Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ: ಧರ್ಮಾಧಿಕಾರಿಕುರಿತ ಕೃತಿಗಳಿಗೆ ವ್ಯಾಪಕ ಬೇಡಿಕೆ

ಲಕ್ಷದೀಪೋತ್ಸವದ ಪುಸ್ತಕ ಮಳಿಗೆಗಳಲ್ಲಿ ಡಾ.ವೀರೇಂದ್ರ ಹೆಗ್ಗಡೆಅವರ ಸಾಧನೆಯಯಾನ ಮತ್ತುಚಿಂತನೆಯನ್ನು ಒಳಗೊಂಡ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಯಿತು.ಅಲ್ಲದೇ, ಜನಪದ, ದೇವರು, ಭಕ್ತಿ, ಆಧ್ಯಾತ್ಮಕ್ಕೆ ಸಂಬಂಧಿಸಿದ ಕೃತಿಗಳ ಕಡೆಗೆಜನರ ಒಲವು ಇರುವುದುಕಂಡುಬಂತು.


ಲಕ್ಷದೀಪೋತ್ಸವದಲ್ಲಿ ಗಮನ ಸೆಳೆದಿದ್ದು ನಿರಂತರ ಮತ್ತು ಮಂಜುವಾಣಿ ಮಾಸಪತ್ರಿಕೆಗಳ ಮಳಿಗೆಗಳು. ಜನಪದಗೀತೆ, ಭಾವಗೀತೆ,ಕಾದಂಬರಿ, ಕೃಷಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿಜನರು ಖರೀದಿಸಿದರು.


ಮಂಜುವಾಣಿಮಾಸ ಪತ್ರಿಕೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ವಿಷಯಗಳಿಗೆ ಸಂಬಂಧ ಪಟ್ಟ ಮಾಹಿತಿಗಳಜೊತೆಗೆ ಲೇಖನಗಳನ್ನು ಒಳಗೊಂಡಿರುತ್ತದೆ. ಧರ್ಮಸ್ಥಳದಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳಬಗ್ಗೆ ಈ ಪತ್ರಿಕೆವಿವರ ನೀಡುತ್ತದೆ. ಈ ಪತ್ರಿಕೆಯ ಮಳಿಗೆಗಳಿಗೆ ಭೇಟಿ ನೀಡುವಅನೇಕರುಚಂದಾದಾರರಾಗುತ್ತಾರೆ.


ಮತ್ತೊಂದು ಮಾಸಪತ್ರಿಕೆ ’ನಿರಂತರ’ಮಳಿಗೆಯಲ್ಲೂ ಕೃಷಿಗೆ ಸಂಬಂಧಿಸಿದ ಅನೇಕ ಕೃತಿಗಳು ಲಭ್ಯವಿವೆ. ಈ ಕೃತಿಗಳನ್ನು ಹಲವರು ಖರೀದಿಸಿದರೆ, ಇನ್ನೂ ಕೆಲವರು ಈ ಮಾಸಿಕಕ್ಕೆ ಚಂದಾದಾರರಾಗಿ ಬದಲಾಗುತ್ತಾರೆ. ರಾಜ್ಯದಾದ್ಯಂತಅಧಿಕ ಸಂಖ್ಯೆಯಓದುಗರನ್ನು ಹೊಂದಿರುವ ಈ ಪತ್ರಿಕೆಯು ವಿವಿಧೆಡೆ ನಡೆಯುವ ಬೃಹತ್ ಕಾರ್ಯಕ್ರಮಗಳಲ್ಲಿ ಮಳಿಗೆಗಳನ್ನು ಆರಂಭಿಸಿ ಜನರನ್ನುತಲುಪುವ ಪ್ರಯೋಗಗಳಲ್ಲಿ ನಿರತವಾಗಿದೆ. ಅಭಿವೃದ್ಧಿ, ಕೃಷಿ ಮತ್ತುಗ್ರಾಮೀಣಅಭ್ಯುದಯದ ಮೌಲಿಕ ಬರಹಗಳನ್ನು ಕಟ್ಟಿಕೊಡುವ ಮೂಲಕ ಜನಜನಿತವಾಗಿದೆ. ಲಕ್ಷದೀಪೋತ್ಸವದ ಮಳಿಗೆಗೆ ಭೇಟಿ ನೀಡಿದವರೂ ಈ ಬರಹಗಳನ್ನು ಗಮನಿಸಿ ಪತ್ರಿಕೆಯಓದುಗರಾಗಿ ಪರಿವರ್ತಿತರಾದರು.

ವರದಿ ಮತ್ತುಚಿತ್ರ; ಗೌರಮ್ಮ

Related posts

Leave a Reply

Your email address will not be published. Required fields are marked *