Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ: ಅಲ್ಲಿದ್ದವು ಬಗೆಬಗೆ ವಿನ್ಯಾಸದ ಶಂಖಗಳು

ವಿವಿಧ ವಿನ್ಯಾಸಗಳ ಬಿಳಿಯ ಶಂಖಗಳು ಅಲ್ಲಿದ್ದವು. ಧರ್ಮಸ್ಥಳ ಲಕ್ಷದೀಪೋತ್ಸವದ ಇರುಳಿನಲ್ಲಿ ನೋಡುಗರನ್ನು ತನ್ನತ್ತ ಸೆಳೆಯುತ್ತಿದ್ದವು. ನೋಡುತ್ತಿದ್ದಂತೆಯೇ ಅವುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡಿಸುತ್ತಿದ್ದವು. ಆ ಕುತೂಹಲದೊಂದಿಗೆ ಅಲ್ಲಿಗೆ ಹೋದವರಿಗೆ ಆ ಕುರಿತ ವಿವಿಧ ವಿವರಗಳು ಲಭ್ಯವಾಗುತ್ತಿದ್ದವು.

ಕೇರಳದ ತ್ರಿಶೂರ್ ನಿಂದ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿದ ಇಬ್ಬರು ಈ ಶಂಖಗಳ ಮಾರಾಟದಲ್ಲಿ ನಿರತರಾಗಿದ್ದರು. ಕುತೂಹಲದೊಂದಿಗೆ ಬಂದು ತಿಳಿದುಕೊಂಡವರ ಸಂಖ್ಯೆಯೇನೋ ಅಧಿಕ. ಆದರೆ, ಅವರು ಅವುಗಳನ್ನು ಖರೀದಿಸುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಆ ವ್ಯಾಪಾರಿಗಳಲ್ಲಿ ಬೇಸರದ ಭಾವವಿತ್ತು.

ಮಲಯಾಳಂ ಮತ್ತು ಹಿಂದಿಯಲ್ಲಿ ಮಾತನಾಡುತ್ತಿದ್ದ ಅವರು ಶಂಖ ರೂಪಿಸುವ ವಿಧಾನಗಳ ಬಗ್ಗೆ ತಿಳಿಸಿದರು. ನೀರಿನ ಆಳದಿಂದ ಶಂಖ, ಸಾಲಿಗ್ರಾಮ ಮತ್ತು ಚಿಪ್ಪು ತೆಗೆಯುವುದು ಅತಿ ತ್ರಾಸದಾಯಕ ಕೆಲಸ ಎಂಬುದು ಅವರ ಅನುಭವದ ಮಾತು. ಬಂದವರೆಲ್ಲ ಅದಕ್ಕೆ?, ಇದಕ್ಕೆ ಎ? ಎಂದು ಕೇಳಿ ಚೌಕಾಸಿ ಮಾಡಿ ಏನೂ ಕೊಳ್ಳದೆ ಹೋಗುತ್ತಿದ್ದಾರೆ ಎಂದು ತಿಳಿಸಿದರು.

ಬಗೆ ಬಗೆಯ ಚಿಪ್ಪುಗಳು,ಪಂಚಮುಖಿ ಬಲಮುರಿ, ಕೃ? ಶಂಖ, ಅನಮುಳಿ,ಮುತ್ತಿನ ಚಿಪ್ಪುಗಳ ಸಂಗ್ರಹ ಅವರ ಲ್ಲಿತ್ತು. ಕೆಲವು ಶಂಖಗಳನ್ನು ಕ್ಯಾಲ್ಸಿಯಂ ಹಾಗೂ ರಾಸಾಯನಿಕ ವಸ್ತುಗಳ ವಿಶೇ? ಮಿಶ್ರಣದಿಂದ ರೂಪಿಸಲಾಗಿತ್ತು. ಜ್ಯೋತಿಷಿಗಳು ಬಳಸುವ ಕವಡೆಗಳೂ ಅಲ್ಲಿದ್ದವು. ವಿಶೇ? ಆಕ?ಣೆ ಎಂದರೆ ಸಾಲಿಗ್ರಾಮ ಕಲ್ಲು. ಕಪ್ಪಗೆ ಮೊಟ್ಟೆ ಆಕಾರದ ಈ ಕಲ್ಲು ತುಂಬಾ ಅಪರೂಪವಾಗಿ ಸಿಗುವಂಥದ್ದು. ಒಂದು ಕಲ್ಲಿನ ಬೆಲೆ ಸುಮಾರು 5000 ರೂಪಾಯಿ.

ವರದಿ :ತೇಜಸ್ಡಿನಿ ಆರ್ ಕೆ
ಚಿತ್ರ :ಸ್ವಾತಿ ಎಂ ಜಿ

Related posts

Leave a Reply

Your email address will not be published. Required fields are marked *