Header Ads
Header Ads
Breaking News

ಶ್ರೀ ಕ್ಷೇತ್ರಧರ್ಮಸ್ಥಳದಲ್ಲಿ ದೀಪೋತ್ಸವದ ಆಚರಣೆ : ಶಕುನದ ಹಕ್ಕಿಯೊಂದಿಗೆ ಭವಿಷ್ಯ ನುಡಿದ ಸಿದ್ಧರು

ದಶಮಾನಗಳಿಂದಲೂ ನಮ್ಮದೇಶದಲ್ಲಿಅಲೆಮಾರಿಜನಾಂಗದವರುಇದ್ದಾರೆ. ಅವರುತಮ್ಮ ಕುಲ ಕಸುಬನ್ನ ನಿಷ್ಠೆಯಿಂದಮಾಡುವಂತವರು. ಇಂತಹ ವೃತ್ತಿಯನ್ನು ಪಾಲಿಸುವವರಲ್ಲಿಗಿಣಿ ಶಾಸ್ತ್ರ ಹೇಳುವವರು ಕೂಡಾಒಬ್ಬರು.

ಶ್ರೀ ಕ್ಷೇತ್ರಧರ್ಮಸ್ಥಳದಲ್ಲಿ ದೀಪೋತ್ಸವದಆಚರಣೆಯಲ್ಲಿಕಂಡು ಬಂದಒಂದುವೈಶಿಷ್ಟ್ಯಎಂದರೆಗಿಣಿಶಾಸ್ತ್ರ ಹೇಳುಗರು.ಇಲ್ಲಿಗೆ ಬಂದಿದ್ದಗಿಣಿಶಾಸ್ತ್ರದವರು’ಸುಡಗಾಡುಸಿದ್ಧರು’ ಎಂಬ ಅಲೆಮಾರಿಜನಾಂಗಕ್ಕೆ ಸೇರಿದವರು. ತಲತಲಾಂತರದಿಂದಲೂ ಸಾಗಿಬಂದಿರುವಕುಲಕಸುಬಾದಗಿಣಿಶಾಸ್ತ್ರವನ್ನು ಹೇಳುತ್ತಿದ್ದಾರೆ.
ಲಕ್ಷದೀಪೋತ್ಸವದಲ್ಲಿ ಕಾಣಿಸಿಕೊಂಡಿದ್ದ ಗಿಣಿಶಾಸ್ತ್ರದವರು ಮೈಲಳ್ಳಿಯ ಚಿಳಿಕೆರೆ ತಾಲೂಕಿನಚಿತ್ರದುರ್ಗದವರು. ಪ್ರಸುತವಾಗಿ ಹಾವೇರಿಜಿಲ್ಲೆಯರಾಣೆಬೇನ್ನೂರುನ್ನಲ್ಲಿ ನೆಲೆಸಿದ್ದಾರೆ. ತೆಲಗು ಹಾಗೂ ಕನ್ನಡ ಭಾಷೆ ಮಾತನಾಡುವಇವರು ಕಾಲಕ್ಕೆ ತಕ್ಕಂತೆ ಮುಂದುವರಿದು ಸ್ವಂತ ಮನೆ. ಜಮೀನನ್ನು ಹೊಂದಿದ್ದಾರೆ.
ಇವರದ್ದು ಕೇವಲ ಹೊಟ್ಟೆಪಾಡಿನಊದ್ಯೋಗವಷ್ಟೇಅಲ್ಲ.ಗಿಣಿಶಾಸ್ತ್ರ ಹೇಳುವುದು ತಲೆತಲಾಂತರದ ಸಂಪ್ರದಾಯಎನ್ನುವಕಾರಣಕ್ಕೆವರ್ಷದಲ್ಲಿ ಕೇವಲ ಎರಡು ತಿಂಗಳು ಮಾತ್ರಗಿಣಿಭವಿಷ್ಯ ಹೇಳುತ್ತಾರೆ. ಬಂದ ಹಣವನ್ನ ಶ್ರೀ ಸಿದ್ಧಾರೂಢ ಮಠಕ್ಕೆಅರ್ಪಿಸುತ್ತಾರೆ. ಇನ್ನುಳಿದ ಹತ್ತು ತಿಂಗಳು ಹಚ್ಚೆ ಹಾಕುವ, ಸ್ಟೇಷನರಿವಸ್ತುಗಳನ್ನು ಮಾರುತ್ತಾರೆ.
ನಾಲ್ಕುತಲೆಮಾರಿನಜನ ಭವಿಷ್ಯ ಹೇಳುವುದನ್ನು ಮುಂದುವರೆಸಿದ್ದಾರೆ. ಜೊತೆಯಲ್ಲಿ ಮನೆಯಒಬ್ಬನೇ ಸದಸ್ಯ ಈ ವೃತ್ತಿಯಲ್ಲಿರಬಹುದು.ತಮ್ಮ ವೃತ್ತಿಯ ಪಾಲುದಾರನಾದಗಿಣಿಯನ್ನಚಿಕ್ಕಮರಿಇದ್ದಾಗಲೇಪಡೆದುಅದಕ್ಕೆತರೆಬೇತಿ ನೀಡಲಾಗುತ್ತದೆ. ಭವಿಷ್ಯ ಹೇಳುವಾಗ ಗಿಣಿ ತನ್ನಯಜಮಾನನಆದೇಶದಂತೆಹಲವು ಕಾರ್ಡ್‌ಗಳಲ್ಲಿ ಒಂದನ್ನುಆಯ್ದು ನೀಡಿ ಮತ್ತೆಪಂಜರ ಸೇರುತ್ತದೆ.
ಲಕ್ಷದೀಪೊತ್ಸವಕ್ಕೆ ಆಗಮಿಸಿದ್ದ ಜನರುಗಿಣಿಶಾಸ್ತ್ರ ಕೇಳಲು ಸಾಲಾಗಿ ಕುಳಿತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರುಗಿಣಿರಾಮನ ಭವಿಷ್ಯ ಕೇಳಿ ತೃಪ್ತರಾಗಿ ಹೋದರೆ, ಇನ್ನು ಕೆಲವರುಚಿಂತೆಯಲ್ಲಿ ಸಾಗಿದರು. ಸಾಲಾಗಿ ಕುಳಿತಿರುವ ಗಿಣಿಯನ್ನು ನೋಡಲುಆಕರ್ಷಕವಾಗಿತ್ತು. ಗಿಣಿ ಶಾಸ್ತ್ರ ಹೇಳುವ ಸಂಪ್ರದಾಯ ನಮ್ಮ ಪೀಳಿಗೆಗೆ ಮುಕ್ತಾಯವಾಗುತ್ತದೆ. ನಾವು ಅನಕ್ಷರಸ್ಥರು. ಆದರೆ ನಮ್ಮ ಮಕ್ಕಳು ವಿದ್ಯೆಕಲಿತುದೊಡ್ಡ ವ್ಯಕ್ತಿಗಳಾಗಬೇಕು. ಆದ್ದರಿಂದಅವರಿಗೆ ಈ ಕಸುಬನ್ನ ನಾವು ಹಸ್ತಾಂತರಿಸುವುದಿಲ್ಲ ಎಂಬುದುಗಿಣಿ ಶಾಸ್ತ್ರದವರಅಭಿಪ್ರಾಯವಾಗಿದೆ.ವರದಿ:ವಾಣಿ ಭಟ್ಟ
ಚಿತ್ರಗಳು: ಸುರ್ವಣಾ ಹೆಗಡೆ

Related posts

Leave a Reply

Your email address will not be published. Required fields are marked *