Header Ads
Header Ads
Breaking News

ಶ್ರೀ ಕೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ : ಕಂಚಿ ಮಾರುಕಟ್ಟೆಯ ಉತ್ಸವದ ಅದ್ದೂರಿ ಮೆರವಣಿಗೆ

ಶ್ರೀ ಕೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವದ ಪ್ರಯುಕ್ತಮಂಗಳವಾರದಂದುಧರ್ಮಾಧಿಕಾರಿಡಾ. ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿಕಂಚಿಮಾರುಕಟ್ಟೆಉತ್ಸವವುಹಲವು ಪೊಜಾ ವಿಧಿವಿಧಾನಗಳ ಮೂಲಕ ನೆರವೇರಿಸಲಾಯಿತು. ಪೂಜಾಕಾರ್ಯವು ಮಂಜುನಾಥ ಸ್ವಾಮಿದೇವಾಲಯದಲ್ಲಿಆರಂಭಗೊಂಡು ಮೊದಲಿಗೆಗರ್ಭಗುಡಿಯಲ್ಲಿದ್ದ ಸ್ವಾಮಿಯ ಮೂರ್ತಿಯನ್ನು ಲಾಲಕ್ಕಿ ಪಲ್ಲಕ್ಕಿಯಲ್ಲಿ ಕೂರಿಸಿ ಹಲವು ವಾದ್ಯಗಳ ಸೇವೆಯೊಂದಿಗೆದೇವಾಲಯದ ಸುತ್ತ ಸುತ್ತಿಸಲಾಯಿತು.ಉಡಿಕೆ ಸುತ್ತು, ಚೆಂಡೆ ಸುತ್ತು, ಸಂಗೀತ ಸುತ್ತು, ನಾಧಸ್ವರ ಸುತ್ತು, ಕೊಳಲು ಸುತ್ತು, ಶಂಖ ಸುತ್ತು ಹೀಗೆ ಹಲವು ವಾದ್ಯಗಳ ಸೇವೆಯೊಂದಿಗೆಒಟ್ಟು ಹದಿನಾರು ಸುತ್ತುಸುತ್ತಿಸಲಾಯಿತು. ನಂತರ ಪಲ್ಲಕ್ಕಿಯನ್ನು ಹೊರತಂದುದೇವಾಲಯದ ಮುಂಭಾಗದ ಮಾರ್ಗದಲ್ಲಿ ಭಕ್ತರ ಸಮ್ಮುಖದಲ್ಲಿ ವೈಶಾಲಿ ವಸತಿಗೃಹದ ಮುಂಭಾಗದಲ್ಲಿರುವಕಂಚಿಮಾರುಕಟ್ಟೆಯ ಬಳಿ ಕರೆದೊಯ್ಯಲಾಯಿತು. ಈ ವೇಳೆ ಮೆರವಣಿಗೆಯು ದೇವಳದ ಎರಡು ಅನೆಗಳು ಮತ್ತು ಬಸವನ ಗಾಂಭೀರ್ಯ ಹೆಜ್ಜೆಯೊಂದಿಗೆ ಸಾಗಿತು.
ಪಲ್ಲಕ್ಕಿಯುಕಂಚಿಮಾರುಕಟ್ಟೆಗೆ ತೆರಳಿದ ನಂತರದೇವರನ್ನುಕೂರಿಸುವ ಸ್ಥಳವನ್ನು ಶುದ್ಧೀಕರಿಸಿ ಪಲ್ಲಕ್ಕಿಯಲ್ಲಿದ್ದ ಸ್ವಾಮಿಯ ಮೂರ್ತಿಯನ್ನುಕೂರಿಸಲಾಯಿತು. ವಿಶೇಷ ಪೂಜಾ ವಿಧಿವಿಧಾನಗಳೊಂದಿಗೆ ಸ್ವಾಮಿಯ ಮೂರ್ತಿಯನ್ನು ಪೂಜಿಸಲಾಯಿತು. ಈ ವೇಳೆ ಶಂಖ, ಜಾಗಟೆ, ವಾಲಗ, ಹೀಗೆ ಪಂಚವಾದ್ಯ ಮತ್ತು ಭಜನೆಯ ಸೇವೆಯನ್ನುಸ್ವಾಮಿಗೆಸಲ್ಲಿಸಲಾಯಿತು. ಬಳಿಕ ಸ್ವಾಮಿಯ ಮೂರ್ತಿಯನ್ನು ಪಲ್ಲಿಕ್ಕಿಯಲ್ಲಿ ಕೂರಿಸಿ ಮೆರವಣಿಗೆಯೊಂದಿಗೆದೇವಸ್ಥಾನಕ್ಕೆ ಹಿಂತಿರುಗಿಸಲಾಯಿತು.
ಪಲ್ಲಕ್ಕಿಯುದೇವಸ್ಥಾನಕ್ಕೆ ಹಿಂತಿರುಗಿದ ಬಳಿಕ ಪಲ್ಲಕ್ಕಿಯಲ್ಲಿದ್ದ ಸ್ವಾಮಿಯ ಮೂರ್ತಿಯನ್ನು ಬೆಳ್ಳಿ ರಥದಲ್ಲಿಕೂರಿಸಲಾಯಿತು. ನಂತರನೆರದಿದ್ದ ಭಕ್ತರೆಲ್ಲರು ಬೆಳ್ಳಿರಥವನ್ನು ದೇವಸ್ಥಾನದ ಸುತ್ತಒಂದು ಸುತ್ತು ಸುತ್ತಿಸಿದರು. ಒಂದು ಸುತ್ತು ಸುತ್ತಿಬಂದ ನಂತರ ಬೆಳ್ಳಿ ರಥದಲ್ಲಿದ್ದ ಸ್ವಾಮಿಯ ಮೂರ್ತಿಗೆಕೊನೆಯ ಮಂಗಳಾರತಿ ಮಾಡಿ ಮೂರ್ತಿಯನ್ನುದೇವಾಲಯದ ಒಳಗೆ ಕರೆದೊಯ್ಯಲಾಯಿತು. ಈ ವೇಳೆ ಭಕ್ತರಿಂದ ಬಂದ’ಓಂ ನಮಃ ಶಿವಾಯ’ ಎಂಬ ಮಂತ್ರ ಘೋಷವು ನೆರೆದಿದ್ದವರ ಭಕ್ತಿ ಭಾವವನ್ನು ಹೆಚ್ಚಿಸಿತು.

Related posts

Leave a Reply

Your email address will not be published. Required fields are marked *