Header Ads
Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ: ಬಗೆಬಗೆಯ ಹಲ್ವಾಗಳಿಗೆ ಬಹುಬೇಡಿಕೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಸಿಹಿ ತಿಂಡಿಗಳ ಮಾರಾಟ ಮಳಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಸಿಹಿ ತಿಂಡಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ, ಅದರಲ್ಲಿಯೂ ಜಾತ್ರೆಯ ಸಿಹಿ ತಿಂಡಿ ಎಂದರೆ ಎಲ್ಲರಿಗೂ ಇಷ್ಟ. ಜಾತ್ರೆಯ ಸಿಹಿ ತಿಂಡಿಗಳಲ್ಲಿ ಹಲ್ವಾ ತುಂಬಾ ಪ್ರಚಲಿತವಾಗಿದೆ. ಈ ಸಿಹಿ ತಿಂಡಿಯು ಜನರನ್ನು ನೋಡಿದ ತಕ್ಷಣ ಆಕರ್ಷಿಸುತ್ತದೆ.


ವಿವಿಧ ಮಳಿಗೆಗಳಲ್ಲಿ ಲಭ್ಯವಿದ್ದ ಸಿಹಿ ತಿಂಡಿಗಳಲ್ಲಿಯೇ ಹಲ್ವಾ ಹಲವರ ಗಮನ ಸೆಳೆಯಿತು. ಮಳಿಗೆಗೆ ಭೇಟಿ ನೀಡಿದ ಹಲವರು ಖರೀದಿಸಿದರು. ಕ್ಯಾರೆಟ್, ಪಿಸ್ತಾ, ಪೈನಾಪಲ್, ಗೆಸ್, ಮತ್ತು ಡೈಫ್ರೂಟ್ ಹಲ್ವಾ ಬಗೆಗಳು ಅಲ್ಲಿ ಲಭ್ಯವಿದ್ದವು. ವಿವಿಧ ಬಣ್ಣಗಳ ಹಲ್ವಾ ತಿಂಡಿಗಳೂ ಅಲ್ಲಿದ್ದವು.


ಈ ಸಿಹಿ ತಿಂಡಿ ಅಧಿಕ ದಿನಗಳ ಕಾಲಕೆಡದೆ ಉತ್ತಮ ಸ್ಥಿತಿಯಲ್ಲಿರುತ್ತದೆ. ಗೋಧಿ ಮತ್ತು ಮೈದಾ ಹಿಟ್ಟಿನಿಂದ ಸಿದ್ಧಪಡಿಸಿ ತಯಾರಿಸಿ 2 ದಿನಗಳ ಕಾಲವಿಟ್ಟು ನಂತರ ಅದನ್ನು ಮಾರುಕಟ್ಟೆಗೆ ತರಲಾಗುತ್ತದೆ.

ವರದಿ: ಸುಮುಖ ಹೆಗಡೆ
ಚಿತ್ರಗಳು: ಅಕ್ಷಯ ಹೆಗಡೆ

Related posts

Leave a Reply

Your email address will not be published. Required fields are marked *