Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ಛಲದ ದುಡಿಮೆಯ ಮಾದರಿ

ಜಾತ್ರೆ, ಉತ್ಸವಎಂದಾಕ್ಷಣನೆನಪಾಗೋವಂತದ್ದು ಮನಸೆಳೆಯುವ ಬಣ್ಣದ ಬೆಳಕುಗಳು, ಆಟ, ಮೋಜು, ಮಸ್ತಿ ಮುಂತಾದಖುಷಿಯ ಕ್ಷಣಗಳು. ಅನೇಕ ಸಂಖ್ಯೆಯಲ್ಲಿ ವ್ಯಾಪಾರಸ್ಥರುತಮ್ಮ ವ್ಯಾಪಾರ ವ್ಯವಹಾರಕ್ಕಾಗಿ ಪಾಲ್ಗೊಳ್ಳುತ್ತಾರೆ. ಬಟ್ಟೆ, ಆಭರಣ, ತಿಂಡಿತಿನಸು, ಹಾಗೇ ಹತ್ತುಹಲವು ಅಂಗಡಿಗಳನ್ನು ನಾವು ಕಾಣುತ್ತೇವೆ.ಇಂತಹ ವ್ಯಾಪಾರಸ್ಥರುತಮ್ಮಜೀವನವನ್ನು ಸಾಗಿಸುವ ಸಲುವಾಗಿ ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ರಸ್ತೆಗಳ ಬದಿಯಲ್ಲಿತಮ್ಮ ಪುಟ್ಟ ಪುಟ್ಟ ಅಂಗಡಿಗಳನ್ನು ಹಾಕುತ್ತಾರೆ. ಬಂದಂತಹದುಡಿಮೆಯಿಂದತಮ್ಮಜೀವನವನ್ನು ಮುಂದೂಡುತ್ತಾರೆ. ಸ್ಪರ್ಧಾತ್ಮಕಯುಗದಕಷ್ಟದ ಪರಿಸ್ಥಿತಿಯಲ್ಲೂ ತಮ್ಮಇಡೀಕುಟುಂಬವನ್ನು ನೋಡಿಕೊಳ್ಳುತ್ತಿರುವವರು ಮಲ್ಲಮ್ಮ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೆಡೆಯುವ ಲಕ್ಷದೀಪೋತ್ಸವಕ್ಕೆಜೇವನೋಪಾಯಕ್ಕಾಗಿದೂರದ ಊರುಗಳಿಂದ ಬಂದವ್ಯಾಪಾರಸ್ಥರಲ್ಲಿ ಮಲ್ಲಮ್ಮನವರೂಒಬ್ಬರು.
ಮುಂಬೈಯಿಂದ ತರಿಸಿದ ತಾಮ್ರ, ಪಂಚಲೋಹ, ಹಿತ್ತಾಳೆ ಮತ್ತು ಬೆಳ್ಳಿ ಇವುಗಳನ್ನು ಕರಗಿಸಿ ತಾವೇ ಸ್ವತಃ ಬಳೆ, ಉಂಗುರ ಹಾಗೂ ಸರಗಳನ್ನು ತಯಾರಿಸುತ್ತಾರೆ. ಪ್ರತಿ ವರ್ಷ ಶಿವರಾತ್ರಿ ಮತ್ತು ಲಕ್ಷದಿಪೋತ್ಸವಕ್ಕೆ ಬರುವಇವರು ಸುಮಾರು30 ವರ್ಷಗಳಿಂದ ಇದೇ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಸುಮಾರು ನೂರು ಬಳೆಗಳ ತಯಾರಿಗೆಒಂದು ವಾರ, ಮತ್ತು ೫೦೦ಕ್ಕೂ ಹೆಚ್ಚು ಬಳೆ, ಉಂಗುರ, ಸರಗಳ ತಯಾರಿಕೆಗೆ6 ತಿಂಗಳುಗಳು ಬೇಕಾಗುತ್ತವೆ. ಇವುಗಳ ತಯಾರಿಯು ನೋಡುವಷ್ಟು ಸುಲಭವಾಗಿಲ್ಲ. ತಯಾರಿಸಿದ ಆಭರಣಗಳನ್ನು ಆಸಿಡ್ ಹಾಕಿ ತೊಳೆಯಬೇಕು. ಆ ಸಂದರ್ಭದಲ್ಲಿ ಅನೇಕ ತೊಂದರೆಗಳು ಎದುರಾಗುತ್ತವೆ ಎನ್ನುತ್ತಾರೆ ಮಲ್ಲಮ್ಮ.
ಎಲ್ಲಿಜಾತ್ರೆ, ಉತ್ಸವಗಳು ನಡೆದರೂಅಲ್ಲಿ ಹೋಗಿ ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಾರೆಇವರು. ಇಬ್ಬರು ಹೆಣ್ಣುಮಕ್ಕಳ ಓದು ಈಗ ಅರ್ಧದಲ್ಲಿಯೇ ನಿಂತುಬಟ್ಟಿದೆಯೆಂಬುದು ಮಲ್ಲಮ್ಮನವರ ಮನವನ್ನುಕಾಡುತ್ತಿದೆ.

ಆಧುನಿಕಕಾಲದಲ್ಲಿತಾಮ್ರ, ಹಿತ್ತಾಳೆಗಳಿಂದ ತಯಾರಿಸಿದ ಆಭರಣಗಳನ್ನು ಯಾರೂಧರಿಸುವುದಿಲ್ಲ. ಇದರಿಂದಾಗಿ ವ್ಯಾಪಾರವೂಇಲ್ಲ. ಬಂದ ಸವಾಲುಗಳನ್ನು ಎದುರಿಸಿಕೊಂಡು ಬದುಕುವುದು ನಮ್ಮಜೀವನವಾಗಿದೆ ಎಂಬ ದುಃಖಅವರದು.
ವರದಿ-ಚಿತ್ರಗಳು:ಪಲ್ಲವಿ ಕೋಂಬ್ರಾಜೆ

Related posts

Leave a Reply

Your email address will not be published. Required fields are marked *