ತಮ ಪರಮ ಪುರುಷನಾದ ಶ್ರೀ ಕೃಷ್ಣನು ಜನಿಸಿದ ದಿನವಾಗಿದೆ, ನಮ್ಮ ಜೀವನದಲ್ಲಿ ಭಗವಾನ್ ಶ್ರೀ ಕೃಷ್ಣನ ಪ್ರಾಮುಖ್ಯತೆಯನ್ನು ಆರಿತುಕೊಳ್ಳುವ ಉದ್ದೇಶದಿಂದ ಈ ಹಬ್ಬವನ್ನು ಆಚರಿಸುತ್ತೇವೆ, ಭಕ್ತರು ಸಂಸಾರ ಸಮೇತವಾಗಿ ಬಂದು ಭಗವಂತನ ದರ್ಶನ ಪಡೆಯಬಹುದಾಗಿದೆ ಎಂದು ಹೇಳಿದರು.ಈ ಸಂದರ್ಭ ಇಸ್ಕಾನ್‌ನ ಶೀವಾಸಾಂಗನ ಕೀರ್ತನ ದಾಸರು ಉಪಸ್ಥಿತರಿದ್ದರು.

Related posts

Leave a Reply