Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ: ದೇಶೀ ಉಪ್ಪಿನಕಾಯಿಯ ಪರವಾದ ಅಲೆ

ಅಲ್ಲಿ ಭೇಟಿ ನೀಡಿದವರೆಲ್ಲಾ ಉಪ್ಪಿನಕಾಯಿಯ ಸ್ಯಾಂಪಲ್ಲನ್ನು ಗಮನಿಸುತ್ತಿದ್ದರು. ಒಂದಷ್ಟುರುಚಿ ನೋಡಿ ಅದನ್ನು ಖರೀದಿಸುವುದಕ್ಕೆ ಮುಂದಾಗುತ್ತಿದ್ದರು. ರಾಸಾಯನಿಕಗಳ ಬಳಕೆಯಿಲ್ಲದೇ ಸಿದ್ಧಪಡಿಸಿದ ಈ ದೇಶೀ ಉಪ್ಪಿನಕಾಯಿಯ ಕಡೆಗೆ ದೌಡಾಯಿಸುತ್ತಿದ್ದರು.
ಶೀ ಖಾದ್ಯಕ್ಕೆ ಆದ್ಯತೆ ನೀಡಬೇಕಾದ ಅಗತ್ಯವನ್ನು ಮನಗಾಣಿಸುವ ಈ ದೃಶ್ಯ ಕಂಡುಬಂದದ್ದು ಲಕ್ಷದೀಪೋತ್ಸವದ ಮಳಿಗೆಯಲ್ಲಿ. ಮಂಗಳೂರಿನ ಕಂಕನಾಡಿಯ ಶ್ಯಾಮಲಾ ಶಣೈ ತಮ್ಮ ವ್ಯಾಪಾರ ವಹಿವಾಟಿನ ಮೂಲಕ ದೇಶೀ ಖಾದ್ಯಗಳ ಪರವಾದ ಅಲೆಯನ್ನು ಮೂಡಿಸಿದ್ದರು.


ಕಳೆದ 35 ವರ್ಷಗಳಿಂದ ಉಪ್ಪಿನಕಾಯಿ ವ್ಯಾಪಾರವನ್ನುನಡೆಸುತ್ತಿರುವ ಇವರು 14 ಬಗೆಯ ರುಚಿರುಚಿಯ ಉಪ್ಪಿನಕಾಯಿಗಳನ್ನುತಯಾರಿಸುತ್ತಾರೆ. ಇವುಗಳನ್ನು ತಯಾರಿಸಲು ಪ್ರಾರಂಭಿಸಿದ ದಿನದಿಂದಲೂ ಒಂದೇ ದರವನ್ನು ನಿಗದಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಉಪ್ಪಿನಕಾಯಿಯನ್ನುಕೆಜಿಗೆ 200 ರೂ.ಗಳಂತೆ ಮಾರುತ್ತಾರೆ.
ಇವರ ಈ ಜೀವನ ಪ್ರಾರಂಭವಾದದ್ದು ಹಪ್ಪಳ ತಯಾರಿಸುವುದರಿಂದ. ಈಗ ಸಂಡಿಗೆ, ಉಪ್ಪಿನಕಾಯಿ, ಸಾಂಬಾರ್ ಪುಡಿ, ಕಷಾಯದ ಪುಡಿ ಹಾಗೂ ಆರೋಗ್ಯಕರ ಪಾನೀಯಗಳನ್ನು ತಯಾರಿಸುತ್ತಾರೆ. ಈ ಪಾನೀಯಗಳೂ ಸಹ ಯಾವುದೇ ರಾಸಾಯನಿಕ ಮಿಶ್ರಿತವಲ್ಲ. ಜೇನು, ಸಕ್ಕರೆ, ನನ್ನಾರೆ ಬೇರನ್ನು ಸೇರಿಸಿ ಪಾನೀಯಗಳನ್ನು ತಯಾರಿಸುತ್ತಾರೆ. ಇವುಗಳೂ ಇಲ್ಲಿ ಮಾರಾಟಕ್ಕೆ ಲಭ್ಯವಿದ್ದವು.


ಇವರ ಪತಿ ಶ್ರೀನಿವಾಸ ಶಣೈ. ಇವರಿಗೆಇಬ್ಬರು ಹೆಣ್ಣು ಮಕ್ಕಳು. ಒಬ್ಬ ಮಗಳ ಇಬ್ಬರು ಗಂಡು ಮಕ್ಕಳನ್ನು ಇವರೇ ಓದಿಸುತ್ತಿದ್ದಾರೆ. ಒಬ್ಬಎಂಟನೆಯ ತರಗತಿ, ಇನ್ನೊಬ್ಬ ಒಂಭತ್ತನೆಯ ತರಗತಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಮ್ಮ ಮೊಮ್ಮಕ್ಕಳನ್ನು ಓದಿಸುತ್ತಿದ್ದಾರೆ. ತಮ್ಮ ಸಂಸಾರವೊಂದೇ ಅಲ್ಲದೆ, ತಮ್ಮ ಮಗಳ, ಮೊಮ್ಮಕ್ಕಳ ಜೀವನವನ್ನೂ ನಡೆಸಿಕೊಂಡು ಹೋಗುತ್ತಿದ್ದಾರೆ. ಐದು ಜನರ ಜೀವನ ಉಪ್ಪಿನಕಾಯಿ ವ್ಯಾಪಾರದಿಂದ ಸಾಗುತ್ತಿದೆ.

ಈಗ ಇವರಿಗೆ 60ವರ್ಷ ವಯಸ್ಸು. ಇಂತಹಉತ್ಸವ, ಜಾತ್ರೆಗಳಲ್ಲಿ ಅಂಗಡಿಯನ್ನಿಟ್ಟುಕೊಂಡು ರುಚಿರುಚಿಯಾದ ಉಪ್ಪಿನಕಾಯಿಗಳನ್ನು ಮಾರುತ್ತಾರೆ. ಪ್ರಿಯಾ ಹೋಮ್ ಪ್ರೊಡಕ್ಟ್‌ ಎನ್ನುವುದು ಬ್ರಾಂಡ್ ಹೆಸರು.

ವರದಿ: ಸುವರ್ಣಾ ಹೆಗಡೆ
ಚಿತ್ರಗಳು: ಅಭಿರಾಮ್ ಶರ್ಮಾ

Related posts

Leave a Reply

Your email address will not be published. Required fields are marked *