Header Ads
Header Ads
Breaking News

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ : ಸಮಷ್ಟಿ ತತ್ವ ಸಂವಹಿಸಿದ ಸಮೂಹ ನೃತ್ಯ

ಸಂಗೀತದ ಬೆಂಬಲದೊಂದಿಗೆಪ್ರಭಾವಿಸುವ ನಾಟ್ಯಕಲೆವ್ಯಕ್ತಿಗತ ಯಶಸ್ಸನ್ನು ಕಾಣಿಸುತ್ತಲೇಆತ್ಮೋನ್ನತಿ ಗಳಿಸಿಕೊಳ್ಳುವ ಅಪೂರ್ವ ಮಾರ್ಗವೂ ಹೌದು. ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಇಂಥ ಮೌಲ್ಯಾತ್ಮಕ ಅಭಿವ್ಯಕ್ತಿಗೆ ಸಾಕ್ಷಿಯಾಯಿತು.ಅಮೃತವರ್ಷಿಣಿ ಸಭಾಭವನದಲ್ಲಿಮಂಗಳೂರಿನ ’ದೃಷ್ಟಿ’ ನೃತ್ಯ ಕಲಾತಂಡ ಪ್ರಸ್ತುತಪಡಿಸಿದಭರತನಾಟ್ಯಸಮೂಹ ನೃತ್ಯವನ್ನು ಇಂಥ ಪ್ರಭಾವ ನೆಲೆಗೊಳಿಸುವಲ್ಲಿ ಯಶಸ್ವಿಯಾಯಿತು. ವಿಘ್ನ ವಿನಾಶಕನಾದ ಗಣಪತಿ ಹಾಗೂ ನಾಟ್ಯದ ಒಡೆಯನಾದ ಶಂಕರನನ್ನು ಸ್ಮರಿಸುವ ಶ್ಲೋಕದೊಂದಿಗೆ ಪ್ರಾರಂಭಗೊಂಡ ನೃತ್ಯವು ಕಾಲಭೈರವ ಅಷ್ಟಕಂ, ಜತಿಸ್ವರ, ಯತಿಯಿಂದ ಮುಂದುವರೆದು ಜಗನ್ಮೋಹನ ಕೃಷ್ಣ, ತಿಲ್ಲಾನದಲ್ಲಿ ಸಮಾರೋಪಗೊಂಡಿತು.
ಶಿವನ ರೂಪಗಳು ಹಲವು. ಸಂದರ್ಭೋಚಿತವಾಗಿ ನಾನಾ ರೂಪಗಳಿಂದ ಕಾಣಿಸಿಕೊಳ್ಳುವ ಶಿವನು ಒಮ್ಮೆ ಉಗ್ರ ಸ್ವರೂಪಿಯಾದರೆ ಕೆಲವೊಮ್ಮೆ ಶಾಂತಸ್ವರೂಪಿ. ಇಲ್ಲಿ ರುದ್ರ ಭಯಂಕರ ರೂಪಿನಲ್ಲಿ ಕಾಣುವಂತಹ ಕಾಲಭೈರವನ ವರ್ಣನೆಯಿದೆ. ನಮ್ಮೆಲ್ಲ ಅರಿಷಡ್ವರ್ಗಗಳನ್ನುತೊಡೆದುಹಾಕುತ್ತಾ ನಮ್ಮೆಲ್ಲರನ್ನು ಪೊರೆಯುತ್ತಾನೆ ಎಂಬತಾತ್ಪರ್ಯದ ಭಕ್ತಿ ಸ್ವರೂಪವು ಪ್ರಖ್ಯಾತ ಅಂತರಾಷ್ಟ್ರೀಯ ಕಲಾವಿದ ಲೀಲಾ ಸಾಮ್ಸನ್ ಅವರ ನೃತ್ಯ ಸಂಯೋಜನೆಯಲ್ಲಿ ಸೊಗಸಾಗಿ ಮೂಡಿಬಂತು.
ಶೀಜಿತ್ ಕೃಷ್ಣರವರ ನೃತ್ಯ ಸಂಯೋಜನೆ ಹಾಗೂರಾಜಾರಾಮ್ ಸಂಗೀತಸಂಯೋಜನೆಯಲ್ಲಿ ನಿರ್ಮಲಾ ನಾಗರಾಜೇಂದ್ರರ ಕಲ್ಪನೆಯಂತೆ ನರ್ತಿಸುವ ಶಿವನ ವಿವಿಧ ಲೀಲೆಯ ಸಂದರ್ಭದಲ್ಲಿ ೫ ಯತಿಗಳು ಕಂಡುಬಂದದ್ದನ್ನು ಸಾಹಿತ್ಯದ ಮೂಲಕ ಬಿಂಬಿಸುವ ಪ್ರಯತ್ನವು ’ಆನಂದ ತಾಂಡವ’ ನೃತ್ಯದಲ್ಲಿನೆರೆದಿದ್ದವರ ಗಮನಸೆಳೆಯಿತು. ಭರತನಾಟ್ಯ ಸಂಪ್ರದಾಯದ ಕೊನೆಯ ನೃತ್ಯ ತಿಲ್ಲಾನದ ವಿವಿಧ ತಾಳ ಲಯ ವಿನ್ಯಾಸದಿಂದ ಕೂಡಿದ ಕ್ಷಿಪ್ರತುದಿಯ ನೃತ್ಯದ ಬಳಿಕ ಸರ್ವೇ ಸಂತು ಸುಖೀನಃ ಎನ್ನುವ ಸಾಹಿತ್ಯದೊಂದಿಗೆ ದೃಷ್ಟಿ ಕಲಾತಂಡ ಕಾರ್ಯಕ್ರಮವನ್ನು ಸುಖಸಂಪನ್ನಗೊಳಿಸಿದರು. ಕಾರ್ಯಕ್ರಮವನ್ನು ಸುಮಂಗಲ ರತ್ನಾಕರ ನಿರೂಪಿಸಿದರು. ದೃಷ್ಟಿ ನೃತ್ಯ ಕಲಾತಂಡವು ಶ್ರೀಮತಿ ವಾಣೀರಾಜ್‌ಗೋಪಾಲ್ ಅವರ ಕನಸಿನ ಕೂಸು. ಸಮೂಹ ನೃತ್ಯ ಪ್ರದರ್ಶನಕ್ಕಾಗಿ ಮಾಡಲ್ಪಟ್ಟ ತಂಡದಲ್ಲಿ ಪ್ರಸ್ತುತ 6 ಉತ್ಸಾಹಿ ಕಲಾವಿದೆಯರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪರಿಶುದ್ಧ ಶಾಸ್ತ್ರೀಯ ನೃತ್ಯವನ್ನು ಸೌಂದರ್ಯ ಪ್ರಜ್ಞೆಯೊಂದಿಗೆ ಭರತನಾಟ್ಯ ಶೈಲಿಯಲ್ಲಿ ನೃತ್ಯ ಪ್ರದರ್ಶನವನ್ನು ನೀಡುವ ಧ್ಯೇಯದೊಂದಿಗೆ ಕಳೆದ ಒಂದು ವರ್ಷದ ಹಿಂದೆ ರೂಪಿತವಾದಂತಹ ತಂಡ ಈಗಾಗಲೇ ಹತ್ತು ಹಲವು ಕಾರ್ಯಕ್ರಮಗಳನ್ನು ನಾಡಿನ ಪ್ರತಿಷ್ಠಿತ ವೇದಿಕೆಗಳಲ್ಲಿ ನೀಡಿ ಜನಮೆಚ್ಚುಗೆಯನ್ನು ಪಡೆದುಕೊಂಡಿದೆ.

