Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ : ಸಾಮಾಜಿಕ ಕಳಕಳಿಯ ತಂಡಗಳಿಂದ ನೃತ್ಯ ಪ್ರದರ್ಶನ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಪ್ರಯುಕ್ತ ಭಾನುವಾರ ಸಂಜೆ ಅಮೃತವರ್ಷಿಣಿ ಸಭಾಂಗಣದಲ್ಲಿ ಬೆಂಗಳೂರಿನ ಸುಸ್ವರ ಸಂಗೀತ ನೃತ್ಯ ಶಾಲೆಯಅಪೇಕ್ಷತಂಡದಕಲಾವಿದರುವೈವಿಧ್ಯಮಯ ಭರತನಾಟ್ಯ ಮತ್ತು ನೃತ್ಯರೂಪಕವನ್ನು ಪ್ರಸ್ತುತಪಡಿಸಿದರು. ಸಂಜೆ ೫:೩೦ಕ್ಕೆ ಆರಂಭವಾದ ಈಕಾರ್ಯಕ್ರಮ ತೊಂಬತ್ತು ನಿಮಿ?ಗಳ ಕಾಲ ಭರತನಾಟ್ಯ ಮತ್ತು ನೃತ್ಯ ರೂಪಕಗಳನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ಮನರಂಜಿಸಿತು.ಅಂತಾರಾಷ್ಟ್ರೀಯ ಮಟ್ಟದಲ್ಲಿಖ್ಯಾತಿ ಪಡೆದಿರುವ ನಾಟ್ಯ ವಿದುಷಿ ಶ್ರೀಮತಿ ಧರಣಿ ಟಿ ಕಶ್ಯಪ್‌ಅವರ ನೃತ್ಯ ಸಂಯೋಜನೆಯಲ್ಲಿ ಕಾರ್ಯಕ್ರಮ ಪ್ರದರ್ಶನಗೊಂಡಿತು.
ಕಾರ್ಯಕ್ರಮವು ವಿನಾಯಕ ಸ್ತುತಿ ಭಜಮಾನಸಗೀತೆಯಭರತನಾಟ್ಯದೊಂದಿಗೆ ಪ್ರಾರಂಭಗೊಂಡಿತು. ಒಂಬತ್ತು ಗೀತೆಗಳಿಗೆ ತಂಡದಕಲಾವಿದರು ಭರತನಾಟ್ಯ ಮತ್ತು ನೃತ್ಯರೂಪಕವನ್ನು ಪ್ರದರ್ಶಿಸಿದರು. ದಶಾವತಾರ ನೃತ್ಯರೂಪಕದಲ್ಲಿದು ಶಿಕ್ಷಕ-ರಕ್ಷಕನಾಗಿ  ಹತ್ತು ಅವತಾರಗಳನ್ನು ಆಕ?ಕವಾಗಿ ಪ್ರಸ್ತುತಪಡಿಸಿದ ತಂಡದಎಲ್ಲಾಕಲಾವಿದರು ನೆರದಿದ್ದ ಪ್ರೇಕ್ಷಕರನ್ನು ಮಂತ್ರ ಮುಗ್ದಗೊಳಿಸಿದರು.
ಸ್ವಾತಿ ತಿರುನಾಳ ಅವರರಚನೆಯ ಶಂಕರ ಶ್ರೀಗಿರಿ ಗೀತೆಗೆ ಅಲಂಕೃತ ಮಣ್ಣಿನ ಮಡಿಕೆಯ ಮೇಲೆ ನಿಂತು ನೃತ್ಯಪ್ರದರ್ಶಿಸಿದಕಲಾವಿದೆ ಸಹನಾ ಅವರ ಪೇರಿಣಿ ನೃತ್ಯವುಕಾರ್ಯಕ್ರಮದ ವಿಶೇ? ಆಕ?ಣೆಯಾಗಿತ್ತು. ಕುಚುಪ್ಪುಡಿ ಸಂಪ್ರದಾಯದತರಂಗ ನೃತ್ಯ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದವು.
ಈ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಬಿ ಯಶೋವರ್ಮ ನಾಟ್ಯ ಶಾಲೆಯ ಮುಖ್ಯಸ್ಥರಾದ ಸುರೇಶ್ ಮತ್ತುಎನ್ ನಾಗರಾಜ್‌ಅವರನ್ನು ಸನ್ಮಾನಿಸಿದರು. ತಂಡದ ಮುಖ್ಯಸ್ಥರನ್ನು ಹಾಗೂ ಕಲಾವಿದರನ್ನುಗೌರವಿಸಲಾಯಿತು.ಕಾರ್ಯಕ್ರಮವನ್ನು ಸುವೀರ್‌ಜೈನ್ ನಿರೂಪಿಸಿದರು. ಸುಸ್ವರ ಸಂಗೀತ ಶಾಲೆ : ಸುಮಾರು 10 ವಗಳಿಂದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಸ್ವರ ಸಂಗೀತ ಶಾಲೆಯು ವಿದ್ಯಾರ್ಥಿಗಳಿಗೆ ಸಂಗೀತ ಮತ್ತು ಭರತನಾಟ್ಯವನ್ನು ಕಲಿಸಿಕೊಡುತ್ತಿದೆ. ಪ್ರಸ್ತುತ೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಸಂಗೀತ ಮತ್ತು ಭರತನಾಟ್ಯವನ್ನುಅಭ್ಯಾಸ ಮಾಡುತ್ತಿದ್ದಾರೆ. ಸಾಮಾಜಿಕ ಕಳಕಳಿಯೊಂದಿಗೆ ಗುರುತಿಸಿಕೊಂಡ ಈ ತಂಡ ಕಾರ್ಯಕ್ರಮಗಳಿಂದ ಬಂದಆದಾಯವನ್ನು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಡುತ್ತಿದೆ. ಈ ಸಂಸ್ಥೆಯಅಧ್ಯಕ್ಷರಾಗಿಅಪೇಕ್ಷ ಸುರೇಶ್ ಮತ್ತು ಶಾಲೆಯ ನಿರ್ವಹಣೆಯಜವಾಬ್ದಾರಿಯನ್ನು ಬೆಳಗೆರೆಯ ಶ್ರೀಮತಿ ಗೌರಿ ನಾಗರಾಜ್ ನಿರ್ವಹಿಸುತ್ತಿದ್ದಾರೆ.

 

Related posts

Leave a Reply

Your email address will not be published. Required fields are marked *