Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ: ಅರಳು ಪ್ರತಿಭೆಗಳ ನಾಟ್ಯ ರಂಜನೆ

ಬೆಂಗಳೂರಿನ ಪುಷ್ಪಾಂಜಲಿ ನೃತ್ಯ ಶಾಲೆಯ ವೃಂದಾದೀಪಕ್‌ ತಂಡವು ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಪ್ರದರ್ಶಿಸಿ ಭರತನಾಟ್ಯ ಪ್ರೇಕ್ಷಕರನ್ನು ಸೆಳೆಯಿತು.
ವಸ್ತು ಪ್ರದರ್ಶನ ಮಂಟಪದಲ್ಲಿ ನೆರವೇರಿದ ಈ ಪ್ರದರ್ಶನ ಮೊದಲನೆಯದಾದ ’ಪುಷ್ಪಾಂಜಲಿ’ ನೃತ್ಯದ ಮೂಲಕ ಆರಂಭವಾಯಿತು. ’ರಾಗನಾಟ್ಯ’ , ’ಶ್ರೀ ಮಹಾ ಗಣಪತಿ ಸುರಪತಿ’, ’ಸಕಲ ಕಲಾದೇವಿ ಶಾರದೆ’, ’ಪಾಹಿಮಾನ್‌ರಾಜರಾಜೇಶ್ವರಿ’, ’ಓಂ ನಮಃ ಶಿವಾಯ, ಮಹಾದೇವ ಶಿವ ಶಂಭೋ’ ಮತ್ತು ’ಸಾಂಬ ಸದಾಶಿವ’, ’ಅರ್ಪುದ ಸಿರ್ಪುದೆ ಪೊನ್ನಮ್ಮ’, ’ನಾಗತಾ’ ಹಾಗೂ ’ತಿಲ್ಲಾನ’ ಹಾಡುಗಳ ಅರ್ಥವಂತಿಕೆಯನ್ನು ತಂಡದ ಕಲಾವಿದರು ತಮ್ಮ ಭರತನಾಟ್ಯದ ಮೂಲಕ ಹೆಚ್ಚಿಸಿದರು.


ಲಕ್ಷದೀಪೋತ್ಸವದ ಅಂಗವಾಗಿ ನೃತ್ಯ ಪ್ರದರ್ಶನ ನೀಡಲು ಬಂದಿದ್ದ ಈ ತಂಡದಲ್ಲಿ ಪ್ರಗತಿ, ಯಶಸ್ವಿನಿ, ಕಾವ್ಯ, ದೀಕ್ಷಾಉಡುಪ, ಪೂಜಾ, ಅನ್ವಿತಾ ಎನ್.ನಾಯಕ್, ಸಂಯಜ್ಞಾ, ಹೇಮಾ ಆರ್. ಸೇರಿದಂತೆ 8 ಜನ ನೃತ್ಯಕಲಾವಿದರಿದ್ದರು.


ಈ ತಂಡ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ’ಮಧುರ ಮಧುರವೀ ಮಂಜುಳಗಾನ’, ತೋಟಗಾರಿಕಾ ಇಲಾಖೆಯ ಕಾರ್ಯಕ್ರಮ ಮತ್ತು ಗುರುವಾಯೂರ್‌ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ನೃತ್ಯ ಪ್ರದರ್ಶನ ನೀಡಿದೆ.

ವರದಿ : ಲತಾ. ಎಂ. ಆರ್
ಚಿತ್ರ :ಚಂದನ

Related posts

Leave a Reply

Your email address will not be published. Required fields are marked *