ಶ್ರೀಮತಿ ವಾಣಿರಾಜ್‌ಗೋಪಾಲ್‌ಪದ್ಮನಾಭ್ ತಂತ್ರಿ ಮತ್ತು ಕಮಲ ಪದ್ಮನಾಭ್ ತಂತ್ರಿಯವರ ಸುಪುತ್ರಿಯಾಗಿದ್ದು ಎಳವೆಯಿಂದಲೇ ಭರತನಾಟ್ಯ ಕಲೆಯೆಡೆಗೆ ಆಕರ್ಷಿತರಾದವರು. ಮಗಳ ಕಲೆಯನ್ನು ಗುರುತಿಸಿ ಪ್ರಖ್ಯಾತ ನೃತ್ಯಗುರು ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್‍ಯ ಉಳ್ಳಾಲ ಮೋಹನ್‌ಕುಮಾರ್ ಇವರ ಗರಡಿಯಲ್ಲಿ ನೃತ್ಯಕಲಾ ಶಿಕ್ಷಣವನ್ನು ಕೊಡಿಸಿದರು. sಅನೇಕ ನೃತ್ಯ ರೂಪಕಗಳನ್ನು ನಿರ್ದೇಶನ ಮಾಡಿರುವ ಇವರ ಸಾಧನೆಗೆ ಭರತಮಣಿ ಪ್ರಶಸ್ತಿ ಬಿರುದು ಲಭಿಸಿದೆ. ಪತಿ ರಾಜ್‌ಗೊಪಾಲ್ ಹಾಗೂ ಮಗಳು ಸಂಜನಾ ರಾಜ್‌ಗೋಪಾಲ್ ಪ್ರೋತ್ಸಾಹದೊಂದಿಗೆ ಇವರ ಕಲಾತಂಡವು ಮುಂದುವರೆಯುತ್ತಿದೆ.

 

Related posts

Leave a Reply

Your email address will not be published. Required fields are marked *